Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್

India vs Sri lanka: revised schedule announced by BCCI: Bengaluru will host day-night Test

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾದ ಬಳಿಕ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸರಣಿ ಆರಂಭವಾಗಲಿದೆ. ಟಿ20 ಹಾಗೂ ಟೆಸ್ಟ್ ಮಾದರಿಯ ಸರಣಿ ಇದಾಗಿರಲಿದ್ದು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಈ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆಗೊಳಿಸಿದೆ.

ಫೆಬ್ರವರಿ ಕೊನೇಯ ವಾರದಲ್ಲಿ ಈ ಸರಣಿ ನಡೆಯಲಿದ್ದು ಶ್ರೀಲಂಕಾ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿ ಮೊದಲಿಗೆ ನಡೆಯಲಿದ್ದು ಅದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಒಟ್ಟು ನಾಲ್ಕು ತಾಣಗಳಲ್ಲಿ ಈ ಸರಣಿಯನ್ನು ಆಯೋಜಿಸಲಾಗುತ್ತಿದೆ. ಈ ನಾಲ್ಕು ತಾಣಗಳಲ್ಲಿ ಬೆಂಗಳೂರು ಕೂಡ ಒಂದಾಗಿದ್ದು ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇದು ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೂರನೇ ಡೇ-ನೈಟ್ ಟೆಸ್ಟ್ ಪಂದ್ಯವಾಗಿರಲಿದೆ. ಇದಕ್ಕೂ ಮುನ್ನ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಭಾರತ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದರೆ ನಂತರ 2021ರಲ್ಲಿ ಇಂಗ್ಲೆಂಡ್ ವಿರುದ್ಧ 2ನೇ ಡೇನೈಟ್ ಟೆಸ್ಟ್ ಪಂದ್ಯವನ್ನು ಆಡಿತ್ತು.

ಇದಕ್ಕೂ ಮುನ್ನ ಭಾರತ ಪ್ರವಾಸವನ್ನು ಕೈಗೊಳ್ಳಲಿರುವ ಶ್ರೀಲಂಕಾ ಟೆಸ್ಟ್ ಮಾದರಿಯೊಂದಿಗೆ ಸರಣಿ ಆಯೋಜಿಸಲು ನಿರ್ಧರಿಸಲಾಗಿತ್ತು. ಮೊದಲ ಟೆಸ್ಟ್ ಫೆಬ್ರವರಿ 25 ರಂದು ಹಾಗೂ 2ನೇ ಟೆಸ್ಟ್ ಮಾರ್ಚ್ 5ರಂದು ನಿಗದಿಪಡಿಸಲಾಗಿತ್ತು. ಆದರೆ ಶ್ರೀಲಂಕಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಟಿ20 ಸದಸ್ಯರನ್ನು ಬಯೋಬಬಲ್‌ನಿಂದ ಬಯೋಬಬಲ್‌ಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಸರಣಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಬದಲಾವಣೆಗೆ ಬಿಸಿಸಿಐ ಬಳಿ ಮನವಿ ಮಾಡಿಕೊಂಡಿತ್ತು. ಇದನ್ನು ಪುರಸ್ಕರಿಸಿರುವ ಬಿಸಿಸಿಐ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.

ಈ ಬಗ್ಗೆ ಮಂಗಳವಾರ ಬಿಸಿಸಿಐ ಪ್ರಕಟಣೆಯನ್ನು ಹೊರಡಿಸಿದ್ದು "ಶ್ರೀಲಂಕಾ ಮೊದಲಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದ್ದು ಅದಾದ ಬಳಿಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ" ಎಂದು ಮಾಹಿತಿ ನೀಡಿದೆ.

ಲಕ್ನೋದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಫೆಬ್ರವರಿ 24ರಂದು ನಡೆಯಲಿರುವ ಮೊದಲ ಟಿ20 ಪಂದ್ಯದ ಆತಿಥ್ಯ ವಹಿಸಿದ್ದರೆ ಫೆಬ್ರವರಿ 26 ಹಾಗೂ 27ರಂದು ಅಂತಿಮ ಎರಡು ಟಿ20 ಪಂದ್ಯಗಳು ಧರ್ಮಶಾಲಾದಲ್ಲಿ ಆಯೋಜನೆಯಾಗಲಿದೆ.

ಟಿ20 ಸರಣಿಯ ಬಳಿಕ ಟೆಸ್ಟ್ ಸರಣಿ ಆಯೋಜನೆಯಾಗಲಿದ್ದು ಮೊಹಾಲಿಯಲ್ಲಿ ಮಾರ್ಚ್ 4-8ರ ವರೆಗೆ ಈ ಪಂದ್ಯ ನಡೆಯಲಿದೆ. ಅದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12ಕ್ಕೆ ಆರಂಭವಾಗಲಿದ್ದು 16ರಂದು ಅಂತ್ಯವಾಗಲಿದೆ. ಈ ಪಂದ್ಯ ಅಹರ್ನಿಶಿ ಪಂದ್ಯವಾಗಿರಲಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಲಿರುವ 100ನೇ ಟೆಸ್ಟ್ ಪಂದ್ಯ ಇದಾಗಿರಲಿದೆ ಎಂಬುದು ಗಮನಾರ್ಹ.

Story first published: Wednesday, February 16, 2022, 10:11 [IST]
Other articles published on Feb 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+