Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಮುಂಬೈ, ಡಿಸೆಂಬರ್ 25: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅತಿಥೇಯ ಭಾರತ ತಂಡ 5 ವಿಕೆಟ್​ಗಳ ಜಯ ಗಳಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನೀಡಿದ್ದ 136 ರನ್​ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 19.2 ಓವರ್​ಗಳಲ್ಲಿ 139 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಎಂಎಸ್ ಧೋನಿ ಅವರು ಮತ್ತೊಮ್ಮೆ ಗೆಲುವಿನ ರನ್ ಬಾರಿಸಿ, ಅಭಿಮಾನಿಗಳಲ್ಲಿ ಕಿಚ್ಚು ಹಬ್ಬಿಸಿದರು.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಗಳಿಸಿದ್ದ ಕನ್ನಡಿಗ ಕೆ.ಎಲ್​. ರಾಹುಲ್​ ಅವರು ಈ ಪಂದ್ಯದಲ್ಲಿ 4 ರನ್​ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಉಳಿದಂತೆ, ನಾಯಕ ರೋಹಿತ್ ಶರ್ಮ 27, ಮನೀಷ್​ ಪಾಂಡೆ 32, ಶ್ರೇಯಸ್​ ಅಯ್ಯರ್​ 30 ಗಳಿಸಿದರು. ಅಂತಿಮವಾಗಿ ದಿನೇಶ್​ ಕಾರ್ತಿಕ್​ ಅಜೇಯ 18 ಹಾಗೂ ಮಹೇಂದ್ರ ಸಿಂಗ್​ ಧೋನಿ ಅಜೇಯ 16 ರನ್​ ಗಳಿಸಿ ತಂಡಕ್ಕೆ ಜಯ ತಂದಿತ್ತರು.

135ರನ್ ಗಳಿಸಿದ್ದ ಶ್ರೀಲಂಕಾ

135ರನ್ ಗಳಿಸಿದ್ದ ಶ್ರೀಲಂಕಾ

ಇದಕ್ಕೂ ಮೊದಲು ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 135 ರನ್​ ಗಳಿಸಿತ್ತು. ಸಮರವಿಕ್ರಮ 21, ಗುಣರತ್ನೆ 36 ಮತ್ತು ಶನಕ ಅಜೇಯ 29 ರನ್​ ಗಳಿಸಿದರು. ಭಾರತದ ಪರ ವೇಗಿ ಜೈದೇವ್ ಉನದ್ಕತ್, ಹಾರ್ದಿಕ್ ಪಾಂಡ್ಯ ತಲಾ 2, ವಾಷಿಂಗ್ಟನ್ ಸುಂದರ್, ಮೊಹಮ್ಮದ್​ ಸಿರಾಜ್​ ಮತ್ತು ಕುಲ್​ದೀಪ್​ ಯಾದವ್​ ತಲಾ 1 ವಿಕೆಟ್ ಪಡೆದರು.

ದಾಖಲೆ ಬರೆದ ವಾಷಿಂಗ್ಟನ್ ಸುಂದರ್

18 ವರ್ಷ 80 ದಿನ ವಯಸ್ಸಿನ ವಾಷಿಂಗ್ಟನ್ ಸುಂದರ್ ಅವರು ಪಂದ್ಯದ ಮೊದಲ ಓವರ್ ಬೌಲ್ ಮಾಡಿದ ಎರಡನೆ ಅತಿ ಕಿರಿಯ ಬೌಲರ್ ಎನಿಸಿಕೊಂಡರು.

2017ರಲ್ಲಿ ಟೀಂ ಇಂಡಿಯಾ ಸಾಧನೆ

2017ರಲ್ಲಿ ಟೀಂ ಇಂಡಿಯಾ ಸಾಧನೆ ಅದ್ಭುತವಾಗಿದ್ದು, ಒಂದು ಟೆಸ್ಟ್ , 2 ಏಕದಿನ ಹಾಗೂ 2 ಟಿ20ಐ ಸರಣಿ ಗೆಲುವು ಕಂಡಿದೆ.

ಗೆಲುವಿನ ರನ್ ಬಾರಿಸುವ ಎಂಎಸ್ ಧೋನಿ

ಗೆಲುವಿನ ರನ್ ಬಾರಿಸುವ ಎಂಎಸ್ ಧೋನಿ, 27 ಬಾರಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು, 10 ಬಾರಿ ಟಿ20ಐ ಹಾಗೂ 3 ಬಾರಿ ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನ ರನ್ ಬಾರಿಸಿದ್ದಾರೆ.

ಧೋನಿ ಪಂದ್ಯ ಮುಗಿಸಿದ ಕ್ಷಣ

ಧೋನಿ ಪಂದ್ಯ ಮುಗಿಸಿದ ಕ್ಷಣದ ವಿಡಿಯೋ ಹೀಗಿದೆ

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+