ವಿಶಿಷ್ಠ ದಾಖಲೆಗಾಗಿ ಸೆಣಸಾಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!

ನವದೆಹಲಿ, ಸೆಪ್ಟೆಂಬರ್ 13: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಟೀಮ್ ಇಂಡಿಯಾ ಸಜ್ಜಾಗಿದೆ. ಇದೇ ಸರಣಿಯಲ್ಲಿ ವಿಶಿಷ್ಠ ದಾಖಲೆಗಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕಾದಾಡಲಿದ್ದಾರೆ.
ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೊದಲು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅನಂತರ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಅಂದ್ಹಾಗೆ ದಾಖಲೆ ಬರೆಯಲು ಕೊಹ್ಲಿ ಮತ್ತು ಶರ್ಮಾ ಪಾಲಿಗೆ ಟಿ20ಐ ಸರಣಿ ಮುಖ್ಯವೆನಿಸಿದೆ.
ಈ ಟಿ20ಐ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಅವರ ಹೆಸರಿನಲ್ಲಿ ವಿಶೇಷ ದಾಖಲೆ ನಿರ್ಮಾಣವಾಗಲಿದೆ.

ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಇಬ್ಬರಿಗೂ ವೈಯಕ್ತಿಯ ದಾಖಲೆ ಬರೆಯಲು ಅವಕಾಶವಿದೆ. ಇಬ್ಬರೂ ಭಾರತ ತಂಡದಲ್ಲಿ ಅಪಾಯಕಾರಿ ಆಟಗಾರರಾಗಿರುವುದರಿಂದ ಈ ಜೋಡಿ ಉತ್ತಮ ಆಟ ಪ್ರದರ್ಶಿಸಿದರೆ, ಅದು ತಂಡದ ಗೆಲುವಿಗೂ ಸಹಕಾರಿಯಾಗಲಿದೆ.

ರೋಹಿತ್ ಮೊದಲಿಗ
ಅಂತಾರಾಷ್ಟ್ರೀಯ ಟಿ20ಯಲ್ಲಿ ಹಿಟ್‌ಮ್ಯಾನ್ ರೋಹಿತ್ ಸದ್ಯ ಅತ್ಯಧಿಕ ರನ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಟಿ20ಐ 88 ಇನ್ನಿಂಗ್ಸ್‌ಗಳಲ್ಲಿ ರೋಹಿತ್ 2422 ರನ್ ಗಳಿಸಿದ್ದಾರೆ. ಆದರೆ ರೋಹಿತ್ ಬೆನ್ನಲ್ಲೇ ಕೊಹ್ಲಿಯೂ ಇರೋದ್ರಿಂದ ಆಫ್ರಿಕಾ ಟಿ20 ಸರಣಿ ಅತ್ಯಧಿಕ ರನ್ ಪಟ್ಟಿಯಲ್ಲಿ ಬದಲಾವಣೆ ತರಲೂಬಹುದು.

ಕೊಹ್ಲಿಗೆ 54 ರನ್ ಬೇಕು
ಟಿ20ಐನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ಶರ್ಮಾ ಅವರನ್ನು ಮೀರಿಸಲು ಕೊಹ್ಲಿಗೆ ಕೇವಲ 54 ರನ್ ಬೇಕು. 65 ಟಿ20ಐ ಇನ್ನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ 2369 ರನ್‌ನೊಂದಿಗೆ ಸದ್ಯ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ಟಿ20 ಸರಣಿಯಲ್ಲಿ ಕೊಹ್ಲಿ, ರೋಹಿತ್ ಅವರನ್ನು ಮೀರಿಸಬಹುದು ಅಥವಾ ರೋಹಿತ್, ಕೊಹ್ಲಿಗೆ ಅಂತರ ಕಾಯ್ದಿರಿಸಕೊಳ್ಳಲೂಬಹುದು.

ಗಪ್ಟಿಲ್‌ಗೆ 3ನೇ ಸ್ಥಾನ
ಟಿ20ಐ ಅತ್ಯಧಿಕ ರನ್ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (2283 ರನ್) 3ನೇ ಸ್ಥಾನ, ಪಾಕಿಸ್ತಾನದ ಶೋಯೆಬ್ ಮಲ್ಲಿಕ್ (2263) 4ನೇ ಸ್ಥಾನ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ (2283) 5ನೇ ಸ್ಥಾನ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications