ಭಾರತ vs ದ.ಆಫ್ರಿಕಾ ODI: ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆ

ನ್ಯೂಜಿಲೆಂಡ್ ವಿರುದ್ದದ ಪ್ರವಾಸವನ್ನು ಟೀಮ್ ಇಂಡಿಯಾ ಮುಗಿಸಿದೆ. ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ಕ್ಲೀಸ್‌ಸ್ವೀಪ್ ಅಂತರದಿಂದ ಸೋತು ಮುಖಭಂಗ ಅನುಭವಿಸಿದೆ. ಈಗ ಮತ್ತೊಂದು ಸರಣಿಗೆ ಟೀಮ್ ಇಂಡಿಯಾ ಸಿದ್ಧವಾಗಿದೆ.
ಇದೇ ತಿಂಗಳ 12ನೇ ತಾರೀಕಿನಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಈಗಾಗಲೆ ಪ್ರಕಟಿಸಲಾಗಿದೆ. ಆದರೆ ಟೀಮ್ ಇಂಡಿಯಾ ತಂಡವನ್ನು ಇನ್ನಷ್ಟೇ ಹೆಸರಿಸಬೇಕಾಗಿದೆ.
5ನೇ ತಾರೀಕಿನಂದು ಟೀಮ್ ಇಂಡಿಯಾ ತಂಡ ಪ್ರಕಟವಾಗುವ ಸಾಧ್ಯತೆಯಿದೆ. ಹೀಗಾಗಿ ಯಾರೆಲ್ಲಾ ಟೀಮ್ ಇಂಡಿಯಾದಲ್ಲು ಸ್ಥಾನವನ್ನು ಪಡೆಯಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಹಾಗಾಗಿ ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಆಡಲಿದ್ದಾರೆ ಎಂಬುದನ್ನು ಮುಂದೆ ನೋಡೋಣ.

ಕಿವೀಸ್ ಸರಣಿಯ ಪ್ರದರ್ಶನ ಪರಿಣಾಮ
ಟೀಮ್ ಇಂಡಿಯಾ ಆಟಗಾರರು ಕೀವಿಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನಿಡುವಲ್ಲಿ ವಿಫಲರಾದರು. ಹೀಗಾಗಿ ಇದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಕೆಲ ಆಟಗಾರರು ತಂಡದಿಂದ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯೆತೆಯಿದೆ.

ರೋಹಿತ್ ಶರ್ಮಾ ಬಗ್ಗೆ ಖಚಿತ ಮಾಹಿತಿಯಿಲ್ಲ
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮೀನಖಂಡ ಸೆಳೆತಕ್ಕೆ ಒಳಗಾಗಿ ವಿಶ್ರಾತಿಯಲ್ಲಿರುವ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಶರ್ಮಾ ಆಡಲಿದ್ದಾರ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಶಿಖರ್ ಧವನ್ ಮತ್ತೆ ತಂಡಕ್ಕೆ?
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಶಿಖರ್ ಧವನ್ ಭುಜದ ಗಾಯಕ್ಕೊಳಗಾಗಿದ್ದ ಶಿಖರ್ ಧವನ್ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ರಾಹುಲ್‌ಗೆ ಫಿಕ್ಸ್ ವಿಕೆಟ್ ಕೀಪಿಂಗ್
ಸತತ ವೈಫಲ್ಯವನ್ನು ಅನುಭವಿಸುತ್ತಿರುವ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾದರೂ ಹೆಚ್ಚುವರಿ ಕೀಪರ್ ಆಗಿರಲಿದ್ದಾರೆ. ಈ ಸರಣಿಯಲ್ಲೂ ಕೆ.ಎಲ್ ರಾಹುಲ್ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯಾ ಕಮ್‌ಬ್ಯಾಕ್
ಕಳೆದ ಕೆಲ ತಿಂಗಳಿನಿಂದ ಗಾಯಗೊಂಡು ತಮಡದಿಂದ ದೂರವಾಗಿರುವ ಹಾರ್ದಿಕ್ ಪಾಂಡ್ಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯಾ ಸಂಪೂರ್ಣ ಚೇತರಿಕೆಯನ್ನು ಕಂಡಿದ್ದಾರೆ. ಹೀಗಾಗಿ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಂಡ್ಯಾ ಕಣಕ್ಕಿಳಿಯುವುದು ಖಚಿತ. ಹಾರ್ದಿಕ್ ಪಾಂಡ್ಯಾಗಾಗಿ ಶಿವಮ್ ದುಬೆ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.

ಕೇದಾರ್ ಜಾಧವ್ ಮೇಲೆ ತೂಗುಗತ್ತಿ?
ಅನುಭವಿ ಆಟಗಾರ ಕೇದಾರ್ ಜಾಧವ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಇತ್ತೀಚಿನ ಪಂದ್ಯಗಳಲ್ಲಿ ಕೇದಾರ್ ಜಾದಾವ್ ಸರಾಸರಿ ಆಟವನ್ನು ಪ್ರದರ್ಶಿಸಿದರೂ ಜಾಧವ್ ಫಿಟ್‌ನೆಸ್ ಹಾಗೂ ಮುಂದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಜಾಧವ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. ಜಾಧವ್ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವಕಾಶವನ್ನು ಗಿಟ್ಟಿಸಿಕೊಂಡರೆ ಅಚ್ಚರಿಯಿಲ್ಲ.

ಟೀಮ್ ಇಂಡಿಯಾ ಸಂಭಾವ್ಯ ತಂಡ
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್, ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಜಸ್ಪ್ರೀತ್ ಬೂಮ್ರಾ, ಶಾರ್ದುಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications