
ಮೂವರ ಹೆಸರಿನಲ್ಲಿ ದಾಖಲೆ
3ನೇ ಟಿ20ಯಲ್ಲಿ ಬೂಮ್ರಾಗೆ 1 ವಿಕೆಟ್ ಲಭಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಬೂಮ್ರಾ ಗುರುತಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ ಮತ್ತು ಯುಜುವೇಂದ್ರ ಚಾಹಲ್ ಮೂವರ ಹೆಸರಿನಲ್ಲಿದೆ.

4 ತಿಂಗಳ ಬಳಿಕ ಅಂಗಳಕ್ಕೆ
ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಗಾಯದ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರು ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿಯಬೇಕಾಗಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಬೂಮ್ರಾ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಂದರೆ 4 ತಿಂಗಳ ಬಳಿಕ ಮೈದಾನಕ್ಕಿಳಿದಿದ್ದಾರೆ.

ಟಿ20ಐನಲ್ಲಿ ಚಾಹಲ್ ಬೆಸ್ಟ್
ಟಿ20ಐನಲ್ಲಿ ಭಾರತದ ಅಶ್ವಿನ್, ಬೂಮ್ರಾ ಮತ್ತು ಚಾಹಲ್ ಮೂವರೂ ತಲಾ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಬೂಮ್ರಾ 43 ಇನ್ನಿಂಗ್ಸ್‌ಗಳಲ್ಲಿ, ಚಾಹಲ್ 36 ಇನ್ನಿಂಗ್ಸ್‌ಗಳಲ್ಲಿ ಮತ್ತು ಆರ್ ಅಶ್ವಿನ್ 46 ಇನ್ನಿಂಗ್ಸ್‌ಗಳಲ್ಲಿ 52 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕಡಿಮೆ ಇನ್ನಿಂಗ್ಸ್‌ನಲ್ಲಿ ಹೆಚ್ಚು ಟಿ20 ವಿಕೆಟ್ ದಾಖಲೆ ಪರಿಗಣಿಸಿದರೆ ಚಾಹಲ್ ಮೊದಲಿಗರೆನಿಸುತ್ತಾರೆ.

ಬೂಮ್ರಾ ಮುನ್ನಡೆಗೆ ಅವಕಾಶ
ಶ್ರೀಲಂಕಾ ಟಿ20 ಸರಣಿಯಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡುತ್ತಿಲ್ಲ. ಅಂತಿಮ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಕೂಡ ಆಡುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಬೂಮ್ರಾಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಕೆಟ್ ಲಭಿಸಿದರೆ ಭಾರತ ಪರ ಟಿ20ಐನಲ್ಲಿ ಅತೀ ಹೆಚ್ಚು ವಿಕೆಟ್ ದಾಖಲೆಯಲ್ಲಿ ಮುನ್ನಡೆ ಸಾಧಿಸಲು ಅವಕಾಶವಿದೆ.


Click it and Unblock the Notifications
