Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿತ್ರಗಳು: ದಂಬುಲಾಗೆ ಬಂದ ಕೊಹ್ಲಿ ಪಡೆಗೆ ಆತ್ಮೀಯ ಸ್ವಾಗತ

ದಂಬುಲಾ, ಆಗಸ್ಟ್ 18: ಆಗಸ್ಟ್ 20ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವಾಡಲು ದಂಬುಲಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅವರು ಬಂದಿದ್ದಾರೆ. ಕೊಹ್ಲಿ ಹಾಗೂ ಧೋನಿ ಜತೆಗೆ ಹಾರ್ದಿಕ್ ಕೂಡಾ ಬಂದಿದ್ದು, ಎಲ್ಲರಿಗೂ ಸಾಂಪ್ರದಾಯಿಕ ಸ್ವಾಗತ ಸಿಕ್ಕಿದೆ.

ವಿರಾಟ್ ಕೊಹ್ಲಿ ಅವರು ಇಂಗ್ಲೀಷ್ ಹ್ಯಾಟ್ ಹಾಕಿಕೊಂಡು ಸ್ಟೈಲಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಹ್ಲಿ, ಧೋನಿ ಅವರ ನಂತರ ಹಾರ್ದಿಕ್ ಪಾಂಡ್ಯ, ಉಪ ನಾಯಕ ರೋಹಿತ್ ಶರ್ಮ ಅವರು ಆಗಮಿಸಿದ್ದಾರೆ.

India Vs Sri Lanka: Virat Kohli, MS Dhoni arrive in Dambulla in style

ಕೆಂಪು ಟಿ-ಶರ್ಟ್ ನಲ್ಲಿ ಮಿಂಚುತ್ತಿದ್ದ ಧೋನಿ ಅವರು ಐಸ್ ಕ್ರೀಂ ತಿನ್ನುತ್ತಾ, ಸಾಂಪ್ರದಾಯಿಕ ಪುಷ್ಪವನ್ನು ಸ್ವೀಕರಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ಕೊಹ್ಲಿ ಪಡೆ ಈಗ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯವಾಡಲು ಸಜ್ಜಾಗಿದೆ. ಆಗಸ್ಟ್ 20ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಪಂದ್ಯಗಳು ನಡೆಯಲಿದ್ದು, ಏಕೈಕ ಟಿ20 ಪಂದ್ಯ ಸೆಪ್ಟೆಂಬರ್ 06ರಂದು ನಡೆಯಲಿದೆ.

ಟೆಸ್ಟ್ ಸರಣಿಯಲ್ಲಿ ಆಡಿದ್ದ ಮೊಹಮ್ಮದ್ ಶಮಿ, ಆರ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಉಮೇಶ್ ಯಾದವ್ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಮನೀಶ್ ಪಾಂಡೆ, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್, ಜಸ್ ಪ್ರೀತ್ ಬೂಮ್ರಾ ಅವರು ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+