For Quick Alerts
ALLOW NOTIFICATIONS  
For Daily Alerts
 

ಮಿನುಗಿದ ನವದೀಪ, ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ

India vs Sri Lanka, 3rd T20I - Live match report

ಪುಣೆ, ಜನವರಿ 10: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 10) ನಡೆದ ಶ್ರೀಲಂಕಾ ಮತ್ತು ಭಾರತ ನಡುವಿನ ತೃತೀಯ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 78 ರನ್ ಸುಲಭ ಜಯ ಗಳಿಸಿದೆ. ದಿಟ್ಟ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ದಾಳಿ ನಡೆಸಿದ ಕೊಹ್ಲಿ ಪಡೆ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಕೆಎಲ್ ರಾಹುಲ್ 54 (36 ಎಸೆತ), ಶಿಖರ್ ಧವನ್ 52 (36 ಎಸೆತ), ಮನೀಶ್ ಪಾಂಡೆ 31 (18 ಎಸೆತ), ವಿರಾಟ್ ಕೊಹ್ಲಿ 26, ಶಾರ್ದೂಲ್ ಠಾಕೂರ್ 22 ರನ್‌ ಸೇರಿಸಿದ್ದರಿಂದ ತಂಡ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 201 ರನ್ ಮಾಡಿತು.

ಭಾರತ vs ಶ್ರೀಲಂಕಾ, 3ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46129

ಗುರಿ ಬೆಂಬತ್ತಿದ ಶ್ರೀಲಂಕಾವನ್ನು ಭಾರತ ಬೌಲರ್‌ಗಳು ಆರಂಭಿದಿಂದಲೂ ಕಾಡಹತ್ತಿದರು. ಪರಿಣಾಮವಾಗಿ ಏಂಜಲೋ ಮ್ಯಾಥ್ಯೂಸ್ 31, ಧನಂಜಯ ಡೆ ಸಿಲ್ವಾ 57 ರನ್‌ ಗಳಿಸಿದ್ದೇ ಹೆಚ್ಚು. ಉಳಿದ ಇನ್ಯಾರೂ 10 ರನ್‌ ಗೆರೆ ಕೂಡ ದಾಟದೆ ಸಾಲಾಗಿ ವಿಕೆಟ್ ಒಪ್ಪಿಸಿದರು. ಲಂಕಾ 15.5ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 123 ರನ್ ಬಾರಿಸಿ ಶರಣಾಯಿತು.

ಭಾರತದ ಇನ್ನಿಂಗ್ಸ್‌ನಲ್ಲಿ ಲಂಕಾ ಬೌಲರ್ ಲಕ್ಷಣ್ ಸಂದಕನ್ 35 ರನ್‌ಗೆ 3, ಲಹಿರು ಕುಮಾರ ಮತ್ತು ವನಿಂದು ಹಸರಂಗ ತಲಾ 1 ವಿಕೆಟ್ ಪಡೆದರು. ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಯುವ ಬೌಲರ್ ನವದೀಪ್ ಸೈನಿ 28ಕ್ಕೆ 3, ಶಾರ್ದೂಲ್ ಠಾಕೂರ್ 19ಕ್ಕೆ 2, ವಾಷಿಂಗ್ಟನ್ ಸುಂದರ್ 37ಕ್ಕೆ 2, ಜಸ್‌ಪ್ರೀತ್‌ ಬೂಮ್ರಾ 5 ರನ್‌ಗೆ 1 ವಿಕೆಟ್ ಪಡೆದು ಗಮನ ಸೆಳೆದರು.

ಪುಣೆಯ ಈ ಪಂದ್ಯದಲ್ಲೂ ಭಾರತ ಸುಲಭ ಜಯ ಗಳಿಸಿತಲ್ಲದೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000+ ರನ್ ಗಳಿಸಿದ ನಾಯಕನಾಗಿ ದಾಖಲೆ ಬರೆದರೆ, ವೇಗಿ ಜಸ್‌ಪ್ರೀತ್ ಬೂಮ್ರಾ ಟಿ20ಐಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ ಹೆಗ್ಗಳಿಕೆಗೆ ಕಾರಣರಾದರು. ಪಂದ್ಯಶ್ರೇಷ್ಠರಾಗಿ ಶಾರ್ದೂಲ್ ಠಾಕೂರ್, ಸರಣಿ ಶ್ರೇಷ್ಠರಾಗಿ ನವದೀಪ್ ಸೈನಿ ಮಿಂಚಿದರು.

ಭಾರತ ತಂಡ: ಲೋಕೇಶ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ (ಸಿ), ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್ (ವಿಕೆ), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಜಸ್‌ಪ್ರೀತ್‌ ಬುಮ್ರಾ, ಯುಜುವೇಂದ್ರ ಚಾಹಲ್

ಶ್ರೀಲಂಕಾ ತಂಡ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಾಲ್ ಪೆರೆರಾ (ವಿಕೆ), ಓಷಾದಾ ಫರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಸುನ್ ಶನಕಾ, ಲಕ್ಷನ್ ಸಂದಕನ್, ವನಿಂದು ಹಸರಂಗ, ಲಸಿತ್ ಮಾಲಿಂಗ (ಸಿ), ಲಹಿರು ಕುಮಾರ.

Story first published: Friday, January 10, 2020, 22:38 [IST]
Other articles published on Jan 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+