IND vs SL 2nd ODI: ಲಂಕಾ ಅದ್ಭುತ ಆಟಕ್ಕೆ ಪಲ್ಟಿ ಹೊಡೆದ ರೋಹಿತ್ ಬಾಯ್ಸ್!
ಆಗಸ್ಟ್ 4 ಭಾನುವಾರ, ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಿತು . ಈ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 30 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು.
ಈ ಪಂದ್ಯದಲ್ಲಿ ಶ್ರೀಲಂಕಾದ ಜೆಫ್ರಿ ವಾಂಡರ್ಸೆ 6 ವಿಕೆಟ್ ಪಡೆಯುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಶ್ರೀಲಂಕಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಈ ಸರಣಿಯ ಮೊದಲ ಪಂದ್ಯ ಟೈ ಆಗಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 45.3 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲೌಟ್ ಆಯಿತು.
ಇದರೊಂದಿಗೆ ಶ್ರೀಲಂಕಾ 32 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತು. ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಭಾರತ ಮೊದಲು ಸೋಲು ಕಂಡಿದೆ.ಶ್ರೀಲಂಕಾ ಪರ ಕಮಿಂದು ಮೆಂಡಿಸ್ (40) ಮತ್ತು ಆರಂಭಿಕ ಅವಿಷ್ಕಾ ಫೆರ್ನಾಂಡೊ (40) ಅದ್ಭುತ ಪ್ರದರ್ಶನ ನೀಡಿದರು.
ಹೀಗಾಗಿ ಲಂಕಾ ತಂಡ 240 ರನ್ ಕಲೆ ಹಾಕಿತು. ಭಾರತದ ಪರ ವಾಷಿಂಗ್ಟನ್ ಸುದರ್ 3 ವಿಕೆಟ್ ಪಡೆದು ಮಿಂಚಿದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಉರುಳಿಸಿದು.
ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 64 ರನ್‌ಗಳನ್ನು ಹೊಡೆದರು. ರೋಹಿತ್ ಹೊರತಾಗಿ, ಅಕ್ಸರ್ ಪಟೇಲ್ 44 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 44 ರನ್ ಬಾರಿಸಿದರು.
ಇನ್ನು ಉಪನಾಯಕ ಶುಭಮನ್ ಗಿಲ್ ಕೂಡ 44 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 35 ರನ್ ಗಳಿಸಿದರು. ಇದರ ಹೊರತಾಗಿ ಭಾರತ ಪರ ಯಾವುದೇ ಬ್ಯಾಟರ್ಸ್ ಹೇಳಿಕೊಳ್ಳುವಂತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ವಿರಾಟ್ ಕೊಹ್ಲಿ (14), ಶಿವಂ ದುಬೆ (0), ಶ್ರೇಯಸ್ ಅಯ್ಯರ್ (7) ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್ (0) ಬೇಗ ಔಟಾದರು.
ಶ್ರೀಲಂಕಾದ 34 ವರ್ಷದ ಜೆಫ್ರಿ ವಾಂಡರ್ಸೆ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಟೀಮ್ ಇಂಡಿಯಾದ ಪ್ರಮುಖ 6 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಾಯಕ ಚರಿತ್ ಅಸಲಂಕಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications