Ind vs SL 3rd T20I : ಭಾರತ vs ಶ್ರೀಲಂಕಾ: ಅಂತಿಮ ಪಂದ್ಯದಲ್ಲಿ ದಾಖಲೆಯ ಮೇಲೆ ಕಣ್ಣಿಟ್ಟ ಇತ್ತಂಡಗಳ ಆಟಗಾರರು

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಅಂತಿಮ ಪಂದ್ಯ ಶನಿವಾರ ನಡೆಯಲಿದೆ. ಸರಣಿಯ ಮೊದಲ ಎರಡು ಪಂದ್ಯಗಳ ಪೂಕಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಶ್ರೀಲಂಕಾ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಮೂರು ಪಂದ್ಯಗಳ ಸರಣಿ ಸಮಬಲದಲ್ಲಿದ್ದು ಶನಿವಾರ ನಡೆಯಲಿರುವ ಪಂದ್ಯ ನಿರ್ಣಾಯಕವೆನಿಸಿದೆ. ಇನ್ನು ಅಂತಿಮ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದ್ದು ಸೌರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ಇದುವರೆಗೆ 28 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಟೀಮ್ ಇಂಡಿಯಾ 18 ಪಂದ್ಯಗಳಲ್ಲಿ ಗೆದ್ದಿದ್ದರೆ ಲಂಕಾ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇನ್ನು ಭಾರತದಲ್ಲಿ ಈ ತಂಡಗಳು 16 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು ಆತಿಥೇಯ ತಂಡವು 12ಬಾರಿ ಹಾಗೂ ಶ್ರೀಲಂಕಾ ಮೂರು ಬಾರಿ ಗೆಲುವು ಸಾಧಿಸಿದೆ.
*ಶ್ರೀಲಂಕಾ ನಾಯಕ ದಸುನ್ ಶನಕ ಅಂತಾರಾಷ್ಟ್ರೀಯ ಟಿ20ಯಲ್ಲಿ 93 ಬೌಂಡರಿ ಗಳಿಸಿದ್ದು 100 ಬೌಂಡರಿಗಳನ್ನು ಪೂರೈಸಲು ಏಳು ಬೌಂಡರಿಗಳ ಅಗತ್ಯವಿದೆ.
*ಇನ್ನು ಶ್ರೀಲಂಕಾದ ಮತ್ತೋರ್ವ ಪ್ರಮುಖ ಬ್ಯಾಟರ್ ಅಗ್ರ ಕ್ರಮಾಂಕದ ಆಟಗಾರ ಪಾಥುಮ್ ನಿಸ್ಸಾಂಕ ಕೂಡ ಟಿ20ಐ ಮಾದರಿಯಲ್ಲಿ 93 ಬೌಂಡರಿ ಗಳಿಸಿದ್ದಾರೆ. ಲಂಕಾದ ಈ ಬ್ಯಾಟರ್‌ಗೆ ಕೂಡ 100 ಬೌಂಡರಿಗಳನ್ನು ತಲುಪಲು ಏಳು ಬೌಂಡರಿಗಳ ಅಗತ್ಯವಿದೆ.
* ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ 1466 ರನ್‌ಗಳನ್ನು ಗಳಿಸಿದ್ದಾರೆ. ಈ ಮಾದರಿಯಲ್ಲಿ 1500 ರನ್‌ಗಳ ಮೈಲಿಗಲ್ಲು ದಾಟಲು ಸೂರ್ಯಕುಮಾರ್ ಯಾದವ್ ಶನಿವಾರ ನಡೆಯುವ ಪಂದ್ಯದಲ್ಲಿ 34 ರನ್‌ಗಳಿಸಿದರೆ ಸಾಕು.
* ಟೀಮ್ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಭಾರತದ ಪರವಾಗಿ ಟಿ20 ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಅವಕಾಶವಿದೆ. ಚಾಹಲ್ ಈವರೆಗೆ 88 ವಿಕೆಟ್ ಸಂಪಾದಿಸಿದ್ದು ಶನಿವಾರ ದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದರೆ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಪ್ರಸ್ತುತ 90 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ
* ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 45 ಸಿಕ್ಸರ್ ಸಿಡಿಸಿದ್ದು 50 ಸಿಕ್ಸರ್‌ಗಳ ಗಡಿ ತಲುಪಲು ಐದು ಸಿಕ್ಸರ್‌ಗಳ ಅಗತ್ಯವಿದೆ.
*ಟಿ20I ಮಾದರಿಯಲ್ಲಿ ಒಂದು ಎದುರಾಳಿಯ ವಿರುದ್ಧ ಅತಿ ಹೆಚ್ಚು ಜಯಗಳಿಸಿದ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದ್ದು ಪಾಕಿಸ್ತಾನ ವಿರುದ್ಧ 19 ಗೆಲುವು ಸಾಧಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ದಾಖಲೆಯನ್ನು ಸರಿಗಟ್ಟುವ ಅವಕಾಶ ಭಾರತ ತಂಡಕ್ಕಿದೆ. ಶ್ರೀಲಂಕಾ ವಿರುದ್ಧ 18 ಗೆಲುವು ಸಾಧಿಸಿದ್ದು ಒಂದು ಗೆಲುವು ಸಾಧಿಸಿದರೆ ಸಮಬಲಸ ಸಾಧಿಸಿದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications