For Quick Alerts
ALLOW NOTIFICATIONS  
For Daily Alerts
 

India vs South Africa ಟೆಸ್ಟ್ ಇತಿಹಾಸದ 10 ದಾಖಲೆಗಳು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿರುವ ಭಾರತ, ಏಕದಿನ ಟಿ20 ಪಂದ್ಯಗಳ ಬಳಿಕ ಟೆಸ್ಟ್‌ ಪಂದ್ಯ ಆಡಲಿದೆ. ಈಗಾಗಲೇ ಟಿ20ಯಲ್ಲಿ ಡ್ರಾ ಸಾಧಿಸಿ, ಏಕದಿನ ಸರಣಿ ವಶಕ್ಕೆ ಪಡೆದಿರುವ ಟೀಮ್ ಇಂಡಿಯಾ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಮಾಯಾಜಿಂಕೆಯಂತೆ ಕಾಡಿದ್ದ ಗೆಲುವನ್ನು ಕಟ್ಟಿ ಹಾಕಲು ರೋಹಿತ್ ಬಾಯ್ಸ್ ಪ್ಲ್ಯಾನ್ ಮಾಡಿಕೊಂಡಿದೆ.

ಈ ಎರಡು ತಂಡಗಳ ಟೆಸ್ಟ್ ಪಂದ್ಯಗಳಿಗೆ 31 ವರ್ಷ ಹಳೆಯ ಇತಿಹಾಸ. 1992 ರಲ್ಲಿ, ಉಭಯ ತಂಡಗಳ ನಡುವೆ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯಿತು. ಇದುವರೆಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 42 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ಭಾರತ ತಂಡ 15 ಪಂದ್ಯಗಳನ್ನು ಗೆದ್ದರೆ, ದಕ್ಷಿಣ ಆಫ್ರಿಕಾ 17 ಪಂದ್ಯಗಳನ್ನು ಗೆದ್ದಿದೆ. 10 ಪಂದ್ಯಗಳು ಡ್ರಾ ಆಗಿವೆ.

India vs South Africa Test historys 10 records: complete details here

ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಆಡಿದ್ದಾರೆ. ಭಾರತದ ಪರ ಸಚಿನ್‌ ತೆಂಡೂಲ್ಕರ್‌, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ ಅವರಂತಹ ಖ್ಯಾತ ನಾಮರು ದಕ್ಷಿಣ ಆಫ್ರಿಕಾ ವಿರುದ್ಧ ಬೆಸ್ಟ್‌ ಇನ್ನಿಂಗ್ಸ್ ಕಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಡೆಯುತ್ತಿದ್ದು, ಯಾವ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಬೆಸ್ಟ್‌ ಪ್ರದರ್ಶನ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಉಭಯ ತಂಡಗಳ ನಡುವಿನ ಟೆಸ್ಟ್‌ ವೇಳೆ ಅತ್ಯಧಿಕ ರನ್ ಎಷ್ಟು?
ಫೆಬ್ರವರಿ 2010 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 643 ರನ್ ಗಳಿಸಿ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದುವೇ ಉಭಯ ತಂಡಗಳ ನಡುವಿನ ಬಿಗ್ ಸ್ಕೋರ್.

ಇನ್ನಿಂಗ್ಸ್‌ ಒಂದರಲ್ಲಿ ಕಡಿಮೆ ಸ್ಕೋರ್ ದಾಖಲಿಸಿದ ತಂಡ ಯಾವುದು?
ಡಿಸೆಂಬರ್ 1996 ರಲ್ಲಿ ಡರ್ಬನ್ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 66 ರನ್‌ಗಳಿಗೆ ಕುಸಿಯಿತು.

India vs South Africa Test historys 10 records: complete details here

ಉಭಯ ತಂಡಗಳ ಟೆಸ್ಟ್‌ ಇತಿಹಾಸದಲ್ಲಿ ದೊಡ್ಡ ಗೆಲುವು ಯಾವುದು?
ಅಕ್ಟೋಬರ್ 2019 ರ ರಾಂಚಿ ಟೆಸ್ಟ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಇನಿಂಗ್ಸ್ ಮತ್ತು 202 ರನ್‌ಗಳಿಂದ ಸೋಲಿಸಿತ್ತು.

ಉಭಯ ತಂಡಗಳ ಟೆಸ್ಟ್‌ನಲ್ಲಿ ಕಡಿಮೆ ಅಂತರದ ಜಯ ಯಾವುದು?
ಫೆಬ್ರವರಿ 2000 ರಲ್ಲಿ ನಡೆದ ವಾಂಖೆಡೆ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಭಾರತ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು.

ಯಾರು ಅಧಿಕ ರನ್ ಬಾರಿಸಿದ್ದಾರೆ?
ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ 1741 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಜಾಕ್ವೆಸ್ ಕಾಲಿಸ್ 1734 ರನ್.

India vs South Africa Test historys 10 records: complete details here

ದೊಡ್ಡ ಇನ್ನಿಂಗ್ಸ್ ಕಟ್ಟಿದ್ದು ಯಾರು?
ಈ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ನಂಬರ್-1 ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಮಾರ್ಚ್ 2008 ರ ಚೆನ್ನೈ ಟೆಸ್ಟ್‌ನಲ್ಲಿ 319 ರನ್‌ಗಳ ಇನ್ನಿಂಗ್ಸ್ ಕಟ್ಟಿದ್ದರು.

ಉಭಯ ತಂಡಗಳ ಟೆಸ್ಟ್‌ ವೇಳೆ ಹೆಚ್ಚಿನ ಶತಕ ದಾಖಲಿಸಿದ ಆಟಗಾರ ಯಾರು?
ಸಚಿನ್ ಮತ್ತು ಜಾಕ್ವೆಸ್ ಕಾಲಿಸ್ ಇಬ್ಬರೂ ದಿಗ್ಗಜರು ತಲಾ 7 ಶತಕ ಬಾರಿಸಿದ್ದಾರೆ.

ಉಭಯ ತಂಡದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ ಯಾರು?
ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅನಿಲ್ ಕುಂಬ್ಳೆ 84 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕ ಪರ ಡೇಲ್ ಸ್ಟೇಯ್ನ್ 65 ವಿಕೆಟ್ ಪಡೆದಿದ್ದಾರೆ.

India vs South Africa Test historys 10 records: complete details here

ಒಂದೇ ಟೆಸ್ಟ್‌ನಲ್ಲಿ ಬೆಸ್ಟ್‌ ಬೌಲಿಂಗ್‌ ಹಾಕಿದವರು ಯಾರು?
ದಕ್ಷಿಣ ಆಫ್ರಿಕಾದ ಅಲನ್ ಡೊನಾಲ್ಡ್ ಡಿಸೆಂಬರ್ 1992 ರಲ್ಲಿ ಗ್ಕೆಬರ್ಹಾ ಟೆಸ್ಟ್‌ನಲ್ಲಿ 139 ರನ್‌ಗಳಿಗೆ 12 ವಿಕೆಟ್‌ಗಳನ್ನು ಪಡೆದರೆ, ಭಾರತದ ಪರ ಆರ್ ಅಶ್ವಿನ್ 2015 ರ ನವೆಂಬರ್‌ನಲ್ಲಿ ನಾಗ್ಪುರ ಟೆಸ್ಟ್‌ನಲ್ಲಿ 98 ರನ್‌ಗಳಿಗೆ 12 ವಿಕೆಟ್‌ಗಳನ್ನು ಪಡೆದಿದ್ದಾರೆ.

ಉಭಯ ತಂಡಗಳ ನಡುವಿನ ಉತ್ತಮ ಜೊತೆಯಾಟ ಯಾವುದು?
ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ (ಅಕ್ಟೋಬರ್ 2019) ಮೊದಲ ವಿಕೆಟ್‌ಗೆ 317 ರನ್‌ಗಳ ಅದ್ಭುತ ಜೊತೆಯಾಟವನ್ನು ನೀಡಿದ್ದಾರೆ.

Story first published: Tuesday, December 26, 2023, 12:10 [IST]
Other articles published on Dec 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+