ಶುಕ್ರವಾರದಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಮನೆ ಮಾಡಿದೆ. ಈ ಬಾರಿಯ ಕದನದಲ್ಲಿ ಬೌಲರ್ಸ್ vs ಬೌಲರ್ಸ್ ಎಂದು ಬಿಂಬಿಸಲಾಗುತ್ತಿದೆ. ಉಭಯ ತಂಡಗಳಲ್ಲೂ ವಿಶ್ವದ ಶ್ರೇಷ್ಠ ಬೌಲರ್‌ಗಳು ಇದ್ದಾರೆ. ಈ ವೇಳೆ ಯಾವ ತಂಡದ ಬೌಲರ್‌ಗಳ ಕೈ ಮೇಲಾಗುತ್ತದೋ, ಅವರೇ ಜಯ ಸಾಧಿಸುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಹಾಗಿದ್ದರೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಪಂದ್ಯದಲ್ಲಿ ಕಣಕ್ಕೆ ಇಳಿಯಲಿರುವ ಸ್ಟಾರ್ ಬೌಲರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ತಂಡದ ಬೌಲಿಂಗ್ ನೊಗವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಬತ್ತಳಿಕೆಯಲ್ಲಿ ಭಿನ್ನ ವಿಭಿನ್ನ ಬೌಲಿಂಗ್ ಮಿಶ್ರಣಗಳಿವೆ. ಇವುಗಳನ್ನು ಕಂಡುಹಿಡಿಯುವುದು ಎದುರಾಳಿ ಬ್ಯಾಟರ್‌ಗಳಿಗೆ ಸವಾಲಾಗಿದೆ. ಇನ್ನು ಇವರು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬೌಲರ್. ಇವರ ಆಕ್ಷನ್‌ನ್ನು ಬೌಲರ್‌ಗಳು ರೀಡ್ ಮಾಡುವುದು ಕೊಂಚ ಕಷ್ಟವಾಗಿದೆ.

ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ತಮ್ಮ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು ಪಂದ್ಯಗಳನ್ನು ಆಡುತ್ತಾರೆ. ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್ ಇರಲಿ, ಸ್ಪಿನ್ ಬೌಲರ್‌ಗಳಿಗೆ ನೆರವಾಗುವ ಪಿಚ್ ಇರಲಿ ಬುಮ್ರಾ ಅಬ್ಬರಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಪರ ಬುಮ್ರಾ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 226 ವಿಕೆಟ್ ಪಡೆದಿದ್ದಾರೆ.
ICC World Ranking: ಬುಮ್ರಾ ನಂಬರ್ 1 ಬೌಲರ್
ಟೀಮ್ ಇಂಡಿಯಾದ ಪರ ಇನ್ನೊಂದು ಬದಿಯಿಂದ ವೇಗದ ಬೌಲಿಂಗ್ ನಡೆಸುವ ಮೊಹಮ್ಮದ್ ಸಿರಾಜ್ 43 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 133 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಕಾಶ್ ದೀಪ್ ಭಾರತ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ICC World Ranking: ಮೊಹಮ್ಮದ್ ಸಿರಾಜ್ 11ನೇ ಸ್ಥಾನ

ದಕ್ಷಿಣ ಆಫ್ರಿಕಾ ಪರ ವೇಗದ ಬೌಲಿಂಗ್ ನೊಗವನ್ನು ಕಗಿಸೊ ರಬಾಡ ಹೊರಲಿದ್ದಾರೆ. ಇವರು ಈಗಾಗಲೇ ದಕ್ಷಿಣ ಆಫ್ರಿಕಾದ ಪರ 73 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 340 ವಿಕೆಟ್ ಕಬಳಿಸಿದ್ದಾರೆ. ಇವರು ಸದ್ಯ ಐಸಿಸಿ ಶ್ರೇಯಾಂಕದಲ್ಲಿ 823 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಭರವಸೆಯ ಬೌಲರ್‌ಗಳ ಪಟ್ಟಿಯಲ್ಲಿ ಮಾರ್ಕೊ ಜಾನ್ಸನ್ ಸಹ ಒಬ್ಬರು. ಇವರು 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಈಗಾಗಲೇ 19 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 77 ವಿಕೆಟ್ ಪಡೆದಿದ್ದಾರೆ. ಇನ್ನು ಟೆಸ್ಟ್ ಶ್ರೇಯಾಂಕದಲ್ಲಿ ಇವರು 724 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ನಡುವಿನ ಕಾದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.