For Quick Alerts
ALLOW NOTIFICATIONS  
For Daily Alerts
 

ಅಂಡರ್-19 ಯೂತ್ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತ ಬೃಹತ್ ಮುನ್ನಡೆ

India vs Sri Lanka Under-19 Youth Test: India in the edge to win

ಹ್ಯಾಂಬಂಟೊಟ, ಜುಲೈ 26: ಶ್ರೀಲಂಕಾದ ಹ್ಯಾಂಬಂಟೊಟದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಅಂಡರ್-19 ಯೂತ್ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 297 ರನ್ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 613 ರನ್ ಪೇರಿಸಿತ್ತು. ಶ್ರೀಲಂಕಾ ಎಲ್ಲಾ ವಿಕೆಟ್ ಕಳೆದು 316ರನ್ ಪೇರಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ಅಥರ್ವ ತೈಡೆಯ ಶತಕ (177/172) ಮತ್ತು ಪವನ್ ಶಾ (282/332) ಅವರ ದ್ವಿಶತಕ ನೆರವಿನೊಂದಿಗೆ 128.5 ಓವರ್ ಗೆ 8 ವಿಕೆಟ್ ಕಳೆದು 613 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ತಂಡದ ಮೊತ್ತ ಹೆಚ್ಚಿಸುವಲ್ಲಿ ಆರ್ಯನ್ ಜುಯಾಲ್ (41/61), ನೇಹಲ್ ವಢೇರ (64/136) ಅವರ ರನ್ ಕೊಡುಗೆಯೂ ನೆರವಾಯಿತು.

ಇನ್ನಿಂಗ್ ಗೆ ಇಳಿದ ಶ್ರೀಲಂಕಾ ಯುವ ತಂಡದಿಂದ ಆರಂಭಿಕ ಆಟಗಾರ ಕಮಿಲ್ ಮಿಶಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 94 ಎಸೆತ ಎದುರಿಸಿದ ಮಿಶಾರ 44 ರನ್ ಗಳಿಸಿ ದೇಸಾಯಿ ಓವರ್ ನಲ್ಲಿ ಔಟಾದರು. ಪಸಿನುಂದ ಸೂರ್ಯಬಂದಾರ ಅವರ ಶತಕ (115/236) ಶ್ರೀಲಂಕ ರನ್ ಹೆಚ್ಚಳಕ್ಕೆ ಕಾರಣವಾಯಿತು.

ಅನಂತರ ಜಿಎಸ್ ದಿನುಷ (51), ಸ್ಯಾಂಡಮ್ ಮೆಂಡಿಸ್ (49) ತಕ್ಕ ಮಟ್ಟಿನ ರನ್ ಕೊಡುಗೆ ನೀಡಿದರಾದರೂ ಈ ನಾಲ್ವರನ್ನು ಬಿಟ್ಟು ಇತರ ಬ್ಯಾಟ್ಸ್ಮನ್ ಗಳ ಬೆಂಬಲವಿಲ್ಲದೆ ಶ್ರೀಲಂಕಾ ತಂಡ ಸೊರಗಿತು. 114.3 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದು ಶ್ರೀಲಂಕಾ 316 ರನ್ ಕಲೆ ಹಾಕಿ ಹಿನ್ನಡೆ ಅನುಭವಿಸಿತು.

ದ್ವಿತೀಯ ಇನ್ನಿಂಗ್ ನಡೆಯುತ್ತಿದೆ. 16 ಓವರ್ ಮುಕ್ತಾಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 42 ರನ್ ಪೇರಿಸಿತ್ತು.

Story first published: Thursday, July 26, 2018, 17:07 [IST]
Other articles published on Jul 26, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+