Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದಕ್ಷಿಣ ಆಫ್ರಿಕಾ: ದ.ಆಫ್ರಿಕಾ ಕ್ರಿಕೆಟಿಗರಿಗೆ ಕೋಚ್ ಬೌಚರ್ ಎಚ್ಚರಿಕೆ!

India vs South Africa: SA players likely to avoid customary handshakes

ಬೆಂಗಳೂರು, ಮಾರ್ಚ್ 12: ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮಾರ್ಚ್ 12ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಸರಣಿ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಆಟಗಾರರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಎಚ್ಚರಿಸಿದ್ದಾರೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡು ವಿಶ್ವದಗಲಕ್ಕೂ ಹಬ್ಬಿ ಆತಂಕ ಸೃಷ್ಟಿಸಿರುವ ಮಾರಕ ಸೋಂಕು ಕೊರೊನಾ ವೈರಸ್‌ನಿಂದಾಗಿ ಅನೇಕ ಕ್ರೀಡಾಕೂಟಗಳು ರದ್ದಾಗುತ್ತಿದೆ, ಮುಂದೂಡಲ್ಪಡುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಗೂ ವೈರಸ್ ಭೀತಿ ಇತ್ತಾದರೂ ನಿಗದಿತ ದಿನಾಂಕದಂತೆ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ಪ್ರವಾಸ ಸರಣಿ ನಡೆಯುವುದಂತೂ ನಿಜ. ಆದರೆ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಇತ್ತಂಡಗಳ ಆಟಗಾರರಿಗೆ ಸೂಚಿಸಲಾಗಿದೆ.

40ಕ್ಕೂ ಹೆಚ್ಚಿನ ಮಂದಿಗೆ ಸೋಂಕು

40ಕ್ಕೂ ಹೆಚ್ಚಿನ ಮಂದಿಗೆ ಸೋಂಕು

ಭಾರತದಲ್ಲಿ ಸುಮಾರು 45 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಟೂರ್ನಿಯ ವೇಳೆ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರರು ಭಾರತದ ಆಟಗಾರರೊಂದಿಗೆ ಅಥವಾ ಅಥವಾ ಇತರರೊಂದಿಗೆ ಹ್ಯಾಂಡ್‌ಶೇಕ್ ಮಾಡುವುದನ್ನು ತಪ್ಪಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಕೈ ಕುಲುಕೋದು ಬೇಡ

ಕೈ ಕುಲುಕೋದು ಬೇಡ

'ಸೋಂಕಿನ ಸಂಬಂಧ ಹ್ಯಾಂಡ್‌ಶೇಕ್ ಮಾಡದಂತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆಟಗಾರರಿಗೆ ತಿಳಿಸಿದ್ದೇವೆ. ಹೀಗೆ ಮಾಡುವುದು ಉತ್ತಮ. ಕೊರೊನಾ ನಮ್ಮ ಆಟಗಾರರಿಗೆ ಹಬ್ಬುವುದನ್ನು ತಪ್ಪಿಸಲು ಇದೇ ಒಳ್ಳೆಯದಾರಿ ಎಂದು ನನಗನ್ನಿಸುತ್ತಿದೆ,' ಎಂದು ಮಾರ್ಕ್ ಬೌಚರ್ ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದಾರೆ.

ಆರೋಗ್ಯ ಸಿಬ್ಬಂದಿ ನಿಯಂತ್ರಿಸುತ್ತಾರೆ

ಆರೋಗ್ಯ ಸಿಬ್ಬಂದಿ ನಿಯಂತ್ರಿಸುತ್ತಾರೆ

'ಸಮಸ್ಯೆ ಎದುರಾಗಲಿದೆ ಎಂದಾದರೆ ನಮ್ಮಲ್ಲಿ ಆರೋಗ್ಯ ಸಿಬ್ಬಂದಿಯಿದ್ದಾರೆ. ಆಟಗಾರರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಶಿಫಾರಸಿನೊಂದಿಗೆ ಅವರು ನಮ್ಮ ಜೊತೆಗೆ ಬಂದಿದ್ದಾರೆ. ಇಲ್ಲಿನ ಪರಿಸ್ಥಿತಿ ತುಂಬಾ ಅಪಾಯಕಾರಿ ಎನಿಸಿದರೆ ಅವರು ನಮ್ಮನ್ನು ನಿಯಂತ್ರಿಸುತ್ತಾರೆ,' ಎಂದು ಬೌಚರ್ ಮಾಹಿತಿ ನೀಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿ

ಮೂರು ಪಂದ್ಯಗಳ ಏಕದಿನ ಸರಣಿ

ಮಾರ್ಚ್ 12ರಿಂದ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಪಂದ್ಯಗಳು ಭಾರತೀಯ ಕಾಲಮಾನ 1.30 pmಗೆ ಆರಂಭಗೊಳ್ಳಲಿವೆ. ನ್ಯೂಜಿಲೆಂಡ್ ಪ್ರವಾಸದ ಬಳಿಕ ವಿರಾಟ್ ಕೊಹ್ಲಿ ಪಡೆ ಪಾಲ್ಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಸರಣಿಯಿದು.

Story first published: Tuesday, March 10, 2020, 18:19 [IST]
Other articles published on Mar 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+