ಭಾರತ vs ಶ್ರೀಲಂಕಾ: ಶ್ರೀಲಂಕಾದಲ್ಲೇ ಉಳಿಯಲಿದ್ದಾರೆ ಪೃಥ್ವಿ ಶಾ, ದೇವದತ್ ಪಡಿಕ್ಕಲ್

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿರುವ ಯುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ ಪಡಿಕ್ಕಲ್ ಮತ್ತು ಪೃಥ್ವಿ ಶಾ ಶ್ರೀಲಂಕಾದಲ್ಲೇ ಮುಂದುವರೆಯಲಿದ್ದಾರೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಬ್ಬರನ್ನೂ ಶ್ರೀಲಂಕಾದಿಂದ ಇಂಗ್ಲೆಂಡ್‌ಗೆ ಕಳುಹಿಸುತ್ತಿಲ್ಲ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಿದ್ಧವಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು. ಹೀಗಾಗಿ ಭಾರತ ತಂಡ ನಿರ್ವಹಣಾ ಸಮಿತಿಯು ಭಾರತ ಕ್ರಿಕೆಟ್ ತಂಡದ ಆಡಳಿತಾಧಿಕಾರಿ ಗಿರೀಶ್ ಡೋಂಗ್ರೆಗೆ ಒಂದು ಪತ್ರ ಬರೆದು ಗಿಲ್‌ಗೆ ಬದಲಿ ಆಟಗಾರರನ್ನು ಕಳುಹಿಸಿಕೊಡುವಂತೆ ಕೋರಿಕೊಂಡಿತ್ತು.
ಪತ್ರದಲ್ಲಿ ಗಿಲ್ ಬದಲಿಗೆ ದೇವದತ್ ಪಡಿಕ್ಕಲ್ ಮತ್ತು ಪೃಥ್ವಿ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಡುವಂತೆ ಕೋರಿಕೊಳ್ಳಲಾಗಿತ್ತು. ಆದರೆ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಇದಕ್ಕೆ ಔಪಚಾರಿಕವಾಗಿ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಇದರರ್ಥ ಇಬ್ಬರನ್ನೂ ಶ್ರೀಲಂಕಾದಿಂದ ಇಂಗ್ಲೆಂಡ್‌ಗೆ ಕಳುಹಿಸಲು ಶರ್ಮಾಗೆ ಮನಸಿರಲಿಲ್ಲ.
ಅಲ್ಲದೆ ಇಂಗ್ಲೆಂಡ್‌ನಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್, ಮಯಾಂಕ್ ಅರ್ಗವಾಲ್, ರೋಹಿತ್ ಶರ್ಮಾ ಮತ್ತು ಅಭಿಮನ್ಯು ಈಶ್ವರನ್ ಇದ್ದಿದ್ದರಿಂದ ದೇವದತ್, ಪೃಥ್ವಿಯನ್ನು ಇಂಗ್ಲೆಂಡ್‌ಗೆ ಕಳುಹಿಸಲು ಬಿಸಿಸಿಐ ಒಪ್ಪಿಲ್ಲ. "ಪೃಥ್ವಿ ಮತ್ತು ಪಡಿಕ್ಕಲ್ ಇಬ್ಬರೂ 6 ಪಂದ್ಯಗಳ ಸರಣಿಗಾಗಿ ಶ್ರೀಲಂಕಾದಲ್ಲೇ ತಂಗಲಿದ್ದಾರೆ," ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications