ಭಾರತ vs ಶ್ರೀಲಂಕಾ 2ನೇ ಟೆಸ್ಟ್: ಡೇ-ನೈಡ್ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಸಜ್ಜು; ಹವಾಮಾನ ವರದಿ, ಪಿಚ್ ರಿಪೋರ್ಟ್

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಈಗಾಗಲೇ ಅಂತ್ಯವಾಗಿದ್ದು ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಎರಡನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು ಈ ಪಂದ್ಯ ಡೇ-ನೈಟ್ ಪಂದ್ಯ ಎಂಬುದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಮೊದಲ ಪಿಂಕ್‌ಬಾಲ್ ಟೆಸ್ಟ್ ಪಂದ್ಯ ಇದಾಗಿದೆ.
ಮೊಹಾಲಿಯಲ್ಲಿ ನಡದ ಮೊದಲ ಟೆಸ್ಟ್ ಪಂದ್ಯ ಸಂಪೂರ್ಣ ಏಕಮುಖವಾಗಿ ಸಾಗಿತ್ತು. ಭಾರತ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಯ ಮುಂದೆ ಶ್ರೀಲಂಕಾ ಸಂಪೂರ್ಣ ನೆಲಕಚ್ಚಿತ್ತು. ಬ್ಯಾಟಿಂಗ್‌ನಲ್ಲಿ ಹಾಗೂ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜ ಶ್ರೇಷ್ಠ ಪ್ರದರ್ಶನ ನೀಡಿದರು. ಜಡೇಜಾ ಬ್ಯಾಟಿಂಗ್‌ನಲ್ಲಿ 175 ರನ್ ಸಿಡಿಸಿ ಮಿಂಚಿದ್ದರೆ ನಂತರ ಬೌಲಿಂಗ್‌ನಲ್ಲಿ ಎರಡು ಇನ್ನಿಂಗ್ಸ್‌ನಲ್ಲಿ ಒಟ್ಟು 9 ವಿಕೆಟ್ ಸಂಪಾದಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 222 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಇದೀಗ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಇತ್ತ ದಿಮುತ್ ಕರುಣರತ್ನೆ ನೇತೃತ್ವದ ಲಂಕಾ ಪಡೆ ಭಾರತದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಪ್ರದರ್ಶನ ನಿಡು ವಿಶ್ವಾಸದಲ್ಲಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಗಳಿಸಲು ದೃಷ್ಟಿನೆಟ್ಟಿದೆ.
ಈ ವರದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿಯ ಬಗ್ಗೆ ಕೆಲ ಮಾಹಿತಿಗಳನ್ನು ನೋಡೋಣ

ಬೆಂಗಳೂರು ಹವಾಮಾನ ವರದಿ
ಸಾಮಾನ್ಯವಾಗಿ ಬೆಂಗಳೂರು ಶುಷ್ಕ ವಾತಾವರಣವನ್ನು ಹೊಂದಿದೆ. ಆದರೆ ಪಂದ್ಯದ ಮದ್ಯಂತರದ ಬಳಿಕ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸುತ್ತಿದೆ. 14, 15 ಹಾಗೂ 16ನೇ ತಾರೀಕಿನಂದು ಮಳೆಯಿಂದಾಗಿ ಸಣ್ಣ ಪ್ರಮಾಣದ ಅಡ್ಡುಯಾಗುವ ಸಂಭವವಿದೆ. ಇನ್ನು ಪಂದ್ಯದುದ್ದಕ್ಕೂ 18ರಿಂದ 33 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ರಿಪೋರ್ಟ್
ಚಿನ್ನ ಸ್ವಾಮಿ ಕ್ರೀಡಾಂಗಣ ಸಾಮಾನ್ಯವಾಗಿ ಹುಲ್ಲಿನಿಂದ ಕೂಡಿದ ಪಿಚ್‌ಅನ್ನು ಒಳಗೊಂಡಿರುತ್ತದೆ. ಅಂದರೆ ಮೊದಲ ಮೂರು ದಿನಗಳ ಕಾಲ ವೇಗದ ಬೌಲರ್‌ಗಳು ಈ ಪಿಚ್‌ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ದಿನಕಳೆದಂತೆ ಪಿಚ್‌ನಲ್ಲಿ ಬಿರುಕುಕಾಣಿಸಿಕೊಳ್ಳಲಿದ್ದು ಸ್ಪಿನ್ನರ್‌ಗಳ ಪರವಾಗಿ ಪಿಚ್ ವರ್ತಿಸಲಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಬೆಂಗಳೂರು ಪಿಚ್‌ನ ಹಿನ್ನಲೆಯನ್ನು ಗಮನಿಸಿದರೆ ಮೊದಲ ಮೂರು ದಿನಗಳ ಕಾಲ ಬ್ಯಾಟರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಹೀಗಾಗಿ ಮೊದಲ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರಮಾಣದ ರನ್ ಹರಿದುಬರುವ ನಿರೀಕ್ಷೆಯಿದೆ. ಇನ್ನು ಟಾಸ್ ಗೆದ್ದ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಸ್ಪಷ್ಟ. ಇನ್ನು ಡೇ-ನೈಟ್ ಪಂದ್ಯವಾಗಿರುವ ಕಾರಣ ಎರಡೂ ತಂಡಗಳ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿ ಹೆಚ್ಚಿನ ರನ್‌ಗಳಿಸುವ ಲೆಕ್ಕಾಚಾರದಲ್ಲಿರುತ್ತಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಅಂಕಿಅಂಶಗಳು
ಒಟ್ಟು ನಡೆದ ಟೆಸ್ಟ್ ಪಂದ್ಯಗಳು: 23
ಭಾರತದ ದಾಖಲೆ: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ 23 ಪಂದ್ಯಗಳನ್ನು ಆಡಿದ್ದು ಇದರಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 9 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಈ ಮೈದಾನದಲ್ಲಿ ಆತಿಥೇಯ ಭಾರತ 6 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ.
ಗರಿಷ್ಠ ವೈಯಕ್ತಿಕ ಸ್ಕೋರ್: 2005ರಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಯೂನಿಸ್ ಖಾನ್ 267 ರನ್‌ಗಳಿಸಿದ್ದು ಈ ಮೈದಾನದಲ್ಲಿ ದಾಖಲಾದ ಹೈಯೆಸ್ಟ್ ಸ್ಕೋರ್. 2009ರಲ್ಲಿ ಪಾಕಿಸ್ತಾನದ ವಿರುದ್ಧ ಸೌರವ್ ಗಂಗೂಲಿ 239 ರನ್ ಗಳಿಸಿದ್ದು ಭಾರತೀಯರ ಗರಿಷ್ಠ ಸ್ಕೋರ್ ಆಗಿದೆ.
ಮೊದಲು ಬ್ಯಾಟಿಂಗ್ ಗೆದ್ದ ಪಂದ್ಯಗಳು: 9
ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು: 5
ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ: 362
2ನೇ ಇನಿಂಗ್ಸ್‌ನ ಸರಾಸರಿ ಸ್ಕೋರ್: 314
3ನೇ ಇನಿಂಗ್ಸ್‌ನ ಸರಾಸರಿ ಸ್ಕೋರ್: 204
4ನೇ ಇನಿಂಗ್ಸ್‌ನ ಸರಾಸರಿ ಸ್ಕೋರ್: 183
ಗರಿಷ್ಠ ಮೊತ್ತ: 2007/08 ರಲ್ಲಿಪಾಕಿಸ್ತಾನದ ವಿರುದ್ಧ ಭಾರತ 626/10
ಕನಿಷ್ಠ ಮೊತ್ತ: 2018ರಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ತಾನ 103/10
ಅತಿ ಹೆಚ್ಚು ರನ್: ಸಚಿನ್ ತೆಂಡೂಲ್ಕರ್ 9 ಟೆಸ್ಟ್‌ಗಳನ್ನು ಈ ಕ್ರೀಡಾಂಗಣದಲ್ಲಿ ಆಡಿದ್ದು 869 ರನ್ ಗಳಿಸಿದ್ದಾರೆ.
ಹೆಚ್ಚಿನ ಶತಕ: ಮುರಳಿ ವಿಜಯ್, ಮೊಹಮ್ಮದ್ ಅಜರುದ್ದೀನ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ - ತಲಾ 2 ಶತಕ
ಅತಿ ಹೆಚ್ಚು ವಿಕೆಟ್: ಅನಿಲ್ ಕುಂಬ್ಳೆ 9 ಟೆಸ್ಟ್‌ಗಳಲ್ಲಿ 41 ವಿಕೆಟ್
ಅತಿ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ಬೌಲರ್: ಅನಿಲ್ ಕುಂಬ್ಳೆ, 4 ಬಾರಿ(ಭಾರತ)

ಭಾರತ vs ಶ್ರೀಲಂಕಾ ಹೆಡ್ ಟು ಹೆಡ್
ಭಾರತ ಹಾಗೂ ಶ್ರಿಲಂಕಾ ತಂಡಗಳು ಈವರೆಗೆ 45 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಶ್ರೀಲಂಕಾ ತಂಡ 7 ಪಂದ್ಯಗಳಲ್ಲಿ ಮಾತ್ರವೇ ಗೆದ್ದಿದೆ. 17 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications