ಭಾರತದ ವಿರುದ್ಧ 168 ರನ್ ಗಳಿಂದ ಸೋಲನುಭವಿಸಿದ ಲಂಕಾ
ಕೊಲಂಬೊ, ಆಗಸ್ಟ್ 31: ಭಾರತದ ವಿರುದ್ಧ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ತಂಡವು 168 ರನ್ ಗಳಿಂದ ಸೋಲನುಭವಿಸಿದೆ. ಭಾರತ ನೀಡಿದ 376 ರನ್ ಗಳ ಗುರಿ ತಲುಪಲು ವಿಫಲವಾದ ಲಂಕಾ ತಂಡವು 207 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಲಂಕಾ ಪರ ಆಂಜೆಲೋ ಮ್ಯಾಥ್ಯೂಸ್ ಎಪ್ಪತ್ತು ರನ್ ಗಳಿಸಿದ್ದು ಹೊರತುಪಡಿಸಿದರೆ, ಸಿರಿವರ್ಧನ ಗಳಿಸಿದ ಮೂವತ್ತೊಂಬತ್ತು ರನ್ ಎರಡನೇ ಅತ್ಯಧಿಕ ಮೊತ್ತ. ಭಾರತದ ಪರವಾಗಿ ಬೂಮ್ರಾ, ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಠಾಕೂರ್ ಹಾಗೂ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಈಗಾಗಲೇ ಸರಣಿ ಗೆದ್ದಿರುವ ವಿರಾಟ್ ಕೊಹ್ಲಿ ಪಡೆಯು ಈ ಗೆಲುವಿನ ಮೂಲಕ ಅಂತರವನ್ನು 4-0ಗೆ ಹೆಚ್ಚಿಸಿಕೊಂಡಿದೆ. ಏಕದಿನ ಪಂದ್ಯಗಳಲ್ಲಿ ಇಪ್ಪತ್ತೊಂಬತ್ತನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠರಾದರು.
*****
ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಅಬ್ಬರದ ಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 375 ರನ್ ಗಳಿಸಿದೆ.

ರೋಹಿತ್ ಜತೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ (4) ವಿಕೆಟ್ ಕೊಂಡು ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಬಳಿಕ ಜತೆಯಾದ ವಿರಾಟ್ (131) ಹಾಗೂ ರೋಹಿತ್ ಶರ್ಮಾ (104) ಜೋಡಿ ಲಂಕಾ ಬೌಲರ್‌ಗಳ ಬೆವರಿಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ (19), ಕೆಎಲ್ ರಾಹುಲ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜೊತೆಗೂಡಿದ ಮನೀಷ್ ಪಾಂಡೆ ಹಾಗೂ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಧೋನಿ 46 ಮತ್ತು ಮನೀಷ್ ಪಾಂಡೆ 50 ರನ್ ಗಳಿಸಿ ಕೊನೆಯಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications