ಭಾರತ vs ದಕ್ಷಿಣ ಆಫ್ರಿಕಾ: ದ್ವಿಪಕ್ಷೀಯ ಟೆಸ್ಟ್‌ನಲ್ಲಿ ರೋಹಿತ್ ವಿಶೇಷ ದಾಖಲೆ

ರಾಂಚಿ, ಅಕ್ಟೋಬರ್ 22: ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿನ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಅದ್ಭುತ ಫಾರ್ಮ್ ತೋರಿಕೊಂಡ ರೋಹಿತ್ ಶರ್ಮಾ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನೂ ಬಾಚಿಕೊಂಡರು.
ರೋಹಿತ್ ಶರ್ಮಾ ದ್ವಿಶತಕ, ಅಜಿಂಕ್ಯ ರಹಾನೆ ಶತಕದ ನೆರವಿನೊಂದಿಗೆ ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್ ಸಹಿತ 202 ರನ್ ಗೆಲುವನ್ನಾಚರಿಸಿತು. ಅಲ್ಲದೆ ಕೊಹ್ಲಿ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0ಯ ಜಯ ಸಾಧಿಸಿದೆ.
ಆರಂಭಿಕರಾಗಿ ಚೊಚ್ಚಲ ಟೆಸ್ಟ್ ಸರಣಿ ಆಡಿದ ರೋಹಿತ್ ಶರ್ಮಾ ವಿಶೇಷ ದಾಖಲೆಯನ್ನೂ ಬರೆದಿದ್ದಾರೆ.

ಹೊಸ ಮೈಲಿಗಲ್ಲು
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 176+127+14+212 ರನ್ ಸೇರಿ ರೋಹಿತ್ ಒಟ್ಟಿಗೆ 529 ರನ್ ಬಾರಿಸಿದ್ದಾರೆ. ಎರಡು ಶತಕ, ಟೆಸ್ಟ್ ಚೊಚ್ಚಲ ದ್ವಿಶತಕ ಪೂರೈಸಿದ್ದಾರೆ. ಅದ್ಭುತ ಬ್ಯಾಟಿಂಗ್‌ಗಾಗಿ ರೋಹಿತ್ ಇತ್ತಂಡಗಳ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ದಾಖಲೆಯ ಸಮೀಪಕ್ಕೆ ಬಂದಿದ್ದ ಕ್ಯಾಲೀಸ್
ಇತ್ತಂಡಗಳ ಟೆಸ್ಟ್ ದ್ವಿಪಕ್ಷೀಯ ಸರಣಿಯ 27 ವರ್ಷಗಳ ಇತಿಹಾಸದಲ್ಲಿ ರೋಹಿತ್ 500ಕ್ಕೂ ಹೆಚ್ಚು ರನ್ ಬಾರಿಸಿ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಸಾಧನೆಯ ಸಮೀಪಕ್ಕೆ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಜಾಕ್ ಕ್ಯಾಲೀಸ್ ಬಂದಿದ್ದರಷ್ಟೇ.

ಮೊಹಮ್ಮದ್ ಅಝರುದ್ದೀನ್
2010/11ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲೀಸ್ ಭಾರತದ ವಿರುದ್ಧ 498 ರನ್ ಬಾರಿಸಿದ್ದರು. ಅದು ಬಿಟ್ಟರೆ, ಭಾರತದ ಮೊಹಮ್ಮದ್ ಅಝರುದ್ದೀನ್ 1996/97ರ ಟೆಸ್ಟ್ ಸರಣಿಯಲ್ಲಿ 388 ರನ್ ಬಾರಿಸಿದ್ದೇ ಹೆಚ್ಚು.

ಬೌಲರ್‌ಗಳ ಪಾರಮ್ಯ
ಅಂತಿಮ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 497 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 162+133 ರನ್ ಬಾರಿಸಿ ಶತಣಾಯಿತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತ ಮೊಹಮ್ಮದ್ ಶಮಿ 2+3, ಉಮೇಶ್ ಯಾದವ್ 3+2, ರವೀಂದ್ರ ಜಡೇಜಾ 2+1, ಶಬಾಝ್ ನದೀಮ್ 2+2 ಮತ್ತು ರವಿಚಂದ್ರನ್ ಅಶ್ವಿನ್ 0+1 ವಿಕೆಟ್ ನೊಂದಿಗೆ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications