ಭಾರತ ಧಿಡೀರ್ ಕುಸಿತ, ಸಾಧಾರಣ ಗುರಿ ಬೆನ್ನತ್ತಿದ ದ.ಆಫ್ರಿಕಾ

ಪೋರ್ಟ್ ಎಲಿಜಬೆತ್, ಫೆಬ್ರವರಿ 13: ಉತ್ತಮವಾಗಿ ಆಡುತ್ತಿದ್ದ ಭಾರತ ತಂಡ ಲುಂಗಿ ನಿಡಿ ದಾಳಿಗೆ ಸಿಲುಕಿ ಧಿಡೀರ್ ಕುಸಿತ ಕಂಡಿತು. 300ರ ಗಡಿಯನ್ನು ಸುಲಭವಾಗಿ ದಾಟುತ್ತದೆಂಬ ನಿರೀಕ್ಷೆ ಇದ್ದ ಭಾರತ ಕೇವಲ 274 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.
ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ 42 ಓವರ್‌ಗಳಿಗೆ 236 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತವನ್ನು ಲುಂಗಿ ಗಿಡಿ ತಮ್ಮ ಕರಾರುವಕ್ ದಾಳಿಯಿಂದ ಕಾಡಿದರು. ಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಅವರ ವಿಕೆಟ್ ಕಬಳಿಸಿದ ಲುಂಗಿ ಗಿಡಿ ಆ ಭಾರತದ ಇನ್ನಿಂಗ್ಸ್‌ಗೆ ಭಾರಿ ಪೆಟ್ಟು ನೀಡಿದರು.
ರೋಹಿತ್ ಶರ್ಮಾ ಅವರು ಔಟಾದ ನಂತರದ ಎಸೆತದಲ್ಲೇ ಹಾರ್ದಿಕ್ ಪಾಂಡ್ಯಾ ವಿಕೆಟನ್ನೂ ಅವರು ಕಬಳಿಸಿದರು. ಕೇವಲ ಒಂದು ಬಾಲ್ ಆಡಿ ಪೆವಿಲಿಯನ್‌ಗೆ ಮರಳಿದರು ಹಾರ್ದಿಕ್ ಪಾಂಡ್ಯಾ. ಆ ನಂತರ ನಿಧಾನಗತಿಯಲ್ಲಿ ತಮ್ಮ ಇನ್ನಿಂಗ್ಸ್ ಬೆಳೆಸುತ್ತಿದ್ದ ಧೋನಿ ಅವರನ್ನೂ ಗಿಡಿ ಬಲಿ ಪಡೆದರು.
ಅದಕ್ಕೂ ಮುನ್ನಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಆರಂಭದಲ್ಲೇ ಬಿರುಸಿನ ಆಟವಾಡಿ 23 ಬಾಲ್‌ಗೆ 34 ರನ್ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳಿದ್ದವು. ಅವರು ಔಟಾದ ನಂತರ ಬಂದ ಕೊಹ್ಲಿ ಎಂದಿನಂತೆ ಉತ್ತಮವಾಗಿ ಆಡುತ್ತಿದ್ದರಾದರೂ 36 ರನ್ ಗಳಿಸಿದ್ದಾಗ ರನ್‌ಔಟ್ ಬಲೆಗೆ ಬಿದ್ದರು.
ಕೊಹ್ಲಿ ಔಟಾದ ನಂತರ ಆಗಮಿಸಿದ ಅಜಿಂಕ್ಯಾ ರಹಾನೆ ರೋಹಿತ್ ಶರ್ಮಾ ಮಾಡಿದ ತಪ್ಪಿನಿಂದ ರನ್ ಔಟ್ ಆಗಿ ಹೊರ ನಡೆದರು. ಆದರೆ ನಂತರ ರೋಹಿತ್ ಶರ್ಮಾ ಇನ್ನಿಂಗ್ಸ್ ಅನ್ನು ಸಂಭಾಳಿಸಿದರಾದರೂ ದೊಡ್ಡ ಮೊತ್ತ ಪೇರಿಸುವ ಮುಂಚೆಯೇ ಪೆವಿಲಿಯನ್ ಸೇರಿದರು.
ಆ ನಂತರ ಬೌಲರ್ ಭುವನೇಶ್ವರ್ ಕುಮಾರ್ ಅಲ್ಪ ಹೋರಾಟ ನಡೆಸಿದರಾದರೂ ತಂಡವನ್ನು 300 ರ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ದ.ಆಫ್ರಿಕಾ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಲುಂಗಿ ಗಿಡಿ 9 ಓವರ್ ಎಸೆದು 51 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಅವರು ಭಾರತದ ಮಧ್ಯಮ ಕ್ರಮಾಂಕದ ಬೆನ್ನು ಮೂಳೆಯನ್ನೇ ಮುರಿದರು.
ದ.ಆಫ್ರಿಕಾಕ್ಕೆ ಗೆಲ್ಲಲು 275ರನ್‌ಗಳ ಅಗತ್ಯವಿದ್ದು, ಭಾರತದ ಬೌಲರ್‌ಗಳು ಏನು ಮಾಡುತ್ತಾರೆ ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications