For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ದ. ಆಫ್ರಿಕಾದ ಹಿನ್ನಡೆಗೆ ಕಾರಣವೇನಂದು ವಿವರಿಸಿದ ಟೆಂಬಾ ಬವುಮಾ

India vs South Africa: Temba Bavuma explains the reason for poor batting display against India

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೂರನೇ ದಿನದಂತ್ಯಕ್ಕೆ ಭಾರತ ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಮಡ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತವನ್ನು ಅನುಭವಿಸಿದೆ. ತವರಿನಲ್ಲಿಯೇ ದಕ್ಷಿಣ ಆಫ್ರಿಕಾ ತಂಡ ಅನುಭವಿಸಿದ ಹಿನ್ನಡೆಗೆ ಸಾಕಷ್ಟು ಟೀಕೆಯನ್ನು ಎದುರಿಸಿದೆ. ಈ ಸಂದರ್ಭದಲ್ಲಿ ತಮಡದ ಪ್ರಮುಖ ಆಟಗಾರ ಟೆಂಬಾ ಬವುಮಾ ಪ್ರತಿಕ್ರಿಯಿಸಿದ್ದಾರೆ. ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಾದ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಈ ವರ್ಷದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಹಳಷ್ಟು ಕಡಿಮೆ ಪ್ರಮಾನದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಿದೆ. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿನ ಕಡಿಮೆ ಪ್ರಮಾಣದಲ್ಲಿ ಆಡಿದ್ದೇ ಸೆಂಚೂರಿಯನ್‌ನಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಲು ಕಾರಣವಾಯಿತು ಎಂದು ಟೆಂಬಾ ಬವುಮಾ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣವನ್ನು ನೀಡಿ ನಮ್ಮ ತಪ್ಪನ್ನು ಮನ್ನಿಸಲು ಕೇಳಿಕೊಳ್ಳುತ್ತಿಲ್ಲ. ಆದರೆ ಇದು ಪರಿಣಾಮ ಬೀರಿದೆ ಎಂದು ಬವುಮಾ ಹೇಳಿಕೊಂಡಿದ್ದಾರೆ.

"ಮೊದಲ ದಿನ ನಾವು ಆಡಿದ ರೀತಿಯನ್ನು ಗಮನಸಿದರೆ ಅದು ನಾವು ಈ ಮಟ್ಟದಲ್ಲಿ ಆಡಬಹುದಾದ ಗುಣಮಟ್ಟದ ಆಟ ಎಂದು ನಾನು ಭಾವಿಸುವುದಿಲ್ಲ. ನಮ್ಮ ಆಟದ ತೀವ್ರತೆ ಮತ್ತಷ್ಟ ಹೆಚ್ಚಿರಬಹುದಾಗಿತ್ತು. ನೀವು ಎಷ್ಟು ಪ್ರಮಾಣದಲ್ಲಿಯೂ ನೆಟ್ ಅಭ್ಯಾಸಗಳನ್ನು ನಡೆಸಬಹುದು. ಆದರೆ ಮೈದಾನದ ಮಧ್ಯದಿಂದ ಆಡುವುದಕ್ಕೆ ಅದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಟೆಂಬಾ ಬವುಮಾ ಪ್ರತಿಕ್ರಿಯೆ ನೀಡಿದ್ದಾರೆ.

"ಆಟಗಾರರಾಗಿ ನಾವು ಹೆಚ್ಚಿನದ್ದೇನೂ ಮಾಡಲು ಸಾಧ್ಯವಿಲ್ಲ. ಆದರೆ ಆಟಗಳ ಸಂಖ್ಯೆಯಲ್ಲಿ ಅಸಮಾನತೆ ಇದೆ. ಹೀಗಾಗಿ ಇಂತಾ ಸವಾಲನ್ನು ಎದುರಿಸಲು ನಾವು ಮಾನಸಿಕವಾಗಿ ಒಂದು ಮಾರ್ಗವನ್ನು ಕಂಡುಕೊಳ್ಳಬೇಕು" ಎಂದಿದ್ದಾರೆ ಟೆಂಬಾ ಬವುಮಾ.

ಇನ್ನು ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್‌ಗಳ ಹಿನ್ನಡೆಯನ್ನು ಅನುಭವಿಸಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಲ್ಲಿ ಭಾರತವನ್ನು ಬೇಗನೆ ಕಟ್ಟಿ ಹಾಕುವ ವಿಶ್ವಾಸವನ್ನು ಹೊಂದಿದೆ. ಅದಾದ ಬಳಿಕ ಭಾರತೀಯ ಬೌಲರ್‌ಗಳ ದಾಳಿಯನ್ನು ದಕ್ಷಿಣ ಆಫ್ರಿಕಾ ಸಮರ್ಥವಾಗಿ ಎದುರಿಸುವ ಸವಾಲನ್ನು ಕೂಡ ಹೊಂದಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದು ಆಫ್ರಿಕಾ ತಂಡಕ್ಕೆ ಆಘಾತ ನೀಡಿದ್ದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಐದನೇ ದಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗುವ ಆತಂಕವೂ ಇದೆ.

ಸೆಂಚೂರಿಯನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಮೂರನೇ ದಿನದ ಆಟದಲ್ಲಿ ಮೊಹಮ್ಮದ್ ಶಮಿ ತಮ್ಮ ಬೃತ್ತಿ ಜೀವನದ 6ನೇ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಅಲ್ಲದೆ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದು ಭಾರತದ ಪರ ಈ ಸಾಧನೆ ಮಾಡಿದ ಕೇವಲ 5ನೇ ವೇಗದ ಬೌಲರ್ ಎನಿಸಿದ್ದಾರೆ. "ಮೊಹಮ್ಮದ್ ಶಮಿ ಒಬ್ಬ ವಿಶ್ವದರ್ಜೆಯ ವೇಗಿ. ಹೀಗಾಘಿ ನಾವು ಅನಿರೀಕ್ಷಿತವಾದದ್ದೇನೂ ಮಾಡಿದ್ದೇವೆ ಎನಿಸುತ್ತಿಲ್ಲ. ಬ್ಯಾಟರ್‌ಗಳಾಗು ನಾವು ಮುಂದೆ ನಿಲ್ಲಬೇಕಿದ್ದು ಸಾಧ್ಯವಾದಷ್ಟು ನಮ್ಮ ರಕ್ಷಣಾತ್ಮಕ ಆಟವನ್ನು ಆಡಬೇಕಿದೆ. ಆತ ಅದ್ಭುತವಾದ ಬೌಲಿಂಗ್ ನಡೆಸಿದ್ದಕ್ಕೆ ಶತನನ್ನು ಪ್ರಶಂಸಿಸಬೇಕು" ಎಂದಿದ್ದಾರೆ ಟೆಂಬಾ ಬವುಮಾ.

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಇಶಾಂತ್ ಶರ್ಮಾ

ದಕ್ಷಿಣ ಆಫ್ರಿಲಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ

ಬೆಂಚ್: ಡುವಾನ್ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

Story first published: Wednesday, December 29, 2021, 15:09 [IST]
Other articles published on Dec 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+