ಮುಂದಿನ ಟೆಸ್ಟ್ ಸರಣಿ: ಈ ನಾಲ್ವರಿಗೆ ನಿಮ್ಮ ಸಮಯ ಮುಗಿಯಿತು ತಂಡದಲ್ಲಿ ಸ್ಥಾನವಿಲ್ಲ ಎಂದ ಆಯ್ಕೆಗಾರರು!

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಹೀನಾಯ ಸೋಲನ್ನು ಕಂಡಿದ್ದ ಟೀಮ್ ಇಂಡಿಯಾ ಸದ್ಯ ತವರಿನಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಭಾಗವಹಿಸುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಮೊದಲಿಗೆ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಹೀಗೆ ಏಕದಿನ ಸರಣಿಯ ಗೆಲುವಿನೊಂದಿಗೆ ಯಶಸ್ಸಿನ ಹಾದಿಗೆ ಮರಳಿರುವ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯ ಹಾಗೂ ನಂತರ ಆರಂಭವಾಗಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯ ಫೆಬ್ರವರಿ 11ರಂದು ನಡೆಯಲಿದ್ದು, ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಫೆಬ್ರವರಿ 16ರಿಂದ ಫೆಬ್ರವರಿ 20ರವರೆಗೆ ನಡೆಯಲಿದೆ. ಹೀಗೆ ವೆಸ್ಟ್ ಇಂಡೀಸ್ ವಿರುದ್ಧದ ಎಲ್ಲಾ ಪಂದ್ಯಗಳು ಮುಗಿದ ನಂತರ ಶ್ರೀಲಂಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಫೆಬ್ರವರಿ ಕೊನೆಯ ವಾರ ಹಾಗೂ ಮಾರ್ಚ್ ಮೊದಲನೇ ವಾರದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಹೀಗೆ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೂಲಕ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದು ತಿಳಿಯಲಿದೆ. ನಾಯಕನ ರೇಸ್‌ನಲ್ಲಿ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಈ ಮೂವರು ಆಟಗಾರರು ಇದ್ದು ಆಯ್ಕೆಗಾರರು ರೋಹಿತ್ ಶರ್ಮಾ ಹೆಗಲಿಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಹಾಕುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದರ ಜತೆಗೆ ಇದೀಗ ಕ್ರೀಡಾ ಖಾಸಗಿ ವೆಬ್ ತಾಣವೊಂದು ನೀಡಿರುವ ಮಾಹಿತಿಯ ಪ್ರಕಾರ ಬಿಸಿಸಿಐನ ಆಯ್ಕೆಗಾರರು ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಫಾರ್ಮ್ ಕಳೆದುಕೊಂಡಿರುವ 4 ಆಟಗಾರರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡಲು ಕ್ರಮ ತೆಗೆದುಗೊಂಡಿದೆ ಎನ್ನಲಾಗುತ್ತಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ತಂಡದಿಂದ ಹೊರ ಬೀಳಲಿರುವ ಆ 4 ಆಟಗಾರರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿವೆ.

ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ಅವಧಿ ಮುಗಿಯಿತು
ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ ಭಾರತ ಟೆಸ್ಟ್ ತಂಡದ ಆಟಗಾರರಾಗಿದ್ದ ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ತಮ್ಮ ಪ್ರಮುಖ ಅವಧಿಯನ್ನು ದಾಟಿದ್ದು ಸದ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಷ್ಟು ಅರ್ಹರಾಗಿಲ್ಲ ಎಂದಿದ್ದಾರೆ. ಹಾಗೂ ವಯಸ್ಸು ಕೂಡ ಈ ಇಬ್ಬರ ಪರವಾಗಿ ಇಲ್ಲದೇ ಇರುವುದು ಸದ್ಯ ಈ ಇಬ್ಬರಿಗೂ ಮತ್ತೊಂದು ಅವಕಾಶ ತಂದುಕೊಡುವಲ್ಲಿ ಹಿನ್ನಡೆಯನ್ನುಂಟುಮಾಡಿದೆ. ಅಷ್ಟೇ ಅಲ್ಲದೆ ಮಂಗಳವಾರವೇ ಬಿಸಿಸಿಐನ ಆಯ್ಕೆಗಾರರು ಈ ಇಬ್ಬರೂ ಆಟಗಾರರಿಗೂ ಈ ಕುರಿತಾಗಿ ಮಾಹಿತಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕತೆಯೇನು?
ಸದ್ಯ ಆಯ್ಕೆಗಾರರು ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಈ ಇಬ್ಬರನ್ನು ಸಹ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಿದ್ದಾರೆ. ಇಶಾಂತ್ ಶರ್ಮ ಹಾಗೂ ವೃದ್ದಿಮಾನ್ ಸಹಾ ಇಬ್ಬರಿಗೂ ಕೂಡ ಈಗಾಗಲೇ ತಂಡದ ಆಯ್ಕೆಯಲ್ಲಿ ನಿಮ್ಮನ್ನು ಪರಿಗಣಿಸುವುದಿಲ್ಲ ಎಂದು ಹೇಳಿರುವ ಆಯ್ಕೆಗಾರರು ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಮತ್ತೆ ತಂಡ ಸೇರಬೇಕೆಂದರೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು ಎಂಬ ಷರತ್ತನ್ನು ಹಾಕಿದ್ದಾರೆ. ಹೀಗಾಗಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ.

ರಣಜಿ ಆಡಲು ಹಿಂದೇಟು ಹಾಕುತ್ತಿರುವ ವೃದ್ದಿಮಾನ್ ಸಹಾ
ಫೆಬ್ರವರಿ 17ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳದ ಪರ ಕಣಕ್ಕಿಳಿಯಬೇಕಾಗಿರುವ ವೃದ್ಧಿಮಾನ್ ಸಹಾ ಹಿಂದೇಟು ಹಾಕಿದ್ದಾರೆ. ಬಿಸಿಸಿಐ ಆಯ್ಕೆಗಾರರು ವೃದ್ದಿಮಾನ್ ಸಹಾಗೆ ಮತ್ತೆ ಅವಕಾಶಗಳು ಲಭಿಸುವುದಿಲ್ಲ ಎಂಬ ಸುದ್ದಿಯನ್ನು ತಿಳಿಸಿದ್ದೇ ವೃದ್ಧಿಮಾನ್ ಸಹಾ ಹಿಂದೆ ಸರಿಯಲು ಕಾರಣ ಎನ್ನಲಾಗುತ್ತಿದೆ. ಇನ್ನು ಈ 4 ಆಟಗಾರರಿಗೆ ಗೇಟ್ ಪಾಸ್ ನೀಡಲು ಮುಂದಾಗಿರುವ ಬಿಸಿಸಿಐನ ಆಯ್ಕೆಗಾರರು ಭಾರತ ಟೆಸ್ಟ್ ತಂಡಕ್ಕೆ ಯುವ ಆಟಗಾರರನ್ನು ಕರೆತರುವ ಯತ್ನ ಮಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications