Virat Kohli 100th test : ಭಾರತ vs ಶ್ರೀಲಂಕಾ ಟೆಸ್ಟ್ ಸರಣಿ: ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಕ್ಷಣಗಣನೆ

ಭಾರತ ಹಾಗೂ ಶ್ರೀಲಂಕಾ ತಂಡಗಳು ಇಂದು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಮೊಹಾಲಿಯಲ್ಲಿ ನಡೆಯಲಿರುವ ಈ ಪಂದ್ಯ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ಎಂಬುದು ಪ್ರಮುಖ ಅಂಶ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ವಿಶೇಷವಾಗಿಸಲಿದೆ ಎಂದು ರೋಹಿತ್ ಶರ್ಮಾ ಪಂದ್ಯದ ಹಿಂದಿನ ದಿನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನ್ನಾಡಿದ್ದರು.
ಇನ್ನು ಭಾರತ ಶ್ರೀಲಂಕಾ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಈ ಸರಣಿಯನ್ನು ರೋಹಿತ್ ಶರ್ಮಾ ಪಡೆ 3-0 ಅಂತರದಿಂದ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ಗೆಲುವಿನ ಲಯವನ್ನು ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸುವ ವಿಶ್ವಾಸದಲ್ಲಿ ಭಾರತೀಯ ತಂಡವಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಡ ಈ ಸರಣಿಯಲ್ಲಿ ಭಾರತಕ್ಕೆ ತಿರುಗೇಟು ನೀಡಲು ದೊರೆಯುವ ಎಲ್ಲಾ ಅವಕಾಶವನ್ನು ಕೂಡ ಬಳಸಿಕೊಳ್ಳುವ ವಿಶ್ವಾಸದಲ್ಲಿದೆ.
ಇನ್ನು ಈ ಸರಣಿಗೆ ಅನುಭವಿಗಳಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅಲಭ್ಯವಾಗಿದ್ದಾರೆ. ಈ ಎರಡು ಸ್ಥಾನಗಳಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎಂಬುದು ಟಾಸ್ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ. ಈ ಎರಡು ಸ್ಥಾನಗಳಿಗಾಗಿ ಶುಬ್ಮನ್ ಗಿಲ್, ಹನುಮ ವಿಹಾರಿ ಹಾಗೂ ಶ್ರೇಯಸ್ ಐಯ್ಯರ್ ಮಧ್ಯೆ ಸ್ಪರ್ಧೆಗಳಿದೆ.
ನಾಯಕನಾಗಿ ರೋಹಿತ್ ಶೃ್ಮಾಗೆ ಮೊದಲ ಟೆಸ್ಟ್: ಇನ್ನು ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ ಎಂಬುದು ಮಹತ್ವದ ಅಂಶ. ಇದೇ ಸಂದರ್ಭದಲ್ಲಿ ಟೆಸ್ಟ್ ತಂಡದ ಪೂರ್ಣಪ್ರಮಾಣದ ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸುತ್ತಿರುವ ಮೊದಲ ಪಂದ್ಯ ಎಂಬುದು ಕೂಡ ಗಮನಾರ್ಹ. ವೈಟ್‌ಬಾಲ್ ತಂಡದ ನಾಯಕನಾಗಿದ್ದ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡಕ್ಕೂ ನಾಯಕನನ್ನಾಗಿ ಇತ್ತೀಚೆಗಷ್ಟೇ ನೇಮಕ ಮಾಡಲಾಗಿದೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಪ್ರದರ್ಶಿಸಿದ ನಾಯಕತ್ವದ ಗುಣಗಳನ್ನು ಟೆಸ್ಟ್ ಸರಣಿಯಲ್ಲಿಯೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಭಾರತ ಸಂಪೂರ್ಣ ಸ್ಕ್ಬಾಡ್: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್, ಜಯಂತ್ ಯಾದವ್ , ಕುಲದೀಪ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್
ಶ್ರೀಲಂಕಾ ಸಂಪೂರ್ಣ ಸ್ಕ್ವಾಡ್: ದಿಮುತ್ ಕರುಣಾರತ್ನೆ (ನಾಯಕ), ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಲಹಿರು ಕುಮಾರ, ಸುರಂಗಾ ಲಕ್ಮಲ್, ಲಸಿತ್ ಎಂಬುಲ್ದೇನಿಯಾ, ಪ್ರವೀಣ್ ವಿಶ್ವ್ ಜಯವಿಕ್ರಮ, ದಿನೆಶ್ವ ಚಂದ್ರವಿಕ್ರಮ, ದಿನೆಶ್ವ ಜಯವಿಕ್ರಮ, ಚಾಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ದುಷ್ಮಂತ ಚಮೀರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications