
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ಎರಡನೇ ಪಂದಚ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಭಾರತ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ಗಾಯದ ಮೇಲೆ ಗಾಯದ ಸಮಸ್ಯೆ ಎದುರಿಸುವ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಪಂದ್ಯದ ವೇಳೆ ಗಾಯಗೊಂಡಿದ್ದು ಪಂದ್ಯದ ಮುಕ್ತಾಯದ ಬಳಿಕ ಆಸ್ಪತ್ರೆಯೆ ದಾಖಲಾಗಿದ್ದಾರೆ.
ಟೀಮ್ ಇಂಡಿಯಾದ ಯುವ ಆಟಗಾರ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ಗೆ ಪಂದ್ಯದ ಸಂದರ್ಭದಲ್ಲಿ ಚೆಂಡು ತಲೆಗೆ ಬಡಿದಿದೆ. ತಕ್ಷಣವೇ ಮೈದಾನಕ್ಕೆ ತೆರಳಿದ ವೈದ್ಯಕೀಯ ಸಿಬ್ಬಂದಿಗಳು ಇಶಾನ್ ಕಿಶನ್ ಅವರ ಕನ್ಕೂಶನ್ ನಡೆಸಿ ನಂತರ ಪಂದ್ಯದಲ್ಲಿ ಮುಂದುವರಿಯಲು ಅನುಮತಿ ನೀಡಿದ್ದರು. ಆದರೆ ಪಂದ್ಯದ ಮುಕ್ತಾಯದ ಬಳಿಕ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಿಮಾಚಲ ಪ್ರದೇಶದ ಕಾಂಗ್ರಾದ ಆಸ್ಪತ್ರೆಗೆ ಇಶಾನ್ ಕಿಶನ್ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 184 ರನ್‌ಗಳಿಸಿತ್ತು. ಈ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ತಲೆಗೆ ಚೆಂಡು ಬಡಿದಿದೆ. ಶ್ರೀಲಂಕಾ ವೇಗಿ ಲಹಿರು ಕುಮಾರ ಎಸೆತವನ್ನು ಪುಲ್ ಮಾಡಲು ಹೋದ ಇಶಾನ್ ಕಿಶನ್ ಚೆಂಡನ್ನು ಗುರುತಿಸುವಲ್ಲಿ ವಿಫಲವಾಗಿದ್ದರು. ಈ ಸಂದರ್ಭದಲ್ಲಿ ಚೆಂಡು ಹೆಲ್ಮೆಟ್‌ಗೆ ಬಡಿದಿದೆ. ತಕ್ಷಣವೇ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ನಂತರ ಇಶಾನ್ ಕಿಶನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ. ನಂತರ ಪಂದ್ಯದ 6ನೆ ಓವರ್‌ನಲ್ಲಿ ಇಶಾನ್ ಕಿಶನ್ 16 ರನ್‌ಗಳಿಸಿದ್ದಾಗ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿದ್ದಾರೆ.
ಆರಂಭದಲ್ಲಿ ಭಾರತದ ಯುವ ಬ್ಯಾಟರ್ ಐಸಿಯುಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅದಾದ ಇಶಾನ್ ಕಿಶನ್ ಸಾಮಾನ್ಯ ವಾರ್ಡ್‌ಗೆ ದಾಖಲಾಗಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ ಎಂದು ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇಶಾನ್ ಕಿಶನ್‌ಗೆ ಸಿಟಿ ಸ್ಕ್ಯಾನ್ ನಡೆಸಲಾಗಿದ್ದು ನಿಗಾವಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಇಶಾನ್ ಕಿಶನ್ ಹೊರತುಪಡಿಸಿ ಈ ಪಂದ್ಯದ ಬಳಿಕ ಶ್ರೀಲಂಕಾ ಬ್ಯಾಟರ್ ದಿನೇಶ್ ಚಾಂಡಿಮಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬೆರಳಿಗೆ ಗಾಯವಾಗಿದ್ದ ಕಾರಣ ಚಾಂಡಿಮಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಇನ್ನು ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಟಗಾರ ಫಾತುಮ್ ನಿಸ್ಸಾಂಕ ಹಾಗೂ ಸಿಡಿಸಿದ ಭರ್ಜರಿ 75 ರನ್‌ಗಳ ಕೊಡುಗೆ ಹಾಗೂ ನಾಯಕ ದಸುನ್ ಶನಕಾ ಕೇವಲ 19 ಎಸೆತಗಳಲ್ಲಿ 47 ರನ್ ಸಿಡಿಸಿ 183 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತು.
ಶ್ರೀಲಂಕಾ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಬಾರತ ತಂಡ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರನ್ನು 44 ರನ್‌ಗಳಿಸುವಷ್ಟಿರಲ್ಲಿ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಅದ್ಭುತ ಜೊತೆಯಾಟವನ್ನು ಪ್ರದರ್ಶಿಸಿದರು. ಸಂಜು ಸ್ಯಾಮ್ಸನ್ 25 ಎಸೆತಗಳಲ್ಲಿ 39 ರನ್‌ಗಳಿಸಿ ಔಟಾದರೆ ಶ್ರೇಯಸ್ ಐಯ್ಯರ್ ಹಾಗೂ ರವೀಂದ್ರ ಜಡೇಜಾ ಭಾರತವನ್ನು ಗೆಲುವಿನ ದಡ ಸೇರಿಸಿದರು. ಮೂರನೇ ಕ್ರಮಾಂಖದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 44 ಎಸೆತಗಳನ್ನು ಎದುರಿಸಿ 74 ರನ್ ಸಿಡಿಸಿದರೆ, ಕೇವಲ 18 ಎಸೆತ ಎದುರಿಸಿದ ರವೀಂದ್ರ ಜಡೇಜಾ 45 ರನ್‌ಗಳಿಸಿ ಅಜೇಯವಾಗುಳಿದರು.