For Quick Alerts
ALLOW NOTIFICATIONS  
For Daily Alerts
 

Ind vs SL 2nd T20 : ಅಕ್ಷರ್, ಸೂರ್ಯ ಹೋರಾಟ ವ್ಯರ್ಥ: ರೋಚಕವಾಗಿ ಸೆಣೆಸಾಡಿ ಸೋಲು ಕಂಡ ಭಾರತ

India vs Sri Lanka 2nd T20I: Team India lost Sri Lanka by 16 runs

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕವಾಗಿ ಸೆಣೆಸಾಡಿದ ಬಳಿಕ ಸೋಲು ಅನುಭವಿಸಿದೆ. ಹೀನಾಯ ಸೋಲಿನತ್ತ ಮುಖಮಾಡಿದ್ದ ಟೀಮ್ ಇಂಡಿಯಾ ಪರವಾಗಿ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಮೋಘ ಪ್ರದರ್ಶನದ ಕಾರಣದಿಂದಾಗಿ ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಆದರೆ ಅಂತಿಮವಾಗಿ ಟೀಮ್ ಇಂಡಿಯಾ 16 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಶ್ರೀಲಂಕಾ ನೀಡಿದ 207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಒಂದು ಹಂತದಲ್ಲಿ ಹೀನಾಯ ಸೋಲು ಅನುಭವಿಸುವ ಭೀತಿಯನ್ನು ಎದುರಿಸಿತ್ತು. ಅಗ್ ಕ್ರಮಾಂಕದ ಆಟಗಾರರು ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಕಾರಣ ಟೀಮ್ ಇಂಡಿಯಾ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಜೋಡಿ ಅದ್ಭುತವಾಗಿ ರನ್ ಮೇಲೇರಿಸುತ್ತಾ ಸಾಗಿದರು.

ಅಕ್ಷರ್ ಸೂರ್ಯ ಅಮೋಘ ಜೊತೆಯಾಟ

ಅಕ್ಷರ್ ಸೂರ್ಯ ಅಮೋಘ ಜೊತೆಯಾಟ

ಒಂದೆಡೆ ಸೂರ್ಯಕುಮಾರ್ ಯಾದವ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಾ ವಿಕೆಟ್ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರೆ ಮತ್ತೊಂದು ತುದಿಯಲ್ಲಿದ್ದ ಅಕ್ಷರ್ ಪಟೇಲ್ ರನ್ ವೇಗ ಹೆಚ್ಚಿಸುತ್ತಾ ಸಾಗಿದರು. ಬಳಿಕ ಸೂರ್ಯಕುಮಾರ್ ಯಾದವ್ ಕೂಡ ಆಟದ ಗತಿ ಬದಲಾಯಿಸಿ ರನ್ ವೇಗ ಹೆಚ್ಚಿಸಿದರು. ಈ ಜೋಡಿ ಕೇವಲ 40 ಎಸೆತಗಳಲ್ಲಿ 97 ರನ್‌ಗಳಿಸಿ ಭಾರತ ತಂಡಕ್ಕೆ ಗೆಲುವಿನ ಭರವಸೆ ಮುಡಿಸಿದರು. ಆದರೆ 16ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೆ ಶ್ರೀಲಂಕಾ ಮೇಲುಗೈ ಸಾಧಿಸಿತು. 36 ಎಸೆತಗಳಲ್ಲಿ 51 ರನ್‌ಗಳಿಸಿ ಸೂರ್ಯ ಔಟಾದರು

ಕೊನೆಯ ಹಂತದವರೆಗೂ ಹೋರಾಡಿದ ಭಾರತ

ಕೊನೆಯ ಹಂತದವರೆಗೂ ಹೋರಾಡಿದ ಭಾರತ

ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಶಿವಂ ಮಾವಿ ಕೂಡ ರನ್ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗುವ ಮೂಲಕ ಭಾರತದ ಹೋರಾಟವನ್ನು ಚಾಲ್ತಿಯಲ್ಲಿರಿಸಿದರು. ಮತ್ತೊಂದು ತುದಿಯಲ್ಲಿದ್ದ ಅಕ್ಷರ್ ಪಟೇಲ್ ಕೂಡ ಸ್ಪೋಟಕ ಪ್ರದರ್ಶನ ಮುಂದುವರಿಸಿದರು. ಅಂತಿಮ ಓವರ್‌ನಲ್ಲಿ ಗೆಲುವಿಗೆ 21 ರನ್‌ಗಳನ್ನು ಗಳಿಸುವ ಸವಾಲು ಭಾರತದ ಮುಂದಿತ್ತು. ಆದರೆ ಅಂತಿಮ ಓವರ್ ಎಸೆದ ಲಂಕಾ ನಾಯಕ ದಸುನ್ ಶನಕ ಕೇವಲ 4 ರನ್‌ ನೀಡಿದ್ದಲ್ಲದೆ ಅಕ್ಷರ್ ಪಟೇಲ್ ಹಾಗೂ ಶಿವಂ ಮಾವಿ ವಿಕೆಟ್ ಪಡೆದುಕೊಂಡರು. 31 ಎಸೆತ ಎದುರಿಸಿ 65 ರನ್‌ಗಳಿಸಿದ ಅಕ್ಷರ್ ಪಟೇಲ್ ಭಾರತದ ಸೋಲಿನಲ್ಲೂ ವಿಶೇಷ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಇನ್ನು ಶಿವಂ ಮಾವಿ ಕೂಡ 15 ಎಸೆತಗಳಲ್ಲಿ 26 ರನ್ ಸಿಡಿಸಿ ಗಮನಸೆಳೆದಿದ್ದಾರೆ. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 190 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಬ್ಯಾಟಿಂಗ್‌ನಲ್ಲಿಯೂ ಲಂಕಾ ಅದ್ಭುತ ಪ್ರದರ್ಶನ

ಬ್ಯಾಟಿಂಗ್‌ನಲ್ಲಿಯೂ ಲಂಕಾ ಅದ್ಭುತ ಪ್ರದರ್ಶನ

ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಲಂಕಾ ಪರವಾಗಿ ಆರಂಭಿಕರು ಸ್ಪೋಟಕ ಪ್ರದರ್ಶನ ನೀಡಲು ಆರಂಭಿಸಿದರು. ಅದರಲ್ಲೂ ಕುಸಾಲ್ ಮೆಂಡಿಸ್ ಟೀಮ್ ಇಂಡಿಯಾ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸುತ್ತಾ ಸಾಗಿದರು. ಈ ಜೋಡಿ 8.2 ಓವರ್‌ಗಳಲ್ಲಿ 80 ರನ್ ಕಲೆ ಹಾಕಿ ಬೇರ್ಪಟ್ಟಿತು. ಮೆಂಡಿಸ್ 31 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿ ಮಿಂಚಿದರು. ಪಾತುಮ್ ನಿಸ್ಸಂಕ 33 ರನ್‌ಗಳ ಕೊಡುಗೆ ನೀಡಿದರು. ಭಾನುಕ ರಾಜಪಕ್ಸೆ ಹಾಗೂ ಧನಂಜಯ ಡಿಸಿಲ್ವ ಒಂದಂಕಿಗೆ ವಿಕೆಟ್ ಒಪ್ಪಿಸಿದರಾದರೂ ಅಸಲಂಕಾ ಹಾಗೂ ನಾಯಕ ಶನಕ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಅಸಲಂಕಾ 19 ಎಸೆತಗಳಲ್ಲಿ 37 ರನ್‌ಗಳಿಸಿದರೆ ನಾಯಕ ಶನಕ ಸ್ಲಾಗ್ ಓವರ್‌ನಲ್ಲಿ ರನ್ ಮಳೆ ಹರಿಸಿದರು. 22 ಎಸೆತಗಳಲ್ಲಿ 56 ರನ್ ಸಿಡಿಸಿ ಅಜೇಯವಾಗುಳಿದಿದರು. ಈ ಮೂಲಕ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 206 ರನ್ ಕಲೆಹಾಕಿತು.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಭಾರತ ಆಡುವ ಬಳಗ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ

ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ

Story first published: Thursday, January 5, 2023, 22:48 [IST]
Other articles published on Jan 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+