IND vs SA Final: ಫೈನಲ್ ಪಂದ್ಯಕ್ಕೆ ಮಳೆ ಕಾಟ: ನೇರ ಪ್ರಸಾರ, ಪಿಚ್ ವರದಿ, ಸಮಯ, ತಂಡಗಳ ಪ್ಲೇಯಿಂಗ್ ಇಲೆವೆನ್ ಮಾಹಿತಿ
ಭಾರತದಲ್ಲಿ ಸುಮಾರು ಒಂದು ತಿಂಗಳಿಂದ ನಡೆಯುತ್ತಿದ್ದ ಮಹಿಳಾ ಕ್ರಿಕೆಟ್ ಕಲರವ ಕೊನೆಯ ಹಂತಕ್ಕೆ ಬಂದು ನಿಂತಿದೆ. ಆತಿಥೇಯ ತಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ಕಾದಾಟದಲ್ಲಿ ಮುಖಾಮುಖಿ ಆಗಿವೆ. ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 28, ಸೆಮಿಫೈನ್‌ನಲ್ಲಿ 2 ಪಂದ್ಯಗಳು ಈಗಾಗಲೇ ನಡೆದಿದ್ದು, ಎಲ್ಲರ ಚಿತ್ತ ಫೈನಲ್ ಪಂದ್ಯದ ಮೇಲೆ ನೆಟ್ಟಿದೆ.
ಈಗಾಗಲೇ ಉಭಯ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿ ಆಗಿದ್ದವು. ಆಗ ದಕ್ಷಿಣ ಆಫ್ರಿಕಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಆದರೆ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಧಾಟಿ ಭರವಸೆಯ ಹೆಚ್ಚಿದೆ. ಈ ಬಾರಿ ಯಾರೇ ಫೈನಲ್ ಗೆದ್ದರೂ ಇತಿಹಾಸ ಸೃಷ್ಟಿ ಆಗುವುದು ಗ್ಯಾರಂಟಿ. ಈ ಪಂದ್ಯದ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಇನ್ನೊಂದು ಗೆಲುವಿಗಾಗಿ ಹರಕೆ ಕಟ್ಟಿದ್ದಾರೆ.

ಪಂದ್ಯ ಆರಂಭವಾಗುವುದು ಯಾವಾಗ? ಟಾಸ್ ಟೈಮ್ ಏನು?
ಭಾರತ, ದಕ್ಷಿಣ ಆಫ್ರಿಕಾ ನಡುವಣ ಫೈನಲ್ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ. ಅರ್ಧ ಗಂಟೆ ಮುಂಚಿತವಾಗಿ ಅಂದರೆ 2.30ಕ್ಕೆ ಟಾಸ್ ನಡೆಯಲಿದೆ.
ಪಿಚ್ ಹೇಗಿದೆ?
ಮುಂಬೈನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವು ನೀಡಲಿದೆ. ಇನ್ನು ಎರಡನೇ ಇನಿಂಗ್ಸ್ ವೇಳೆ ಮಂಜಿನ (dew) ಪ್ರಭಾವವೂ ಬೀಳಬಹುದು. ಹೀಗಾಗಿ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಪಂದ್ಯಕ್ಕೆ ಮಳೆ ಕಾಟ ನೀಡಿದರೆ...
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಫೈನಲ್ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ದೇಶದಲ್ಲಿ ಸದ್ಯ ಮಳೆ ಸುರಿಯುತ್ತಿದ್ದು, ಸಂಜೆ 5 ಗಂಟೆಯ ಮೇಲೆ ಮಳೆ ಕಾಟ ನೀಡಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮಳೆಯಿಂದಾಗಿ ಭಾನುವಾರದ ಪಂದ್ಯಕ್ಕೆ ಅಡಚಣೆ ಆದರೆ, ಸೋಮವಾರ ಮತ್ತೆ ಪಂದ್ಯವನ್ನು ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಆಡಿಸುತ್ತಾರೆ.
ಪಂದ್ಯವನ್ನು ಟಿವಿ ಹಾಗೂ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ನೋಡಬಹುದಾಗಿದೆ.
ಭಾರತದ ಸಂಭಾವ್ಯ ತಂಡ ಹೇಗಿರಲಿದೆ?
ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ರಾಧಾ ಯಾದವ್/ಸ್ನೇಹಾ ರಾಣಾ, ಕ್ರಾಂತಿ ಗೌಡ, ಶ್ರೀ ಚರಾನಿ, ರೇಣುಕಾ ಸಿಂಗ್
ಹೇಗಿರಲಿದೆ ದಕ್ಷಿಣ ಆಫ್ರಿಕಾ ತಂಡ?
ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಅನ್ನೆಕೆ ಬಾಷ್/ಮಸಾಬಟಾ ಕ್ಲಾಸ್, ಸುನೆ ಲೂಸ್, ಮಾರಿಜಾನ್ನೆ ಕಪ್, ಸಿನಾಲೊ ಜಾಫ್ಟಾ (ವಿಕೆಟ್ ಕೀಪರ್), ಅನ್ನೆರಿ ಡರ್ಕ್ಸೆನ್, ಕ್ಲೋಯ್ ಟ್ರಯಾನ್, ನದೀನ್ ಡಿ ಕ್ಲರ್ಕ್, ಆಯಾಬೊಂಗ ಖಾಕಾ, ನೋನ್ಕುಲುಲೆಕೊ ಮ್ಲಾಬಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications