Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SL: ಪ್ರಮುಖ ದಾಖಲೆ ಬರೆದ ಭಾರತ, ಲಂಕಾ ಹೆಸರಿಗೆ ಬೇಡದ ದಾಖಲೆ: 2ನೇ ಪಂದ್ಯದಲ್ಲಿ ಮುರಿದ 3 ದಾಖಲೆಗಳು!

India vs Sri Lanka: These 3 records were broken India vs Sri Lanka 2nd ODI at Eden Garden

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿದ ಬಳಿಕ ಬ್ಯಾಟಿಂಗ್ ವಿಭಾಗ ಒಂದು ಹಂತದಲ್ಲಿ ಕುಸಿದ ಕಾರಣ ಭಾರತಕ್ಕೂ ಸೋಲಿನ ಭೀತಿ ಉಂಟಾಗಿತ್ತು. ಆದರೆ ಕೆಎಲ್ ರಾಹುಲ್ ಅವರ ಸಮಯೋಚಿತ ಪ್ರದರ್ಶನ ಭಾರತ ಪಂದ್ಯ ಗೆಲ್ಲುವ ಜೊತೆಗೆ ಸರಣಿ ವಶಕ್ಕೆ ಪಡೆಯಲು ಕೂಡ ಕಾರಣವಾಯಿತು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನ ಈ ಸರಣಿಯ ಎರಡನೇ ಪಂದ್ಯದಲ್ಲಿ ಸರಣಿ ಗೆಲುವಿನ ಜೊತೆಗೆ ಕೆಲ ದಾಖಲೆಗಳು ಕೂಡ ಮುರಿಯಲ್ಪಟ್ಟಿದೆ. ಅವುಗಳ ಪೈಕಿ ಮೂರು ಪ್ರಮುಖ ದಾಖಲೆಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಬಾರಿ ಗೆಲುವು

ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಬಾರಿ ಗೆಲುವು

1979ರಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಲ್ಲಿ ಮುಖಾಮುಖಿಯಾದ ಬಳಿಕ ಅದ್ಭುತ ಮುಖಾಮುಖಿಗಳನ್ನು ಕಂಡಿದೆ. ಏಕದಿನ ಮಾದರಿಯಲ್ಲಿ ಏ ಎರಡು ತಂಡಗಳು ಒಟ್ಟು 164 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಶ್ರೀಲಂಕಾ 57 ಬಾರಿ ಗೆದ್ದುಕೊಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಸೋಲಿಸುವ ಮೂಲಕ 95ನೇ ಬಾರಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಂತಾಗಿದೆ. ಇದು ಒಂದೇ ಎದುರಾಳಿಯ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಸಾಧಿಸಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಜೊತೆಗೆ ಜಂಟಿಯಾಗಿ ದಾಖಲೆ ಬರೆದುಕೊಂಡಿದೆ. ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ಏಕದಿ ಮಾದರಿಯಲ್ಲಿ 95 ಗೆಲುವು ಸಾಧಿಸಿದ ದಾಖಲೆ ಹೊಂದಿದೆ.

ಮೊದಲ 50 ಪಂದ್ಯಗಳಲ್ಲಿ ಹಾರ್ದಿಕ್ ಅಪರೂಪದ ದಾಖಲೆ

ಮೊದಲ 50 ಪಂದ್ಯಗಳಲ್ಲಿ ಹಾರ್ದಿಕ್ ಅಪರೂಪದ ದಾಖಲೆ

ಇನ್ನು ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಬಾರತ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 50ನೇ ಏಕದಿನ ಪಂದ್ಯವನ್ನಾಡಿದ್ದು 53 ಎಸೆತಗಳಲ್ಲಿ 36 ರನ್‌ಗಳಿಸಿ ರಾಹುಲ್ ಜೊತೆಗೆ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಈ ಪಂದ್ಯದ ಬಳಿಕ ಭಾರತದ ಬ್ಯಾಟರ್‌ಗಳ ಪೈಕಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆಯೊಂದನ್ನು ಬರೆದುಕೊಂಡಿದ್ದಾರೆ. ಮೊದಲ 50 ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಸ್ಟ್ರೈಕ್‌ರೇಟ್ ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ದಾರೆ ಹಾರ್ದಿಕ್ ಪಾಂಡ್ಯ. ಹಾರ್ದಿಕ್ 113.6ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದಕ್ಕೂ ಮುನ್ನ ಭಾರತದ ದಿಗ್ಗಜ ಆಟಗಾರ ಕಪಿಲ್‌ದೇವ್ ಹೆಸರಿನಲ್ಲಿ ಈ ದಾಖಲೆಯಿತ್ತು.ಕಪಿಲ್‌ದೇವ್ ತಮ್ಮ ಮೊದಲ 50 ಓವರ್‌ಗಳಲ್ಲಿ 103.5ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಬೇಡ ದಾಖಲೆ ಬರೆದ ಲಂಕಾ

ಏಕದಿನ ಕ್ರಿಕೆಟ್‌ನಲ್ಲಿ ಬೇಡ ದಾಖಲೆ ಬರೆದ ಲಂಕಾ

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡ ಅತ್ಯಂತ ಕಳಪೆ ದಾಖಲೆಯನ್ನು ಬರೆದುಕೊಂಡಿದೆ. ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಟೀಮ್ ಇಂಡಿಯಾ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಸೋಲು ಅನುಭವಿಸಿದ ತಂಡ ಎನಿಸಿಕೊಂಡಿದೆ. ಆಡಿರುವ 880 ಪಂದ್ಯಗಳಲ್ಲಿ ಶ್ರೀಲಂಕಾ 437ನೇ ಸೋಲು ಅನುಭವಿಸುವ ಮೂಲಕ ಈ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಭಾರತ ತಂಡದ ಹೆಸರಿನಲ್ಲಿತ್ತು. ಭಾರತ 1022 ಏಕದಿನ ಪಂದ್ಯಗಳಲ್ಲಿ 436 ಸೋಲು ಅನುಭವಿಸಿದೆ.

ವಿಪರ್ಯಾಸವೆಂದರೆ ಟಿ20 ಮಾದರಿಯಲ್ಲಿಯೂ ಅತಿ ಹೆಚ್ಚು ಸೋಲು ಅನುಭವಿಸಿದ ತಂಡಗಳ ಪಟ್ಟಿಯಲ್ಲಿ ಶ್ರೀಲಂಕಾ ಬಾಂಗ್ಲಾದೇಶದ ಜೊತೆಗೆ ಜಂಟಿಯಾಗಿ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಟಿ20 ಮಾದರಿಯಲ್ಲಿ ಒಟ್ಟು 92 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

Story first published: Friday, January 13, 2023, 12:13 [IST]
Other articles published on Jan 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+