ಭಾರತ vs ದಕ್ಷಿಣ ಆಫ್ರಿಕಾ: ಕೊನೆಯೆರಡು ಟೆಸ್ಟ್‌ಗಳ ತಾಣ ಅದಲು-ಬದಲು

ನವದೆಹಲಿ, ಆಗಸ್ಟ್ 9: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, 3 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಟೆಸ್ಟ್ ಸರಣಿಯ ಕೊನೆಯೆರಡು ಪಂದ್ಯಗಳ ತಾಣಗಳಲ್ಲಿ ಬದಲಾವಣೆಯಾಗಿದೆ. ಎರಡನೇ ಟೆಸ್ಟ್ ಪುಣೆಯಲ್ಲಿ, 3ನೇ ಟೆಸ್ಟ್ ರಾಂಚಿಯಲ್ಲಿ ನಡೆಯಲಿವೆ.
ಆರಂಭದ ವೇಳಾಪಟ್ಟಿಯ ಪ್ರಕಾರ 2ನೇ ಟೆಸ್ಟ್ ರಾಂಚಿಯಲ್ಲಿ ಅಕ್ಟೋಬರ್ 10-14ರ ವರೆಗೆ ಮತ್ತು 3ನೇ ಟೆಸ್ಟ್ ಪುಣೆಯಲ್ಲಿ ಅಕ್ಟೋಬರ್ 19-23ರ ವರೆಗೆ ನಡೆಯುವುದರಲ್ಲಿತ್ತು. ಎರಡು ಟೆಸ್ಟ್‌ಗಳ ತಾಣ ಬದಲಾವಣೆಗೆ ಝಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ಗೆ ಬಿಸಿಸಿಐನಿಂದ ಒಪ್ಪಿಗೆ ಲಭಿಸಿದೆ ಎನ್ನಲಾಗಿದೆ.
ವರದಿಯ ಪ್ರಕಾರ ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಸಮಿತಿ (ಸಿಒಎ), ಟೆಸ್ಟ್ ತಾಣ ಬದಲಾಯಿಸುವ ಸ್ಟೇಟ್ ಬೋರ್ಡ್‌ನ ಕೋರಿಕೆಗೆ ಒಪ್ಪಿಗೆ ಸೂಚಿಸಿದೆ. 2ನೇ ಟೆಸ್ಟ್‌ನ ದಿನಾಂಕ 'ದುರ್ಗಾ ಪೂಜೆ' ಹಬ್ಬದಂದೇ ಬರುವುದರಿಂದ ತಾಣ ಬದಲಾಯಿಸುವಂತೆ ಝಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಯಲ್ಲಿ ವಿನಂತಿಸಿಕೊಂಡಿತ್ತು.
ಭಾರತ ಪ್ರವಾಸ ಕೈಗೊಳ್ಳುವ ದಕ್ಷಿಣ ಆಫ್ರಿಕಾ, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 23ರ ವರೆಗೆ 3 ಟಿ20, 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ಮೊದಲ ಟಿ20 ಸೆಪ್ಟೆಂಬರ್ 15ರಂದು ನಡೆದರೆ, ಮೊದಲ ಟೆಸ್ಟ್ ಅಕ್ಟೋಬರ್ 2-6ರ ವರೆಗೆ ನಡೆಯಲಿದೆ. ಅಂದ್ಹಾಗೆ ಮೊದಲ ಟೆಸ್ಟ್ ಪಂದ್ಯ ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications