ಭಾರತ vs ಶ್ರೀಲಂಕಾ: ಅಬ್ಬರಿಸಿದ ಇಶಾನ್, ರೋಹಿತ್, ಐಯ್ಯರ್; ಲಂಕಾಗೆ ಬೃಹತ್ ಗುರಿ ನೀಡಿದ ಭಾರತ

ಭಾರತ ಹಾಗೂ ಶ್ರಿಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಶ್ರೀಲಂಕಾ ತಂಡಕ್ಕೆ ಬೃಹತ್ ಗುರಿ ನಿಗದಿಪಡಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಲಿಳಿದ ಭಾರತದ ಪರ ಅಗ್ರ ಕ್ರಮಾಂಕದ ಆಟಗಾರರು ಅಬ್ಬರದ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರ ಇಶಾನ್ ಕಿಶನ್ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಸ್ಪೋಟಕ ಆಟ ಭಾರತೀಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್‌ಗೆ 111 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ 32 ಎಸೆತಗಳಲ್ಲಿ 44 ರನ್ ಗಳಿಸಿದ್ದ ರೋಹಿತ್ ಶರ್ಮಾ ಲಹಿರು ಕುಮಾರ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ಇಶಾನ್ ಕಿಶನ್ ಅವರನ್ನು ಶ್ರೇಯಸ್ ಐಯ್ಯರ್ ಸೇರಿಕೊಂಡು ಮತ್ತೊಂದು ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿದರು. ಇಶಾನ್ ಕಿಶನ್ ತಮ್ಮ ಸ್ಪೋಟಕ ಪ್ರದರ್ಶನವನ್ನು ಮುಂದುವರಿಸಿದ್ದರು.
ಆದರೆ 89 ರನ್‌ಗಳಿಸಿದ್ದ ಸಂದರ್ಭದಲ್ಲಿ ಇಶಾನ್ ಕೀಶನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಳ್ಳುವ ಮೂಲಕ ಶತಕ ಗಳಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡಿದ್ದಾರೆ. 56 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ 10 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದರು. ಶತಕ ಗಳಿಸಲು ವಿಫಲವಾದರು ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಸರನಿಯಲ್ಲಿ ಬ್ಯಾಟಿಂಗ್‌ನಲ್ಲಿ ಅನುಭವಿಸಿದ್ದ ಹಿನ್ನಡೆಯಿಂದ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದು ತಂಡಕ್ಕೆ ಸಕಾರಾತ್ಮಕ ಸಂಗತಿಯಾಗಿದೆ.
ಇನ್ನು ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡ ಬಳಿಕ ಶ್ರೇಯಸ್ ಐಯ್ಯರ್ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು. 28 ಎಸೆತಗಳನ್ನು ಎದುರಿಸಿದ ಶ್ರೇಯಸ್ ಐಯ್ಯರ್ 57 ರನ್‌ಗಳನ್ನು ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ರವೀಂದ್ರ ಜಡೇಜಾ 4 ಎಸೆತಗಳಲ್ಲಿ 3 ರನ್ ಗಳಿಸಿ ಐಯ್ಯರ್ ಜೊತೆಗೆ ಅಜೇಯವಾಗುಳಿದರು. ಈ ಮೂಲಕ ಭಾರತ ನಿಗದಿತ 20 ಓವರ್‌ಗಳಲ್ಲಿ 199 ರನ್‌ಗಳಿಸಿದೆ. ಇನ್ನು ಶ್ರೀಲಂಕಾ ತಂಡದ ಪರವಾಗಿ ಲಹಿರು ಕುಮಾರ ಹಾಗೂ ನಾಯಕ ಶನಕಾ ಒಂದೊಂದು ವಿಕೆಟ್ ಪಡೆದುಕೊಂಡರು.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್
ಬೆಂಚ್: ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್
ಶ್ರೀಲಂಕಾ ಪ್ಲೇಯಿಂಗ್ XI: ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್), ಜನಿತ್ ಲಿಯಾನಗೆ, ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ
ಬೆಂಚ್: ದನುಷ್ಕ ಗುಣತಿಲಕ, ಆಶಿಯಾನ್ ಡೇನಿಯಲ್, ಶಿರಾನ್ ಫೆರ್ನಾಂಡೋ, ಬಿನೂರ ಫೆರ್ನಾಂಡೋ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications