ಭಾರತ-ಶ್ರೀಲಂಕಾ ನಡುವಿನ ಮೊದಲೆರಡು ಏಕದಿನ ಪಂದ್ಯಗಳ ಸಮಯ ಬದಲಾವಣೆ

Posted By:

ಮುಂಬೈ, ನವೆಂಬರ್ 20: ಭಾರತ-ಶ್ರೀಲಂಕಾ ನಡುವಿನ ಮೊದಲೆರಡು ಏಕದಿನ ಪಂದ್ಯಗಳು ನಡೆಯುವ ಸಮಯವನ್ನು ಭಾರತೀಯ ಕ್ರಿಕೆಟ್ ಸಮಿತಿ ಬದಲಾವಣೆ ಮಾಡಿದೆ.

ಮೊದಲ ಟೆಸ್ಟ್ : ಭಾರತದ ವಿರುದ್ಧ ಲಂಕಾಕ್ಕೆ 122ರನ್ ಗಳ ಮುನ್ನಡೆ

ಡಿಸೆಂಬರ್ 10 ಮತ್ತು ಡಿ. 13 ಧರ್ಮಶಾಲಾ ಹಾಗೂ ಮೊಹಾಲಿಯಲ್ಲಿ ನಡೆಯುವ ಹಗಲು ರಾತ್ರಿಯ ಪಂದ್ಯಗಳು ಎರಡು ಗಂಟೆ ಮುಂಚಿತವಾಗಿ ಆರಂಭವಾಗಲಿವೆ ಎಂದು ಬಿಸಿಸಿಐ ತಿಳಿಸಿದೆ. ಡಿಸೆಂಬರ್ ವೇಳೆ ಉತ್ತರ ಭಾರತದಲ್ಲಿ ಸಾಕಷ್ಟು ಚಳಿ ಇರುವುದರಿಂದ ಆಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಸಿಸಿಐ ಈ ತೀರ್ಮಾನ ಕೈಗೊಂಡಿದೆ.

India vs Sri Lanka 2017: BCCI Announces Change in Timings of First Two ODIs

ಡಿಸೆಂಬರ್ 10 ಮತ್ತು ಡಿ. 13 ಧರ್ಮಶಾಲಾ ಹಾಗೂ ಮೊಹಾಲಿಯಲ್ಲಿ ಮಧ್ಯಾಹ್ನ 1.30ರಿಂದ ಆರಂಭವಾಗಬೇಕಿದ್ದ ಪಂದ್ಯಗಳು ಬೆಳಗ್ಗೆ 11.30ಕ್ಕೆ ಆರಂಭವಾಗಲಿದ್ದು, ಡಿಸೆಂಬರ್ 17ರಂದು ಮೂರನೇ ಏಕದಿನ ಪಂದ್ಯ ವೇಳಾಪಟ್ಟಿಯಂತೆ ವೈಜಾಗ್ ನಲ್ಲಿ 1.30ಕ್ಕೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಏಕದಿನ ಪಂದ್ಯಗಳು ಮುಗಿದ ಬಳಿಕ ಮೂರು ಟಿ20 ಪಂದ್ಯಗಳು ನಡೆಯಲಿವೆ. ಮೊದಲನೇ ಟಿ20 ಪದ್ಯ ಡಿಸೆಂಬರ್ 20 ಕಟಕ್, 2ನೇ ಪಂದ್ಯ ಡಿ. 22 ಇಂದೋರ್ ಹಾಗೂ ಅಂತಿಮ 3 ಪಂದ್ಯ ಡಿ. 24ರಂದು ನಡೆಯಲಿದೆ.

Story first published: Monday, November 20, 2017, 9:12 [IST]
Other articles published on Nov 20, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ