Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋ

ವಿರಾಟ್ ಹಿಡಿದ ಕ್ಯಾಚ್ ನೋಡಿ ಶಾಕ್ ಆದ್ರು ಕ್ರಿಕೆಟ್ ಅಭಿಮಾನಿಗಳು..! | Virat Kohli
India vs South Africa: Virat Kohli takes sensational catch

ಮೊಹಾಲಿ, ಸೆಪ್ಟೆಂಬರ್ 18: ಅದ್ಭುತ ಕ್ಯಾಚ್‌ಗಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬುಧವಾರ (ಸೆಪ್ಟೆಂಬರ್ 18) ಗಮನ ಸೆಳೆದಿದ್ದಾರೆ. ಮೊಹಾಲಿಯಲ್ಲಿನ ಭಾರತ vs ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ಆಕರ್ಷಕ ಕ್ಯಾಚ್‌ ಮೂಲಕ ಕೊಹ್ಲಿ, ದಕ್ಷಿಣ ಆಫ್ರಿಕಾ ನಾಯಕ ಕ್ವಿಂಟನ್ ಡಿ ಕಾಕ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಪರ ಡಿ ಕಾಕ್ ಉತ್ತಮ ಆರಂಭ ನೀಡಿದ್ದರು. ತಂಡದ ಪರ ಅರ್ಧ ಶತಕ ಪೂರೈಸಿದ ಡಿ ಕಾಕ್ ಭಾರತಕ್ಕೆ ಒತ್ತಡ ಹೇರಲಾರಂಭಿಸಿದ್ದರು. ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದ ಡಿ ಕಾಕ್ 11.2ನೇ ಓವರ್‌ನಲ್ಲಿ ನವದೀಪ್ ಸೈನಿ ಎಸೆತಕ್ಕೆ ಬ್ಯಾಟ್‌ ಬೀಸಿದರು.

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್

1
46111

ಡಿ ಕಾಕ್ ಬ್ಯಾಟ್‌ ತಾಗಿದ ಚೆಂಡು ಚಿಮ್ಮಿತು. ಆ ವೇಳೆ ಮಿಡ್‌ ಆಫ್‌ನಿಂದ ಓಡಿ ಬಂದ ಕೊಹ್ಲಿ ಜಿಗಿದು ಅದ್ಭುತ ರೀತಿಯಲ್ಲಿ ಚೆಂಡನ್ನು ಕ್ಯಾಚ್‌ ಮಾಡಿದರು. ಕೊಹ್ಲಿ ಕ್ಯಾಚ್‌ನಿಂದಾಗಿ ಡಿ ಕಾಕ್ 52 ರನ್‌ಗೆ (37 ಎಸೆತ) ನಿರ್ಗಮಿಸಬೇಕಾಯಿತು.

ಡಿ ಕಾಕ್ 52 (37 ಎಸೆತ), ತೆಂಬ ಬವುಮಾ 49 (43), ಡೇವಿಡ್ ಮಿಲ್ಲರ್ 18, ಡ್ವೈನ್ ಪ್ರಿಟೋರಿಯಸ್ ಅಜೇಯ 10, ಆ್ಯಂಡಿಲೆ ಫೆಹ್ಲುಕ್ವಾಯೊ ಅಜೇಯ 8 ರನ್‌ನೊಂದಿಗೆ ದಕ್ಷಿಣ ಆಫ್ರಿಕಾ 20 ಓವರ್‌ಗೆ 5 ವಿಕೆಟ್ ಕಳೆದು 149 ರನ್ ಮಾಡಿತು.

Story first published: Wednesday, September 18, 2019, 21:57 [IST]
Other articles published on Sep 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+