
ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭದಿಂದಲೇ ಸ್ಪೋಟಕ ಪ್ರದರ್ಶನ ನೀಡಿ ಭಾರತದ ಬೌಲಿಂಗ್ ವಿರುದ್ಧ ಮೇಲುಗೈ ಸಾಧಿಸಿತು. ಒಂದು ಹಂತದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದರಾದರೂ ಸ್ಲಾಗ್ ಓವರ್‌ಗಳಲ್ಲಿ ಮತ್ತೆ ಶ್ರೀಲಂಕಾ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಭಾರತದ ವಿರುದ್ಧ ಶ್ರೀಲಂಕಾ ಆರಂಭಿಕರು ಸ್ಪೋಟಕ ಪ್ರದರ್ಶನ ನೀಡಲು ಆರಂಭಿಸಿದರು. ಅದರಲ್ಲೂ ಕುಸಾಲ್ ಮೆಂಡಿಸ್ ಟೀಮ್ ಇಂಡಿಯಶ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸುತ್ತಾ ಸಾಗಿದರು. ಈ ಜೋಡಿ 8.2 ಓವರ್‌ಗಳಲ್ಲಿ 80 ರನ್ ಕಲೆ ಹಾಕಿ ಬೇರ್ಪಟ್ಟಿತು. ಮೆಂಡಿಸ್ 31 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿ ಮಿಂಚಿದರು. ಪಾತುಮ್ ನಿಸ್ಸಂಕ 33 ರನ್‌ಗಳ ಕೊಡುಗೆ ನೀಡಿದರು.
ಭಾನುಕ ರಾಜಪಕ್ಸೆ ಹಾಗೂ ಧನಂಜಯ ಡಿಸಿಲ್ವ ಒಂದಂಕಿಗೆ ವಿಕೆಟ್ ಒಪ್ಪಿಸಿದರಾದರೂ ಅಸಲಂಕಾ ಹಾಗೂ ನಾಯಕ ಶನಕ ಅಮೋಗ ಪ್ರದರ್ಶನ ನೀಡಿ ಮಿಂಚಿದ್ದಾರೆ. ಅಸಲಂಕಾ 19 ಎಸೆತಗಳಲ್ಲಿ 37 ರನ್‌ಗಳಿಸಿದರೆ ನಾಯಕ ಶನಕ ಸ್ಲಾಗ್ ಓವರ್‌ನಲ್ಲಿ ರನ್ ಮಳೆ ಹರಿಸಿದರು. 22 ಎಸೆತಗಳಲ್ಲಿ 56 ರನ್ ಸಿಡಿಸಿ ಅಜೇಯವಾಗುಳಿದಿದರು. ಈ ಮೂಲಕ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 206 ರನ್ ಕಲೆಹಾಕಿದೆ.
ಭಾರತ ಆಡುವ ಬಳಗ
ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್
ಶ್ರೀಲಂಕಾ ಆಡುವ ಬಳಗ
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ