ಶ್ರೀಲಂಕಾ vs ಭಾರತ ; ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ಕೆ, ಪಂದ್ಯಕ್ಕೆ ಮಳೆ ಅಡ್ಡಿ

ಗುವಾಹಟಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ನಡುವೆ ಮೊದಲ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಆಟಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ಒಂದಷ್ಟು ವಿಳಂಬವಾಗಲಿದೆ.
ಇದಕ್ಕೂ ಮುನ್ನ ಸರಣಿಯ ಮೊದಲ ಪಂದ್ಯದ ಟಾಸ್ ಪೂರ್ಣಗೊಳಿಸಲಾಗಿದೆ. ಗೆದ್ದಿರುವ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ. ಟಿ20ಯಲ್ಲಿ ಭಾರತದ ವಿರುದ್ಧ ಕಳಪೆ ದಾಖಲೆ ಹೊಂದಿರುವ ಶ್ರೀಲಂಕಾ ಗೆಲುವಿನ ನಿರೀಕ್ಷೆಯಲ್ಲಿದೆ.
ಭಾರತ vs ಶ್ರೀಲಂಕಾ ಸರಣಿಯ ಮೊದಲ ಪಂದ್ಯದ ಸ್ಕೋರ್‌ಪಟ್ಟಿ ಹೀಗಿದೆ:
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಸರಣಿ ಗೆಲುವು ಸಾಧಿಸಿ ಮತ್ತೊಂದು ಗೆಲುವಿನ ಹಪಾಹಪಿಯಲ್ಲಿದೆ. ಈ ದಶಕದ ಮೊದಲ ಪಂದ್ಯವನ್ನು ಎರಡೂ ತಂಡಗಳು ಆಡುತ್ತಿದ್ದು ಮೊದಲ ಪಂದ್ಯವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡುವ ಉತ್ಸಾಹ ಎರಡು ತಂಡಗಳಲ್ಲಿದೆ.
ಶ್ರೀಲಂಕಾ ಮತ್ತು ಭಾರತ ತಂಡಗಳು ಭಾರತದಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಭಾರತ 6 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ ಶ್ರೀಲಂಕಾ ತಂಡ ಕೇವಲ 2 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಹೀಗಾಗಿ ಶ್ರೀಲಂಕಾ ಮೇಲೆ ಒತ್ತಡ ಹೆಚ್ಚಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್XI: ಶಿಖರ್ ಧವನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಜಸ್ಪ್ರೀತ್ ಬೂಮ್ರಾ
ಶ್ರೀಲಂಕಾ ಪ್ಲೇಯಿಂಗ್XI:ಳ ದಾನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಲ್ ಪೆರೆರಾ (ವಿಕೆಟ್ ಕೀಪರ್), ಓಷಾದಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ದಾಸುನ್ ಶಾನಕಾ, ಇಸುರು ಉದಾನ, ವನಿಂದು ಹಸರಂಗ, ಲಹೀರು ಕುಮಾರ, ಲಸಿತ್ ಮಾಲಿಂಗ (ನಾಯಕ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications