Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್, ದ್ರಾವಿಡ್, ಗಂಗೂಲಿ ದಾಖಲೆ ಚೇಸ್ ಮಾಡುತ್ತಿರುವ ಕೊಹ್ಲಿ

India vs South Africa ODI Series: Virat Kohli looks to overtake Tendulkar, Dravid, Ganguly

ಬೆಂಗಳೂರು, ಮಾರ್ಚ್ 10: ಟಿ20 ಕಾಲದಲ್ಲೂ ಏಕದಿನ ಕ್ರಿಕೆಟ್ ಸರಣಿ ತನ್ನ ಜೋಶ್ ಉಳಿಸಿಕೊಳ್ಳಲಿದೆ ಎಂಬ ಆಸೆ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಜೊತೆಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ತನ್ನ ಲಯ ಕಂಡುಕೊಳ್ಳಬಹುದು ಎಂಬುದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

ನ್ಯೂಜಿಲೆಂಡ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೊಹ್ಲಿ ಒಂದು ಅರ್ಧಶತಕ ಮಾತ್ರ ಗಳಿಸಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರನ್ ಹೊಳೆ ಹರಿಸುತ್ತಾರೆ ಎಂಬ ನಂಬಿಕೆಯಿದೆ.

ಧರ್ಮಶಾಲದಲ್ಲಿ ಮಾರ್ಚ್ 12ರಂದು ಆರಂಭವಾಗಲಿದೆ. ಕೊಹ್ಲಿ ವೈಯಕ್ತಿಕವಾಗಿ ಸಚಿನ್, ದ್ರಾವಿಡ್, ಗಂಗೂಲಿ ದಾಖಲೆ ಚೇಸ್ ಮಾಡುತ್ತಿರುವ ಕೊಹ್ಲಿ ಯಾವೆಲ್ಲ ದಾಖಲೆ ಮುರಿಯಬಹುದು ಎಂಬುದನ್ನು ಮುಂದೆ ಓದಿ...

ದಕ್ಷಿಣ ಆಫ್ರಿಕಾ ವಿರುದ್ಧ 27 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 64.35 ರನ್ ಸರಾಸರಿಯಂತೆ ಕೊಹ್ಲಿ 1287ರನ್ ಗಳಿಸಿದ್ದಾರೆ. ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಕೊಹ್ಲಿಗಿಂತ ಮುಂದಿದ್ದಾರೆ. ಗಂಗೂಲಿ 1313ರನ್ (29 ಪಂದ್ಯ, 50.50ರನ್ ಸರಾಸರಿ), ದ್ರಾವಿಡ್ 1309ರನ್ (36 ಪಂದ್ಯ, 39.66 ರನ್ ಸರಾಸರಿ) ಗಳಿಸಿದ್ದಾರೆ. ಆದರೆ ಇವರಿಬ್ಬರಿಗಿಂತ ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸಿದ್ದಾರೆ. 2001ರನ್ (57 ಪಂದ್ಯ, 35.73ರನ್ ಸರಾಸರಿ) ಗಳಿಸಿದ್ದಾರೆ.

ದ್ರಾವಿಡ್, ಗಂಗೂಲಿ ದಾಖಲೆ

ತೆಂಡೂಲ್ಕರ್ ಶತಕಗಳ ದಾಖಲೆ

ತೆಂಡೂಲ್ಕರ್ ಶತಕಗಳ ದಾಖಲೆ

ಸಚಿನ್ ತೆಂಡೂಲ್ಕರ್ ಅವರ ಅತ್ಯಧಿಕ ಶತಕಗಳ ದಾಖಲೆಯ ಹಿಂದೆ ಬಿದ್ದಿರುವ ವಿರಾಟ್ ಕೊಹ್ಲಿ ಅವರು ಸದ್ಯ 43 ಏಕದಿನ ಶತಕ ಗಳಿಸಿದ್ದಾರೆ. ತೆಂಡೂಲ್ಕರ್ 49 ಶತಕ ಬಾರಿಸಿದ್ದಾರೆ. ಈ ಸರಣಿ ಮೂರು ಶತಕ ಗಳಿಸುವ ಅವಕಾಶವನ್ನು ಕೊಹ್ಲಿ ಪಡೆದುಕೊಂಡಿದ್ದಾರೆ. ಆದರೆ, ಆಗಸ್ಟ್ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದ ಕೊಹ್ಲಿ ನಂತರ ಒಡಿಐನಲ್ಲಿ ನೂರರ ಗಡಿ ದಾಟಿಲ್ಲ.

ಇದಲ್ಲದೆ, ದಕ್ಷಿಣ ಆಫ್ರಿಕಾ ವಿರುದ್ಧ ತೆಂಡೂಲ್ಕರ್ 5 ಶತಕ ಗಳಿಸಿದ್ದರೆ, ಕೊಹ್ಲಿ 4 ಶತಕ ಬಾರಿಸಿದ್ದಾರೆ. ಈ ದಾಖಲೆಯನ್ನಾದರೂ ಮುರಿಯುತ್ತಾರೋ ಕಾದು ನೋಡಬೇಕಿದೆ.

ಕುಲ್ಚಾ ಗ್ಯಾಂಗಿನ ಗುರಿ ಏನಿದೆ?

ಕುಲ್ಚಾ ಗ್ಯಾಂಗಿನ ಗುರಿ ಏನಿದೆ?

ಕುಲದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ 7 ಪಂದ್ಯಗಳಿಂದ 18 ಹಾಗೂ 20 ವಿಕೆಟ್ ಗಳಿಸಿದ್ದಾರೆ. ಆದರೆ ದ್ವಿಪಕ್ಷೀಯ ಸರಣಿಯಲ್ಲಿ ಶಾನ್ ಪೊಲ್ಲಾಕ್ 33 ಪಂದ್ಯಗಳಿಂದ 48 ವಿಕೆಟ್, ಅನಿಲ್ ಕುಂಬ್ಳೆ 40 ಪಂದ್ಯಗಳಿಂದ 46 ವಿಕೆಟ್ ಗಳಿಸಿದ ದಾಖಲೆ ಹೊಂದಿದ್ದಾರೆ.

ಪರಸ್ಪರ ದಾಖಲೆ

ಪರಸ್ಪರ ದಾಖಲೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 84 ಏಕದಿನ ಕ್ರಿಕೆಟ್ ಪಂದ್ಯಗಳಾಗಿದ್ದು, ದಕ್ಷಿಣ ಆಫ್ರಿಕಾ 46 ಜಯ ಹಾಗೂ 35 ಗೆಲುವು ಭಾರತಕ್ಕೆ ದಕ್ಕಿದೆ, 3 ಪಂದ್ಯಗಳು ಯಾವುದೇ ಫಲಿತಾಂಶ ಬಂದಿಲ್ಲ.

Story first published: Tuesday, March 10, 2020, 18:25 [IST]
Other articles published on Mar 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+