IND vs SA ODI: ಏಕದಿನ ಸರಣಿ ನಡೆಯುವುದು ಯಾವಗ? ಎಲ್ಲಿ? ಎಷ್ಟು ಗಂಟೆಗೆ? ನೇರಪ್ರಸಾರದ ಮಾಹಿತಿ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಸ್ಮರಣೀಯವಾಗಿಸಿಕೊಂಡಿದೆ. ಈ ವೇಳೆ ದಕ್ಷಿಣ ಆಫ್ರಿಕಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈಗ ಉಭಯ ತಂಡಗಳು ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಸರಣಿ ನಡೆಯುವುದು ಯಾವಾಗ? ಇಲ್ಲಿ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ ಏಕದಿನ ಸರಣಿಯಲ್ಲಿ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡವನ್ನು ಸೇರಿಕೊಂಡಿದ್ದಾರೆ. ಅಭಿಮಾನಿಗಳ ಕಣ್ಣು ಈ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಏಕದಿನ ಸರಣಿಯಲ್ಲಿ ರಿಷಭ್ ಪಂತ್ ತಂಡದ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರುತುರಾಜ್ ಗಾಯಕ್ವಾಡ್ ತಂಡಕ್ಕೆ ಮರಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸೂಪರ್ ಸ್ಟಾರ್ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸನ್ನು ಈ ಆಟಗಾರರು ಹೊಂದಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರು ಅಮೋಘ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ಆಸೀಸ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಆಟಗಾರರ ಪ್ರಶಸ್ತಿ ಪಡೆದಿದ್ದರು. ಹೀಗಾಗಿ ತವರಿನಲ್ಲಿ ಅಭಿಮಾನಿಗಳ ಮುಂದೆ ಅಬ್ಬರಿಸಲು ರೋಹಿತ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ವೇಳಾಪಟ್ಟಿ
| ಪಂದ್ಯ | ದಿನಾಂಕ | ಸ್ಥಳ | ಸಮಯ |
|---|---|---|---|
| ಮೊದಲ ಪಂದ್ಯ | ನ.30 | ರಾಂಚಿ | ಮಧ್ಯಾಹ್ನ 1.30ಕ್ಕೆ |
| ಎರಡನೇ ಪಂದ್ಯ | ಡಿ.3 | ರಾಯ್‌ಪುರ್ | ಮಧ್ಯಾಹ್ನ 1.30ಕ್ಕೆ |
| ಮೂರನೇ ಪಂದ್ಯ | ಡಿ.6 | ವಿಶಾಖಪಟ್ಟಣಂ | ಮಧ್ಯಾಹ್ನ 1.30ಕ್ಕೆ |
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ನೇರ ಪ್ರಸಾರ ಎಲ್ಲಿ ಆಗುತ್ತದೆ?
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ವಾಹಿನಿಯ ಮೂಲಕ ಟಿವಿಯಲ್ಲಿ ಪಂದ್ಯವನ್ನು ನೇರ ಪ್ರಸಾರದಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ ಈ ಪಂದ್ಯಗಳ ನೇರ ಪ್ರಸಾರವನ್ನು ನೋಡಬಹುದಾಗಿದೆ.
ಏಕದಿನ ಸರಣಿಗೆ ಭಾರತ ತಂಡ
| ಕ್ರ. ಸಂಖ್ಯೆ | ಆಟಗಾರರ ಹೆಸರು |
|---|---|
| 1 | ಕೆಎಲ್ ರಾಹುಲ್ (ನಾಯಕ) |
| 2 | ರೋಹಿತ್ ಶರ್ಮಾ |
| 3 | ಯಶಸ್ವಿ ಜೈಸ್ವಾಲ್ |
| 4 | ವಿರಾಟ್ ಕೊಹ್ಲಿ |
| 5 | ರುತುರಾಜ್ ಗಾಯಕ್ವಾಡ್ |
| 6 | ತಿಲಕ್ ವರ್ಮಾ |
| 7 | ರಿಷಭ್ ಪಂತ್ |
| 8 | ಧ್ರುವ್ ಜುರೇಲ್ |
| 9 | ವಾಶಿಂಗ್ಟನ್ ಸುಂದರ್ |
| 10 | ರವೀಂದ್ರ ಜಡೇಜಾ |
| 11 | ನಿತೀಶ್ ಕುಮಾರ್ ರೆಡ್ಡಿ |
| 12 | ಕುಲ್‌ದೀಪ್ ಯಾದವ್ |
| 13 | ಹರ್ಷಿತ್ ರಾಣಾ |
| 14 | ಪ್ರಸಿದ್ಧ್ ಕೃಷ್ಣ |
| 15 | ಅರ್ಷದೀಪ್ ಸಿಂಗ್ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications