Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದ.ಆಫ್ರಿಕಾ: ಗಂಗೂಲಿ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿ ಸಜ್ಜು

India vs South Africa: Virat Kohli all set to surpass Sourav Ganguly

ಪುಣೆ, ಅಕ್ಟೋಬರ್ 9: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ದಾಖಲೆ ಸಾಲಿನಲ್ಲಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋವರ್ 10) ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆ ಸೇರ್ಪಡೆಯಾಗಲಿದೆ.

ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 203 ರನ್ ಜಯ ದಾಖಲಿಸಿತ್ತು. ಈಗ ತಂಡ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ. ಪುಣೆ ಪಂದ್ಯ ಕೊಹ್ಲಿ ಪಾಲಿಗೆ ವಿಶೇಷ ದಾಖಲೆ ತಂದೀಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿಯಲಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಗಂಗೂಲಿ ದಾಖಲೆಯನ್ನು ಸರಿದೂಗಿಸಿದ್ದರು. ಸದ್ಯ ಗಂಗೂಲಿ ಮತ್ತು ವಿರಾಟ್ ಇಬ್ಬರೂ 49 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ದಾಖಲೆ ಹೊಂದಿದ್ದಾರೆ.

ಪುಣೆಯಲ್ಲಿ 50ನೇ ಪಂದ್ಯದಲ್ಲಿ ಕೊಹ್ಲಿ ತಂಡ ಮುನ್ನಡೆಸುತ್ತಿರುವುದರಿಂದ ಗಂಗೂಲಿ ದಾಖಲೆ ಬದಿಗೆ ಸರಿಯಲಿದೆ. ಟೆಸ್ಟ್‌ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದವರ ಸಾಲಿನಲ್ಲಿ ಎಂಎಸ್ ಧೋನಿ (60 ಪಂದ್ಯಗಳು), ವಿರಾಟ್ ಕೊಹ್ಲಿ (49), ಸೌರವ್ ಗಂಗೂಲಿ (49), ಸುನಿಲ್ ಗವಾಸ್ಕರ್/ಮೊಹಮ್ಮದ್ ಅಝರುದ್ದೀನ್ (47), ಮನ್ಸೂರ್ ಅಲಿ ಖಾನ್ (40) ಮೊದಲ 5 ಸ್ಥಾನಗಳಲ್ಲಿದ್ದಾರೆ.

Story first published: Wednesday, October 9, 2019, 18:37 [IST]
Other articles published on Oct 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+