ಟಿ20ಐ ತ್ವರಿತಗತಿ ಶತಕ, ಮಿಲ್ಲರ್ ದಾಖಲೆ ಸಮಕ್ಕೆ ನಿಂತ ರೋಹಿತ್
ಇಂದೋರ್, ಡಿಸೆಂಬರ್ 22: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದಿರುವ ಶ್ರೀಲಂಕಾ ತಂಡದ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಕೇವಲ 35 ಎಸೆತಗಳಲ್ಲಿ ನೂರು ಗಡಿ ದಾಟಿದ್ದಾರೆ. ಈ ಮೂಲಕ ಟಿ20ಐಯಲ್ಲಿ ದಾಖಲಾಗಿದ್ದ ತ್ವರಿತಗತಿ ಶತಕದ ದಾಖಲೆಯ ಸಮಕ್ಕೆ ನಿಂತಿದ್ದಾರೆ.
ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರು ಬಾಂಗ್ಲಾದೇಶ ವಿರುದ್ಧ 2017ರ ಅಕ್ಟೋಬರ್ 29ರಂದು 35 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ರೋಹಿತ್ ಶರ್ಮ ಅವರು ಶ್ರೀಲಂಕಾದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 35 ಎಸೆತಗಳಲ್ಲಿ 101ರನ್ ಚೆಚ್ಚಿದರು. ಅಂತಿಮವಾಗಿ 43 ಎಸೆತಗಳಲ್ಲಿ 118ರನ್(12 ಬೌಂಡರಿ, 10 ಸಿಕ್ಸರ್) ಬಾರಿಸಿ ಚಮೀರಾಗೆ ವಿಕೆಟ್ ಒಪ್ಪಿಸಿದರು.
ಭಾರತದ ಪರ ಈ ಮುಂಚೆ ಕೆಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ 46 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ಕೆಎಲ್ ರಾಹುಲ್ ಅವರು 49 ಎಸೆತಗಳಲ್ಲಿ 89ರನ್ ಗಳಿಸಿ ಔಟಾದರು.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications