For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಮೂರನೇ ಏಕದಿನ ಪಂದ್ಯ, ಲೈವ್‌ ಸ್ಕೋರ್, ಟಾಸ್ ವರದಿ, ಪ್ಲೇಯಿಂಗ್ XI

 India vs Sri Lanka 3rd ODI: Playing XI, Live Score

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಶುಕ್ರವಾರ ಜುಲೈ 23ರಂದು ಕೊಲಂಬೊದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಟ್ಟು 3 ಏಕದಿನ ಪಂದ್ಯಗಳುಳ್ಳ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ಮುಗಿದಿದ್ದು, ಎರಡೂ ಪಂದ್ಯಗಳಲ್ಲಿಯೂ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.

ಈಗಾಗಲೇ 2 ಪಂದ್ಯಗಳನ್ನು ಸೋಲುವುದರ ಮೂಲಕ ಸರಣಿಯನ್ನು ಕೈಚೆಲ್ಲಿರುವ ಶ್ರೀಲಂಕಾ ತಂಡ ತವರಿನಲ್ಲಿಯೇ ಮುಖಭಂಗ ಅನುಭವಿಸಿದೆ. ಇಂದು ನಡೆಯಲಿರುವ ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಯೋಜನೆಯಲ್ಲಿ ಶ್ರೀಲಂಕಾ ತಂಡವಿದ್ದರೆ ಇತ್ತ ಟೀಂ ಇಂಡಿಯಾ ತಂಡ ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದ್ದು ಕೊನೆಯ ಪಂದ್ಯದಲ್ಲಿ ಯುವ ಆಟಗಾರರಿಗೆ ಆಡುವ ಅವಕಾಶವನ್ನು ನೀಡುವುದರ ಮೂಲಕ ಪ್ರಯೋಗಕ್ಕೆ ಮುಂದಾಗಲಿದೆ.

ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು 5 ಯುವ ಆಟಗಾರರಿಗೆ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುವ ಅವಕಾಶ ನೀಡಲಾಗಿದೆ. ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕಾರಿಯಾ, ಕೃಷ್ಣಪ್ಪ ಗೌತಮ್ ಹಾಗೂ ರಾಹುಲ್ ಚಹರ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಆದರೆ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಸಹ ಅವಕಾಶವನ್ನ ಪಡೆದುಕೊಂಡಿಲ್ಲ.

ಲೈವ್‌ ಸ್ಕೋರ್:

1
51200

ಭಾರತ ಆಡುವ ಬಳಗ: ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್, ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹಾರ್, ನವದೀಪ್ ಸೈನಿ ಹಾಗೂ ಚೇತನ್ ಸಕಾರಿಯಾ

ಶ್ರೀಲಂಕಾ ಆಡುವ ಬಳಗ: ಅವಿಷ್ಕಾ ಫರ್ನಾಂಡೊ, ಮಿನೊದ್ ಭನುಕ, ಭನುಕ ರಾಜಪಕ್ಷ, ಧನಂಜಯ ಡಿಸಿಲ್ವಾ, ಚರಿತ ಅಸಲಂಕಾ, ದಾಸನ್ ಶನಕ (ನಾಯಕ), ರಮೇಶ್ ಮೆಂಡಿಸ್, ಚಾಮಿಕ ಕರುಣಾರತ್ನೆ, ಅಕಿಲ ಧನಂಜಯ, ದುಷ್ಮಂತ ಚಮೀರ ಹಾಗೂ ಪ್ರವೀಣ್ ಜಯವಿಕ್ರಮ

Story first published: Friday, July 23, 2021, 16:59 [IST]
Other articles published on Jul 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+