ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!

ವಿಶಾಖಪಟ್ಟಣ, ಅಕ್ಟೋಬರ್ 2: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಜೋಡಿ ಅಪರೂಪದ ದಾಖಲೆಗೆ ಕಾರಣವಾಗಿದೆ. ಭಾರತ ನೆಲದಲ್ಲಿ ಟೆಸ್ಟ್‌ನಲ್ಲಿ ಆರಂಭಿಕರಾಗಿ ಮೊದಲ ಪಂದ್ಯವಾಡುತ್ತಿರುವ ಜೋಡಿಯಾಗಿ ಶರ್ಮಾ-ಅಗರ್ವಾಲ್ ಗುರುತಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿನ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್-ಮಯಾಂಕ್ ಜೋಡಿ ಅಪರೂಪದ ಟೆಸ್ಟ್ ದಾಖಲೆಗೆ ಕಾರಣವಾಯಿತು.
ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಆರಂಭಿಕರಾಗಿ ಆಡಿದ ಚೊಚ್ಚಲ ಪಂದ್ಯದಲ್ಲೇ ಜೋಡಿ ಉತ್ತಮ ಆಟ ನೀಡಿದೆ. ಅಂದ್ಹಾಗೆ ರೋಹಿತ್-ಮಯಾಂಕ್ ಮುರಿದಿದ್ದು ಸುಮಾರು 47 ವರ್ಷಗಳ ಹಿಂದಿನ ಟೆಸ್ಟ್ ದಾಖಲೆ!.

47 ವರ್ಷಗಳ ಹಿಂದಿನ ದಾಖಲೆ
ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಜೋಡಿಯಾಗಿ ಹಿಟ್‌ಮ್ಯಾನ್ ರೋಹಿತ್-ಮಯಾಂಕ್ ಗುರುತಿಸಿಕೊಳ್ಳುವ ಮೂಲಕ 47 ವರ್ಷಗಳ ಹಿಂದಿನ ದಾಖಲೆ ಮುರಿದಂತಾಗಿದೆ. ಈ ದಾಖಲೆ ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್ ಮತ್ತು ರಾಮ್‌ನಾಥ್ ಪಾರ್ಕರ್ ಹೆಸರಿನಲ್ಲಿತ್ತು.

ಪಾರ್ಕರ್ ಪಾದಾರ್ಪಣೆ
47 ವರ್ಷಗಳಿಗೆ ಹಿಂದೆ ಅಂದರೆ 1972ರಲ್ಲಿ ದೆಹಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ರಾಮ್‌ನಾಥ್ ಪಾರ್ಕರ್ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಈ ವೇಳೆ ಪಾರ್ಕರ್ ಟೆಸ್ಟ್ ಪಾದಾರ್ಪಣೆ ಪಂದ್ಯವನ್ನಾಡಿದ್ದರೆ, ಗವಾಸ್ಕರ್ ಭಾರತದಲ್ಲಿ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು.

ರೋಹಿತ್‌ಗೆ ಚೊಚ್ಚಲ ಅವಕಾಶ
ನಿಯಮಿತ ಕ್ರಿಕೆಟ್ ಮಾದರಿಗಳಲ್ಲಿ ಆರಂಭಿಕರಾಗಿ ಇಳಿಯುತ್ತಿದ್ದ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್‌ನಲ್ಲಿ ಆರಂಭಿಕರಾಗಿ ಇಳಿದಿದ್ದರು. ಈ ಮೊದಲು ಆರಂಭಿಕರಾಗಿ ಬರುತ್ತಿದ್ದ ಕೆಎಲ್ ರಾಹುಲ್ ಬದಲಿಗೆ ಶರ್ಮಾ ಅವರನ್ನು ತರಲಾಗಿತ್ತು.

ಉತ್ತಮ ಆರಂಭಿಕ ಜೊತೆಯಾಟ
ಭಾರತದಲ್ಲಿ ಆರಂಭಿಕರಾಗಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ರೋಹಿತ್-ಮಯಾಂಕ್ ಜೋಡಿ ಉತ್ತಮ ಜೊತೆಯಾಟ ನೀಡಿತು. 59 ಓವರ್ ಮುಕ್ತಾಯಕ್ಕೆ ಭಾರತ 202 ರನ್ ಮಾಡಿತ್ತು. ರೋಹಿತ್ 115, ಮಯಾಂಕ್ 84 ರನ್‌ನೊಂದಿಗೆ ಕ್ರೀಸ್‌ನಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications