IND vs SL 3rd ODI: ಪಾರ್ದಪಣೆ ಪಂದ್ಯದಲ್ಲೇ ಶ್ರೀಲಂಕಾಕ್ಕೆ ಖೆಡ್ಡಾ ತೋಡಿದ ಪರಾಗ್!
ಆಗಸ್ಟ್ 7 ಬುಧವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನದ ಸರಣಿಯ ಮೂರನೇ ಪಂದ್ಯವು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಅಲ್ಪ ಮೊತ್ತಕ್ಕೆ ಕುಸಿದಿದೆ.
ನಿಗದಿತ 50 ಓವರ್‌ಗಳಲ್ಲಿ ಲಂಕಾ ತಂಡ 7 ವಿಕೆಟ್ ನಷ್ಟಕ್ಕೆ 248 ರನ್‌ಗಳನ್ನು ಕಲೆ ಹಾಕಿದೆ. ಭಾರತ ತಂಡದ ಪರ ಪಾರ್ದಪಣೆ ಪಂದ್ಯದಲ್ಲೇ ರಿಯಾನ್ ಪರಾಗ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಿಂಚಿದರು. ಭಾರತ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು 249 ರನ್‌ಗಳ ಅವಶ್ಯಕತೆ ಇದೆ.

ಲಂಕಾ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಅವಿಷ್ಕಾ ಫೆರ್ನಾಂಡೊ ಶತಕದಿಂದ ವಂಚಿತರಾದರು. ಫೆರ್ನಾಂಡೊ ಎದುರಿಸಿದ 102 ಎಸತೆಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 96 ರನ್ ಗಳಿಸಿ ಔಟಾದರು.
ಇನ್ನೊಂದೆಡೆ ಕುಸಾಲ್ ಮೆಂಡಿಸ್ (59) ಮತ್ತು ಪಾತುಮ್ ನಿಸ್ಸಾಂಕ (45) ಜವಾಬ್ದಾರಿಯುತ ಆಟವಾಡಿದರು. ಕೊನೆಯಲ್ಲಿ ಕಮಿಂದು ಮೆಂಡಿಸ್ 23 ರನ್ ಗಳ ಇನಿಂಗ್ಸ್ ಆಡಿ ಶ್ರೀಲಂಕಾ ನೆರವಾದರು. ಈ ಬ್ಯಾಟರ್ಸ್ ಹೊರೆತು ಪಡಿಸಿ ಲಂಕಾದ ಯಾವೊಬ್ಬ ಆಟಗಾರನೂ ತಂಡಕ್ಕೆ ಆಸರೆಯಾಗಲಿಲ್ಲ.
ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ ರಿಯಾನ್ ಪರಾಗ್ 3 ವಿಕೆಟ್ ಉರುಳಿಸಿ ಮಿಂಚಿದರೆ, ಮೊಹಮ್ಮದ ಸಿರಾಜ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಉಭಯ ತಂಡಗಳ ಪ್ಲೇಯಿಂಗ್-11
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರಿಯಾನ್ ಪರಾಗ್, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ , ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಾತುಮ್ ನಿಸ್ಸಾಂಕಾ, ಅವಿಷ್ಕಾ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್‌ಕೀಪರ್), ಸದಿರ ಸಮರವಿಕ್ರಮ, ಚರಿತ್ ಅಸಲಂಕಾ (ನಾಯಕ), ಜೆನಿತ್ ಲಿಯಾನಗೆ, ಕಮಿಂದು ಮೆಂಡಿಸ್, ದುನಿತ್ ವೆಲಾಲೆಜ್, ಮಹಿಶ್ ತಿಕ್ಷಣಕ್, ಜೆಫ್ರಿ ವಾಂಡರ್ಸೆ, ಅಸಿತ ಫೆರ್ನಾಂಡೋ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications