ಭಾರತ vs ಜಿಂಬಾಬ್ವೆ: 3ನೇ ಏಕದಿನ ಪಂದ್ಯದಲ್ಲೂ ಗೆಲ್ಲುತ್ತಾ ಭಾರತ? ಸಂಭಾವ್ಯ ಆಡುವ ಬಳಗ

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಕೂಡ ಭಾರತ ತಂಡ ಗೆದ್ದುಕೊಂಡಿದೆ. ಈ ಮೂಲಕ ಕೆಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು ವೈಟ್‌ವಾಶ್ ಮೇಲೆ ಚಿತ್ತ ನೆಟ್ಟಿದೆ. ಇನ್ನು ಸರಣಿಯ ಅಂತಿಮ ಪಂದ್ಯವಾಗಿರುವ ಕಾರಣ ಮತ್ತಷ್ಟು ಆಟಗಾರರಿಗೆ ಅವಕಾಶ ದೊರೆತರೂ ಅಚ್ಚರಿಯಿಲ್ಲ.
ಈ ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಭಾರತ ನಿರೀಕ್ಷೆಯಂತೆಯೇ ಸಂಪೂರ್ಣವಾಗಿ ಜಿಂಬಾಬ್ವೆ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಅದರಲ್ಲೂ ಭಾರತದ ಬೌಲಿಂಗ್ ವಿಭಾಗ ನೀಡಿದ ಪ್ರದರ್ಶನ ಗಮನಸೆಳೆದಿದ್ದು ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಎರಡನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕೇವಲ ಒಂದು ರನ್‌ಗೆ ವಿಕೆಟ್ ಕಳೆದುಕೊಂಡಿದ್ದು ಅವರಿಂದ ದೊಡ್ಡ ಮೊತ್ತದ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.

ಎರಡು ತಂಡಗಳ ಸ್ಕ್ವಾಡ್‌ಗಳು
ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.
ಜಿಂಬಾಬ್ವೆ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನ್ನೋಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವಾ, ವಿಕ್ಟರ್ ನ್ಯೌಚಿ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ

ಸಂಭಾವ್ಯ ಆಡುವ ಬಳಗ
ಭಾರತ: 1 ಶಿಖರ್ ಧವನ್, 2 ಕೆಎಲ್ ರಾಹುಲ್, 3 ಶುಬ್ಮನ್ ಗಿಲ್, 4 ಋತುರಾಜ್ ಗಾಯಕ್ವಾಡ್ / ರಾಹುಲ್ ತ್ರಿಪಾಠಿ, 5 ಸಂಜು ಸ್ಯಾಮ್ಸನ್, 6 ದೀಪಕ್ ಹೂಡಾ, 7 ಅಕ್ಸರ್ ಪಟೇಲ್ / ಶಹಬಾಜ್ ನದೀಮ್, 8 ಶಾರ್ದೂಲ್ ಠಾಕೂರ್, 9 ಅವೇಶ್ ಖಾನ್, 10 ಮೊಹಮ್ಮದ್ ಸಿರಾಜ್, 11 ಕುಲದೀಪ್ ಯಾದವ್.
ಜಿಂಬಾಬ್ವೆ: 1 ತಕುದ್ಜ್ವಾನಾಶೆ ಕೈಟಾನೊ, 2 ಮುಗ್ಧ ಕೈಯಾ, 3 ವೆಸ್ಲಿ ಮಾಧೆವೆರೆ, 4 ರೆಗಿಸ್ ಚಕಬ್ವಾ, 5 ಸಿಕಂದರ್ ರಾಜಾ, 6 ಸೀನ್ ವಿಲಿಯಮ್ಸ್, 7 ರಿಯಾನ್ ಬರ್ಲ್, 8 ಲ್ಯೂಕ್ ಜೊಂಗ್ವೆ, 9 ಬ್ರಾಡ್ ಇವಾನ್ಸ್, 10 ವಿಕ್ಟರ್ ನ್ಯಾಯುಚಿ, 11 ತನಕಾ ಚಿವಾಂಗಾ.

3ನೇ ಪಂದ್ಯ ಗೆಲ್ಲುವ ತಂಡ ಯಾವುದು?
ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಅಧಿಕಾರಯುತವಾಗಿಯೇ ಗೆದ್ದುಕೊಂಡಿದೆ. ಆದರೆ ಎರಡನೇ ಪಂದ್ಯದ ಬೌಲಿಂಗ್‌ನಲ್ಲಿ ಜಿಂಬಾಬ್ವೆ ಸಾಕಷ್ಟು ಸಕಾರಾತ್ಮಕ ಸಂಗತಿಗಳನ್ನು ಹೊಂದಿದ್ದನ್ನು ಗಮನಿಸಬಹುದು. ಭಾರತ ತಮಡದ ನಾಲ್ವರು ಬ್ಯಾಟರ್‌ಗಳನ್ನು ನೂರು ರನ್‌ಗಳನ್ನು ಗಳಿಸುವ ಮುನ್ನವೇ ಫೆವಿಲಿಯನ್‌ಗೆ ಅಟ್ಟಿತ್ತು. ಆದರೆ ಭಾರತ ತಂಡ ಈ ಸರಣಿಯನ್ನು ವೈಟ್‌ವಾಶ್ ಮಾಡುವುದರಿಂದ ತಪ್ಪಿಸಿಕೊಳ್ಳುವುದು ಜಿಂಬಾಬ್ವೆ ಪಾಲಿಗೆ ಸುಲಭವಿಲ್ಲ. ಅಂತಿಮ ಪಂದ್ಯದಲ್ಲಿ ಭಾರತ ಕೆಲ ಬದಲಾವಣೆಗಳನ್ನು ಮಾಡಿದರೂ ಜಿಂಬಾಬ್ವೆಗೆ ಮೇಲುಗೈ ಸಾಧಿಸುವುದು ಕಠಿಣವಾಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications