ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ
ದಂಬುಲಾ, ಆಗಸ್ಟ್ 20: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಟೀಂ ಇಂಡಿಯಾವು 9 ವಿಕೆಟ್ ಗಳಿಂದ ಸುಲಭ ಜಯ ಸಾಧಿಸಿದೆ. ಶ್ರೀಲಂಕಾ ನೀಡಿದ್ದ 217ರನ್ ಗಳ ಸುಲಭ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ್ದ ಭಾರತಕ್ಕೆ
ಶಿಖರ್ ಧವನ್ ಅವರ ಶತಕ ಹಾಗೂ ವಿರಾಟ್ ಕೊಹ್ಲಿ ಅವರ ಅರ್ಧಶತಕ ನೆರವು ಸಿಕ್ಕಿತು.
ಗ್ಯಾಲರಿ: ಶ್ರೀಲಂಕಾ ಪ್ರವಾಸದಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ
28.5 ಓವರ್ ಗಳಲ್ಲಿ ಗುರಿ ಮುಟ್ಟಿದ ಟೀಂ ಇಂಡಿಯಾ 220/1 ಸ್ಕೋರ್ ಮಾಡಿ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮ ಅವರು 4 ರನ್ ಗಳಿಸಿ ಔಟಾಗಿ, ನಿರಾಶೆ ಮೂಡಿಸಿದರು. ಶಿಖರ್ ಧವನ್ 90 ಎಸೆತಗಳಲ್ಲಿ 132 ರನ್ (20 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ 70 ಎಸೆತಗಳಲ್ಲಿ 82ರನ್ (10 ಬೌಂಡರಿ, 1 ಸಿಕ್ಸರ್) ಬಾರಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶ್ರೀಲಂಕಾ ಪರ ಡಿಕ್ ವೆಲ್ಲಾ (64 ರನ್) ಗುಣತಿಲಕ (35ರನ್ ) ಅವರು 74 ರನ್ ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಮಿಕ್ಕಂತೆ ನಾಯಕ ಏಂಜೆಲೋ ಮ್ಯಾಥ್ಯೂಸ್ ಹಾಗೂ ಕುಸಲ್ ಮೆಂಡಿಸ್ ತಲಾ 36ರನ್ ಗಳಿಸಿದರು. ಆದರೆ, ಭಾರತದ ಸ್ಪಿನ್ ದಾಳಿಗೆ ತತ್ತರಿಸಿ, 43.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 216 ಸ್ಕೋರಿಗೆ ಆಲೌಟ್ ಆಯಿತು. ಅಕ್ಷರ್ ಪಟೇಲ್ ಪ್ರಮುಖ 3 ವಿಕೆಟ್ ಕಬಳಿಸಿದರು. ಕೇದಾರ್ ಜಾಧವ್, ಯಜುವೇಂದ್ರ ಚಹಾಲ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ 2 ವಿಕೆಟ್ ಪಡೆದರು.
ತಂಡಗಳು:
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್.
ಶ್ರೀಲಂಕಾ : ನಿರೋಷನ್ ಡಿಕ್ ವೆಲ್ಲಾ(ವಿಕೆಟ್ ಕೀಪರ್), ದನುಷ್ಕಾ ಗುಣತಿಲಕ, ಕುಸಾಲ್ ಮೆಂಡಿಸ್, ಉಪುಲ್ ಥರಂಗಾ (ನಾಯಕ), ಏಂಜೆಲೋ ಮ್ಯಾಥ್ಯೂಸ್, ಚಾಮರಾ ಕಪುಗೆದರಾ, ವಾನಿಡು ಹಸರಂಗಾ, ಥಿಸರಾ ಪೆರೆರಾ, ಲಕ್ಷನ್ ಸಂದಕಾನ್, ವಿಶ್ವ ಫರ್ನಾಂಡೋ, ಲಸಿತ್ ಮಾಲಿಂಗ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications