ಭಾರತ vs ದಕ್ಷಿಣ ಆಫ್ರಿಕಾ T20 ಸರಣಿ ವೇಳಾಪಟ್ಟಿ, ಸಮಯ ಮತ್ತು ತಂಡಗಳ ಸಂಪೂರ್ಣ ಮಾಹಿತಿ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಮುಗಿದಿದೆ. ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ್ದು ಸರಣಿಯನ್ನು ಗೆದ್ದುಕೊಂಡಿದೆ. ಈಗ ಟೀಮ್ ಇಂಡಿಯಾ ಚಿತ್ತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಯ ಮೇಲೆ ನೆಟ್ಟಿರಲಿದೆ. ಈ ಸರಣಿ ನಡೆಯುವುದು ಯಾವಾಗ? ಸಮಯ, ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 271 ರನ್‌ಗಳ ಗುರಿಯನ್ನು ಸಮರ್ಥವಾಗಿ ಮೆಟ್ಟಿನಿಂತಿದೆ. ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ ಮಿಂಚಿದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದರಿಂದ ಟೀಮ್ ಇಂಡಿಯಾ ಸುಲಭ ಜಯ ದಾಖಲಿಸಿದೆ. ಈಗ ಟೀಮ್ ಇಂಡಿಯಾದ ಚಿತ್ತ ಟಿ20 ಸರಣಿಯ ಮೇಲೆ ನೆಟ್ಟಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಪಂದ್ಯ ಕಟಕ್‌ನಲ್ಲಿ ಡಿಸೆಂಬರ್ 9 ರಂದು ನಡೆಯಲಿದೆ.

ಟಿ20 ಸರಣಿಯಲ್ಲಿ ಎಷ್ಟು ಪಂದ್ಯಗಳು ನಡೆಯುತ್ತವೆ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ 5 ಪಂದ್ಯಗಳ ಸರಣಿಯಾಗಿದೆ.
ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20 ಪಂದ್ಯ, ಡಿ.9, ಕಟಕ್
ಎರಡನೇ ಟಿ20 ಪಂದ್ಯ, ಡಿ.11, ಚಂಡೀಗಡ್
ಮೂರನೇ ಟಿ20 ಪಂದ್ಯ, ಡಿ.14, ಧರ್ಮಶಾಲಾ
ನಾಲ್ಕನೇ ಟಿ20 ಪಂದ್ಯ, ಡಿ.17, ಲಕ್ನೋ
ಐದನೇ ಟಿ20 ಪಂದ್ಯ, ಡಿ.19, ಅಹದಮಾಬಾದ್
ಪಂದ್ಯ ಆರಂಭವಾಗುವುದು ಯಾವಾಗ?
ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ಟಾಸ್ ಇರುತ್ತದೆ.
ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್ ಅಪ್ಲೀಕೇಷನ್‌ನಲ್ಲಿ ನೋಡಬಹುದಾಗಿದೆ.
ಟಿ20 ಸರಣಿಗೆ ಪ್ರಕಟಿತ ಭಾರತ ತಂಡ ಹೇಗಿದೆ?
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶ್‌ದೀಪ್ ಸಿಂಗ್, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ, ಮತ್ತು ವಾಷಿಂಗ್ಟನ್ ಸುಂದರ್.
ದಕ್ಷಿಣ ಆಫ್ರಿಕಾ ತಂಡದ ನಾಯಕ ಯಾರು?
ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ಸರಣಿಯಲ್ಲಿ ಏಡನ್ ಮಾರ್ಕ್ರಾಮ್ ಮುನ್ನಡೆಸುತ್ತಿದ್ದಾರೆ.
ಪ್ರವಾಸಿ ಟಿ20 ತಂಡ: ಏಡನ್ ಮಾರ್ಕ್ರಾಮ್ (ನಾಯಕ), ಓಟ್ನಿಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೋ ಜಾನ್ಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಟ್ಜೆ, ಲುಥೋ ಸಿಪಮ್ಲಾ ಮತ್ತು ಟ್ರಿಸ್ಟನ್ ಸ್ಟಬ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications