For Quick Alerts
ALLOW NOTIFICATIONS  
For Daily Alerts
 

ಹೆಲಿಕಾಪ್ಟರ್ ಶಾಟ್‌ನಲ್ಲಿ 97 ಮೀಟರ್ ಸಿಕ್ಸರ್ ಹೊಡೆದು ಧೋನಿ ಹೆಸರು ಕೂಗಿದ ವಿರಾಟ್ ಕೊಹ್ಲಿ !

India vs Sri Lanka 3rd ODI: Virat Kohli Hit 97 Meter Six With Helicopter Shot For And Screams Mahi Shot

ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 46ನೇ ಏಕದಿನ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದರು. 110 ಎಸೆತಗಳಲ್ಲಿ ಅಜೇಯ 166 ರನ್ ಗಳಿಸಿ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾದರು. ಅವರ ಈ ದಾಖಲೆಯ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸೇರಿದ್ದವು.

ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕ ಗಳಿಸಿ ಮಿಂಚಿದರು, ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 390 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ, ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ಸಿಲುಕಿ, ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು.

ಭಾರತ 317 ರನ್‌ಗಳ ವಿಶ್ವದಾಖಲೆಯ ಜಯ ಸಾಧಿಸಿದರು. ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು. ಇನ್ನು ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ಆಡುವಾಗ ಮಹೇಂದ್ರ ಸಿಂಗ್ ಧೋನಿ ಹೆಸರು ಹೇಳಿದರು.

ಹೆಲಿಕಾಪ್ಟರ್ ಶಾಟ್ ಹೊಡೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್‌ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಮೂಲಕ ಧೋನಿಯನ್ನು ಮತ್ತೊಮ್ಮೆ ನೆನೆಯುವಂತೆ ಮಾಡಿದರು. ಕಸುನ್ ರಜಿತಾ ಬೌಲ್ ಮಾಡಿದ ಪಂದ್ಯದ 44 ನೇ ಓವರ್‌ನ ಮೂರನೇ ಎಸೆತವನ್ನು ಮುನ್ನುಗ್ಗಿ ಹೆಲಿಕ್ಯಾಪ್ಟರ್ ಶಾಟ್‌ ಮೂಲಕ 97 ಮೀಟರ್ ದೂರದ ಭರ್ಜರಿ ಸಿಕ್ಸರ್ ಸಿಡಿಸಿದರು.

ಸಿಕ್ಸರ್ ಹೊಡೆದ ನಂತರ ಮುಂದೆ ಬಂದ ಕೊಹ್ಲಿ ಬೌಲರ್ ಎಂಡ್‌ನಲ್ಲಿದ್ದ ಶ್ರೇಯಸ್‌ ಅಯ್ಯರ್ ಬಳಿ "ಮಹಿ ಶಾಟ್" ಎಂದು ಹೇಳಿದರು. ಯಾರು ಏನೇ ಹೇಳಿದರೂ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ಬಾಂಧವ್ಯ ಎಂತಹದ್ದು ಎಂದು ಮತ್ತೊಮ್ಮೆ ಸಾಬೀತಾಗಿದೆ.

India vs Sri Lanka 3rd ODI: Virat Kohli Hit 97 Meter Six With Helicopter Shot For And Screams Mahi Shot

ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಕೊಹ್ಲಿ ಅರ್ಹವಾಗಿಯೇ ಸರಣಿ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಮೂರು ಪಂದ್ಯಗಳಲ್ಲಿ 141.50 ರ ಸರಾಸರಿಯಲ್ಲಿ 283 ರನ್ ಗಳಿಸಿದರು. ಕೊನೆಯ ಪಂದ್ಯದಲ್ಲಿ ಅಜೇಯ 166 ರನ್‌ ಸಿಡಿಸಿದ ಕಾರಣ ಅವರಿಗೆ ಕೊಹ್ಲಿ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

Story first published: Monday, January 16, 2023, 15:26 [IST]
Other articles published on Jan 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+