Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್ ಇಂಡೀಸ್, 2ನೇ t20: Live ಸ್ಕೋರ್: ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ

India vs West Indies: 2nd t20I, Toss report and Playing XI details, Live score

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯ ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಆರಂಭವಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.

ಪಂದ್ಯ ನಿಗದಿಪಡಿಸಿದ ಸಮಯಕ್ಕಿಂತ ಕೆಲ ಗಂಟೆಗಳ ಮುನ್ನ ವೆಸ್ಟ್ ಇಂಡೀಸ್ ಮಂಡಳಿ ಮಾಧ್ಯಮ ಪ್ರಕಟನೆ ಮೂಲಕ ಪಂದ್ಯ ತಡವಾಗಿ ಆಂಭವಾಗುವುದನ್ನು ತಿಳಿಸಿತ್ತು. ವಿಳಂಬಕ್ಕೆ ತಂಡದ ಲಗೇಜ್ ಸೈಂಟ್ ಕಿಟ್ಸ್‌ಗೆ ತಡವಾಗಿ ಆಗಮಿಸುತ್ತಿರುವುದು ಕಾರಣ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಮೊದಲ ಪಂದ್ಯ ನಡೆದ ಟ್ರಿನಿಡಾಡ್‌ನಿಂದ ಸೈಂಟ್ ಕಿಟ್ಸ್‌ಗೆ ನಿಗದಿತ ಸಮಯಕ್ಕೆ ಆಟಗಾರರ ಸಾಮಾಗ್ರಿಗಳು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯ ಭಾರತೀಯ ಕಾಲಮಾನ ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದೀಗ ಇದು ಮತ್ತೆ ಒಂದು ಗಂಟೆಗಳಷ್ಟು ಕಾಲ ತಡವಾಗಿ ಆರಂಭವಾಗಿದಗದು ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಿದೆ.

Live score ಹೀಗಿದೆ:

1
54163

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯ ಸೈಂಟ್ ಕಿಟ್ಸ್‌ನಲ್ಲಿ ನಡೆಯಲಿದ್ದು ಪಂದ್ಯ ಮತ್ತಷ್ಟು ವಿಳಂಭವಾಗಿ ಆರಂಭವಾಗಲಿದೆ. ತಂಡಗಳ ಲಗೇಜ್ ಆಗಮಿಸುವುದು ತಡವಾಗಿರುವ ಕಾರಣ 8 ಗಂಟೆಗೆ ಆರಂಭವಾಗಬೇಕಿದ್ದ ಈ ಪಂದ್ಯವನ್ನು 10 ಗಂಟೆಗೆ ಆರಂಭಿಸುವುದಾಗಿ ವೆಸ್ಟ್ ಇಂಡೀಸ್ ಮಂಡಳಿ ಈ ಮೊದಲು ಅಧಿಕೃತ ಮಾಹಿತಿ ನೀಡಿತ್ತು. ಇದೀಗ ಮತ್ತೆ ಒಂದು ಗಂಟೆಗಳ ಕಾಲ ತಡವಾಗಿ ಆರಂಭವಾಗಲಿದೆ ಎಂದು ತಿಳಿಸಿದೆ.

ಪಂದ್ಯ ನಿಗದಿಪಡಿಸಿದ ಸಮಯಕ್ಕಿಂತ ಕೆಲ ಗಂಟೆಗಳ ಮುನ್ನ ವೆಸ್ಟ್ ಇಂಡೀಸ್ ಮಂಡಳಿ ಮಾಧ್ಯಮ ಪ್ರಕಟನೆ ಮೂಲಕ ಪಂದ್ಯ ತಡವಾಗಿ ಆಂಭವಾಗುವುದನ್ನು ತಿಳಿಸಿತ್ತು. ವಿಳಂಬಕ್ಕೆ ತಂಡದ ಲಗೇಜ್ ಸೈಂಟ್ ಕಿಟ್ಸ್‌ಗೆ ತಡವಾಗಿ ಆಗಮಿಸುತ್ತಿರುವುದು ಕಾರಣ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಮೊದಲ ಪಂದ್ಯ ನಡೆದ ಟ್ರಿನಿಡಾಡ್‌ನಿಂದ ಸೈಂಟ್ ಕಿಟ್ಸ್‌ಗೆ ನಿಗದಿತ ಸಮಯಕ್ಕೆ ಆಟಗಾರರ ಸಾಮಾಗ್ರಿಗಳು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯ ಭಾರತೀಯ ಕಾಲಮಾನ ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದೀಗ ಇದು ಮತ್ತೆ ಒಂದು ಗಂಟೆಗಳಷ್ಟು ಕಾಲ ತಡವಾಗಿ ಆರಂಭವಾಗಲಿದ್ದು ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಲಿದೆ.

ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಅವರ ಅದ್ಭುತ ಆಟದ ಪರಿಣಾಮವಾಗಿ ಭಾರತ ಬೃಹತ್ ಮೊತ್ತವನ್ನು ಪೇರಿಸಲು ಯಶಸ್ವಿಯಾಗಿತ್ತು. ಆದರೆ ಇದಕಗಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ವಿಂಡೀಸ್ ಬ್ಯಾಟಿಂಗ್‌ನಲ್ಲಿಯೂ ವೈಫಲ್ಯ ಅನುಭವಿಸಿ ಭಾರೀ ಅಂತರದಿಂದ ಸೋಲು ಕಂಡಿದೆ.

ಸ್ಕ್ವಾಡ್‌ಗಳು ಹೀಗಿದೆ
ವೆಸ್ಟ್ ಇಂಡೀಸ್ ತಂಡ: ಕೈಲ್ ಮೇಯರ್ಸ್, ಶಮರ್ಹ್ ಬ್ರೂಕ್ಸ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ರೋವ್ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಅಕೆಲ್ ಹೊಸೈನ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಹೇಡನ್ ವಾಲ್ಷ್, ಡೆವೊನ್ ಥಾಮಸ್, ಬ್ರಾಂಡನ್ ಶೆಫರ್ಡ್ ಕಿಂಗ್ ಡ್ರೇಕ್ಸ್

Team India ಆಟಗಾರರು ಅರ್ಶದೀಪ್ ಜೆರ್ಸಿ ತೊಡಲು ಇದೇ ಕಾರಣ | *Cricket | OneIndia Kannada

ಭಾರತ ತಂಡ: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್, ದೀಪಕ್ ಹೂಡಾ, ಇಶಾನ್ ಕಿಶನ್, ಆವೇಶ್ ಖಾನ್ , ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್

Story first published: Monday, August 1, 2022, 23:17 [IST]
Other articles published on Aug 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+