For Quick Alerts
ALLOW NOTIFICATIONS  
For Daily Alerts
 

IND vs SA Test: ಭಾರತ, ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌: ಧ್ರವ್ ಜುರೇಲ್‌ಗೆ ಸ್ಥಾನ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಶುಕ್ರವಾರದಿಂದ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆ ಉಭಯ ತಂಡಗಳದ್ದಾಗಿದೆ. ಈಗಾಗಲೇ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ಉತ್ಸಾಹದಲ್ಲಿದೆ. ಗಿಲ್‌ ಪಡೆ ತವರಿನಲ್ಲಿ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಈಡನ್‌ ಗಾರ್ಡನ್‌ ಅಂಗಳದಲ್ಲಿ ಭಾರತ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಈ ವರೆಗೆ 44 ಪಂದ್ಯಗಳಲ್ಲಿ ಕಾದಾಟ ನಡೆಸಿವೆ. ಈ ವೇಳೆ ಭಾರತ 16ರಲ್ಲಿ, ದಕ್ಷಿಣ ಆಫ್ರಿಕ 18ರಲ್ಲಿ ಜಯ ಸಾಧಿಸಿದೆ. ಇನ್ನು ಈಡನ್‌ ಗಾರ್ಡನ್‌ ಅಂಗಳದಲ್ಲಿ ಉಭಯ ತಂಡಗಳ ನಡುವೆ ಒಟ್ಟು 3 ಪಂದ್ಯಗಳು ನಡೆದಿದ್ದು, ಭಾರತ 2, ಪ್ರವಾಸಿ ತಂಡ 1 ಪಂದ್ಯ ಗೆದ್ದಿದೆ. ಶುಕ್ರವಾರದಿಂದ ಆರಂಭವಾಗುವ ಟೆಸ್ಟ್‌ ಪಂದ್ಯದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

India vs South Africa Test Series Begins in Kolkata Battle for WTC Points

ಭಾರತ ಈಗಾಗಲೇ ವೆಸ್ಟ್‌ ಇಂಡೀಸ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ವೇಳೆ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಇದೇ ಆಟವನ್ನು ದಕ್ಷಿಣ ಆಫ್ರಿಕಾ ವಿರುದ್ಧವೂ ಆಡುವ ಕನಸು ಹೊಂದಿದೆ. ಭಾರತ ತಂಡದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.

ಧ್ರುವ್‌ ಜುರೇಲ್‌ಗೆ ಸಿಗುತ್ತಾ ಚಾನ್ಸ್‌?

ಆರಂಭಿಕರಾದ ಯಶಸ್ವಿ ಜೈಸ್ವಾಲ್‌, ಕೆಎಲ್ ರಾಹುಲ್‌ ತಂಡದ ಭರವಸೆ ಹೆಚ್ಚಿಸಿದ್ದಾರೆ. ಪ್ರಸಕ್ತ ವರ್ಷ ಈ ಇಬ್ಬರೂ ಆಟಗಾರರ ಆಟ ತಂಡದ ಜಯದಲ್ಲಿ ಮಿಂಚಿದೆ. ಸಾಯಿ ಸುದರ್ಶನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ರನ್ ಮಹಲ್ ಕಟ್ಟುವ ಇರಾದೆ ಹೊಂದಿದ್ದಾರೆ. ಇನ್ನು ಆಲ್‌ರೌಂಡರ್‌ ರೂಪದಲ್ಲಿ ಕಾಣಿಸಿಕೊಳ್ಳುವ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇನ್ನು ವಿಕೆಟ್‌ ಕೀಪರ್ ಆಗಿ ರಿಷಭ್‌ ಪತ್‌ ಆಯ್ಕೆ ಪಕ್ಕಾ ಆಗಿದೆ. ಆದರೆ ಧ್ರುವ್ ಜುರೇಲ್‌ ಸಹ ದಕ್ಷಿಣ ಆಫ್ರಿಕಾ "ಎ" ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಅವರನ್ನು ಆಡಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಅಲ್ಲದೆ ನಿತೀಶ್‌ ಕುಮಾರ್ ರೆಡ್ಡಿ ಅವರನ್ನು ತಂಡದಿಂದ ಹೊರಗಿಟ್ಟಿರುವುದರಿಂದ ಜುರೇಲ್‌ಗೆ ಸ್ಥಾನ ಲಭಿಸಬಹುದು.

ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್, ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ. ನುರಿತ ಸ್ಪಿನ್ ಬೌಲರ್‌ ಕುಲ್‌ದೀಪ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಆಲ್‌ರೌಂಡರ್‌ಗಳು ಶಿಸ್ತು ಬದ್ಧ ಆಟವನ್ನು ಪ್ರದರ್ಶಿಸುವ ಅನಿವಾರ್ಯತೆ ಇದೆ.

India vs South Africa Test Series Begins in Kolkata Battle for WTC Points

ಸಂಘಟಿತ ಬಲ

ದಕ್ಷಿಣ ಆಫ್ರಿಕಾ ತಂಡ ಸಂಘಟಿತ ಆಟದ ಮೇಲೆ ನಂಬಿಕೆ ಇಟ್ಟಿದೆ. ಪ್ರವಾಸಿ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಇದ್ದಾರೆ. ಇವರು ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲೂ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಬೌಲರ್‌ಗಳು ಇದ್ದಾರೆ. ದಕ್ಷಿಣ ಆಫ್ರಿಕಾದ ತಂಡದಲ್ಲಿ ಕೇಶವ್ ಮಹಾರಾಜ್‌ ಸ್ಪಿನ್ ಬೌಲಿಂಗ್ ಮೂಲಕ ಕಾಟ ನೀಡಬಲ್ಲರು.

ಪಿಚ್‌ ಹೇಗಿದೆ: ಸಾಮಾನ್ಯವಾಗಿ ಈಡನ್ ಗಾರ್ಡನ್‌ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಹಾಯ ಮಾಡಲಿದೆ. ಅಲ್ಲದೆ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವು ನೀಡಲಿದ್ದು, ಬಳಿಕ ಸ್ಪಿನ್ ಬೌಲರ್‌ಗಳು ಅಬ್ಬರಿಸಲಿದ್ದಾರೆ. ಇನ್ನು ಪಿಚ್‌ ಮೇಲೆ ಕೊಂಚ ಹುಲ್ಲು ಇರುವುದರಿಂದ ವೇಗದ ಬೌಲರ್‌ಗಳಿಗೆ ನೆರವು ಸಿಗಲಿದೆ.

WTC ಅಂಕ ಪಟ್ಟಿ: ಪ್ರಸಕ್ತ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಆಡಿದ 7 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿರುವ ಭಾರತ, 1ರಲ್ಲಿ ಡ್ರಾ ಸಾಧಿಸಿದ್ದು, ಗೆಲುವಿನ ಶೆಕಡಾವಾರು 61.90 ಆಗಿರಲಿದೆ. ಇನ್ನು ದಕ್ಷಿಣ ಆಫ್ರಿಕಾ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 1 ಜಯ, 1 ಸೋಲು ಕಂಡಿದ್ದು ಗೆಲುವಿನ ಶೇಕಡಾ 50 ಹೊಂದಿದ್ದು ಐದನೇ ಸ್ಥಾನದಲ್ಲಿದೆ.

Story first published: Thursday, November 13, 2025, 12:05 [IST]
Other articles published on Nov 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+