ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸುತ್ತಿದ್ದಾರೆ ಈ ಆಟಗಾರ: ಕನ್ನಡಿಗನ ಬಗ್ಗೆ ಆಕಾಶ್ ಚೋಪ್ರ ಬೇಸರ

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಟಿ20 ಸರಣಿಯ ಬಳಿಕ ಟೆಸ್ಟ್ ಸರಣಿಯಲ್ಲಿಯೂ ಭಾರತ ವೈಟ್‌ವಾಶ್ ಮಾಡಿ ಸರಣಿ ಜಯಿಸಿದೆ. ಬೌಲರ್‌ಗಳ ಮೇಲಾಟದ ಮಧ್ಯೆಯೂ ಭಾರತ ದೊಡ್ಡ ಮೊತ್ತದ ಗುರಿಯನ್ನು ಶ್ರೀಲಂಕಾಗೆ ನೀಡಿದ್ದು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿತ್ತು. ಈ ಸರಣಿಯ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಓರ್ವ ಆಟಗಾರನ ಪ್ರದರ್ಶನದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಈ ಆಟಗಾರ ಅಗ್ರ ಕ್ರಮಾಂಕದಲ್ಲಿ ತಮಗೆ ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸುತ್ತಿದ್ದಾರೆ ಎಂದು ಆಕಾಶ್ ಚೋಪ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಈ ಆಟಗಾರ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ 59 ರನ್‌ಗಳಿಸಿದ್ದು ದೊಡ್ಡ ಮೊತ್ತಗಳಿಸಲು ವಿಫವಾಗಿದ್ದಾರೆ ಎಂಬ ಕಾರಣಕ್ಕೆ ಆಕಾಶ್ ಚೋಪ್ರ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹಾಗಾದರೆ ಆಕಾಶ್ ಚೋಪ್ರ ಬೇಸರ ವ್ಯಕ್ತಪಡಿಸಿದ ಆ ಆಟಗಾರ ಯಾರು? ಮುಂದೆ ಓದಿ..

2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾಗೆ ಕಠಿಣ ಸವಾಲು
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 447 ರನ್‌ಗಳ ಬೃಹತ್ ಗುರಿಯನ್ನು ಪಡೆದುಕೊಂಡಿತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿದರೂ ಎರಡನೇ ವಿಕೆಟ್‌ಗೆ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಅದ್ಭುತ ಜೊತೆಯಾಟವೊಂದನ್ನು ನೀಡಿದರು. 97 ರನ್‌ಗಳ ಜೊತೆಯಾಟ ನೀಡಿದ ನಂತರ ಆರ್ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕುಸಾಲ್ ಮೆಂಡಿಸ್ 54 ರನ್‌ಗಳಿಸಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಅದಾದ ಬಳಿಕ ಶ್ರೀಲಂಕಾ ನಾಟಕೀಯ ಕುಸಿತ ಕಂಡಿತು.

ಲಂಕಾ ನಾಯಕನ ಏಕಾಂಗಿ ಹೋರಾಟ
ಮತ್ತೊಂದು ತುದಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಅದ್ಭುತ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳ ದಾಳಿಗೆ ಉತ್ತಮ ಪ್ರತ್ಯುತ್ತರ ನೀಡಿದ ಕರುಣರತ್ನೆ 107 ರನ್‌ಗಳಿಸಿ ಔಟಾದರು. ನಾಯಕನ ವಿಕೆಟ್ ಕಳೆದುಕೊಂಡ ನಂತರ ಶ್ರೀಲಂಕಾ ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಅಂತಿಮ ನಾಲ್ಕು ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಈ ಮೂಲಕ ಶ್ರೀಲಂಕಾ ಎರಡು ಪಂದ್ಯಗಳಲ್ಲಿಯೂ ಯಾವುದೇ ಪ್ರತಿರೋಧ ನೀಡದೆಯೇ ಸೋಲು ಅನುಭವಿಸಿದಂತಾಗಿದೆ.

ಎರಡೂ ಇನ್ನಿಂಗ್ಸ್‌ನಲ್ಲಿ ಮಿಂಚಿದ ಐಯ್ಯರ್; ಪಂತ್ ಸ್ಪೋಟಕ ಆಟ
ಇನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಐಯ್ಯರ್ ಪ್ರದರ್ಶನ ಅದ್ಭುತವಾಗಿತ್ತು. ಬೌಲರ್‌ಗಳಿಗೆ ಸಂಪೂರ್ಣ ನೆರವಾಗುತ್ತಿದ್ದ ಪಿಚ್‌ನಲ್ಲಿ ಶ್ರೇಯಸ್ ಐಯ್ಯರ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 92 ರನ್ ಬಾರಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ 8 ರನ್‌ಗಳ ಅಂತರದಿಂದ ಶತಕವಂಚಿತರಾದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ 67 ರನ್‌ಗಳ ಕೊಡುಗೆ ನೀಡಿ ಅದ್ಭುತ ಆಟ ಪ್ರದರ್ಶಿಸಿದ್ದರು. ಇನ್ನು ರಿಷಭ್ ಪಂತ್ ಅವರ ಸ್ಪೋಟಕ ಬ್ಯಾಟಿಂಗ್ ಕೂಡ ಈ ಪಂದ್ಯದ ಗಮನಾರ್ಹ ಅಂಶ. ಮೊದಲ ಇನ್ನಿಂಗ್ಸ್‌ನಲ್ಲಿಯೂ 26 ಎಸೆತಗಳಲ್ಲಿ 39 ರನ್ ಸಿಡಿಸಿ ಮಿಂಚಿದ್ದ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿದರು. 28 ಎಸೆತಗಳಲ್ಲಿ ಅರ್ಧ ಶತಕಗಳಿಸುವ ಮೂಲಕ ಪಂತ್ ಭಾರತದ ಪರ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ಬೌಲಿಂಗ್‌ನಲ್ಲಿ ಬೂಮ್ರಾ, ಅಶ್ವಿನ್ ಅಬ್ಬರ
ಇನ್ನು ಈ ಪಂದ್ಯದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅದ್ಭುತ ದಾಳಿ ಸಂಘಟಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಬ್ಬರಿಸಿದ ಅವರು 3 ವಿಕೆಟ್ ಕಬಳಿಸಿದರು. ಆರ್ ಅಶ್ವಿನ್ ಕೂಡ ಈ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಒಟ್ಟಾರೆ 7 ವಿಕೆಟ್ ಸಂಪಾದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications