ಏಕದಿನ ಸರಣಿ: ಕಪಿಲ್ ದಾಖಲೆ ಮುರಿಯಲು ಜಡೇಜ ಸಜ್ಜು

ಬೆಂಗಳೂರು, ಅಕ್ಟೋಬರ್ 19: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿ ಅಕ್ಟೋಬರ್ 21ರಿಂದ ಆರಂಭವಾಗಲಿದೆ. ಬಹುಕಾಲದ ಬಳಿಕ ಆಲ್ ರೌಂಡರ್ ರವೀಂದ್ರ ಜಡೇಜ ಅವರು ತಂಡಕ್ಕೆ ಮರಳಿದಿದ್ದಾರೆ.
ಈ ಸರಣಿಯಲ್ಲಿ ಜಡೇಜ ಅವರು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ದಾಖಲೆ ಸರಿಗಟ್ಟುವ ಅವಕಾಶ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಅತಿ ಹೆಚ್ಚು ವಿಕೆಟ್ ಗಳಿಸಿರುವ ಕಪಿಲ್ ದೇವ್ ದಾಖಲೆ ಮುರಿಯಲು ಜಡೇಜಗೆ ಇನ್ನು 15 ವಿಕೆಟ್ ಗಳು ಬೇಕಿವೆ.
ಕಪಿಲ್ ಅವರು ವಿಂಡೀಸ್ ವಿರುದ್ಧ 42 ಪಂದ್ಯಗಳಿಂದ 3.62 ಸರಾಸರಿಯಂತೆ 43 ವಿಕೆಟ್ ಗಳಿಸಿ,ದಾಖಲೆ ಬರೆದಿದ್ದಾರೆ. ಜಡೇಜ ಅವರು ಇನ್ನು 29 ವಿಕೆಟ್ ಗಳನ್ನು ಮಾತ್ರ ಗಳಿಸಿದ್ದಾರೆ. ಆದರೆ, ಉತ್ತಮ ಲಯದಲ್ಲಿದ್ದು, ಈ ಸರಣಿಯಲ್ಲಿ 15 ವಿಕೆಟ್ ಗಳಿಸುವ ನಿರೀಕ್ಷೆಯಿದೆ
ಕಪಿಲ್ ನಂತರ ಅನಿಲ್ ಕುಂಬ್ಳೆ ಅವರು ಪಟ್ಟಿಯಲ್ಲಿದ್ದು, 41 ವಿಕೆಟ್ ಗಳಿಸಿದ್ದಾರೆ. ಹರ್ಭಜನ್ ಸಿಂಗ್ 33 ವಿಕೆಟ್ ಕಬಳಿಸಿದ್ದಾರೆ.
ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಜಡೇಜ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications