Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್: ಪಂದ್ಯದ ಮಧ್ಯೆ ಮೈದಾನಕ್ಕೆ ನುಗ್ಗಿದ ರೋಹಿತ್ ಶರ್ಮಾ ಅಭಿಮಾನಿಗೆ ಭಾರೀ ದಂಡ: ವರದಿ

India vs Zimbabwe: Fan Entering Field During match, fined 6.5 Lakhs INR: Reports

ಭಾರತದಲ್ಲಿ ಕ್ರಿಕೆಟ್ ಅಂದರೆ ಕೇವಲ ಆಟವಾಗಿ ಮಾತ್ರ ಉಳಿಯದೆ ಹಲವು ದಶಕಗಳೇ ಕಳೆದಿದೆ. ಇಲ್ಲಿ ಕ್ರಿಕೆಟ್ ಆಟಗಾರರನ್ನು ಕೇವಲ ಆಟಗಾರರಗಿ ಮಾತ್ರವೇ ನೋಡುವುದಿಲ್ಲ. ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್‌ನ ದೇವರು ಎಂದು ಕೊಂಡಾಡಿದರೆ ವಿರಾಟ್ ಕೊಹ್ಲಿಗೆ ಕಿಂಗ್ ಪಟ್ಟವನ್ನು ಅಭಿಮಾನಿಗಳು ನೀಡಿದ್ದಾರೆ. ಇನ್ನು ರೋಹಿತ್ ಶರ್ಮಾ ಹಿಟ್‌ಮ್ಯಾನ್ ಎಂದೇ ಅಭಿಮಾನಿಗಳ ಬಲಯದಲ್ಲಿ ಖ್ಯಾತವಾಗಿದ್ದಾರೆ. ಹೀಗೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಕೊಟ್ಯಂತರ ಅಭಿಮಾನಿಗಳು ಇದ್ದಾರೆ. ಇವರೆಲ್ಲರಿಗೂ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನನ್ನು ಹತ್ತಿರದಿಂದ ನೋಡಬೇಕು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಹೀಗೆ ನಾನಾ ರೀತಿಯ ಕನಸುಗಳು ಇರುವುದು ಸಾಮಾನ್ಯ. ಇಂಥಾ ಕನಸನ್ನು ನನಸು ಮಾಡಲು ಹೋದ ಕ್ರಿಕೆಟ್ ಅಭಿಮಾನಿಯೋರ್ವ ಈಗ ಪಜೀತಿಗೆ ಸಿಲುಕಿಕೊಂಡಿದ್ದಾನೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಭಾನುವಾರ ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಅಂತಿಮ ಪಂದ್ಯವನ್ನು ಆಡಿದೆ. ಈ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಪ್ರದರ್ಶನ ನಿಡಿದ್ದು ಬರಹತ್ ಅಂತರದಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ನಡೆಸುತ್ತಿದ್ದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದು ರೋಹಿತ್ ಶರ್ಮಾ ಅವರ ಸನಿಹಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಮೈದಾನದ ಸಿಬ್ಬಂದಿಗಳು ಆತನನ್ನು ಹಿಡಿದು ಮೈದಾನದ ಆಚೆಗೆ ಕಳುಹಿಸಿದ್ದರು.

ಅಭಿಮಾನಿಗೆ ಬಿತ್ತು ದಂಡದ ಬರೆ?

ಹೀಗೆ ಮೈದಾನಕ್ಕೆ ನುಗ್ಗಿದ ಅಭಿಮಾನಿಗೆ ಈಗ ಭಾರೀ ದಂಡದ ಬರೆ ಬಿದ್ದಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಅವರನ್ನು ಭೇಟಿಯಾಗುವ ದೃಷ್ಟಿಯಿಂದ ಮೈದಾನಕ್ಕೆ ನುಗ್ಗಿದ ಅಭಿಮಾನಿಗೆ ಮೈದಾನಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ 6.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಮೆಚ್ಚುಗೆಗೆ ಪಾತ್ರವಾದ ರೋಹಿತ್ ನಡೆ

ತನ್ನ ನೆಚ್ಚಿನ ಕ್ರಿಕೆಟ್ ಹೀರೋನನ್ನು ಹತ್ತಿರದಿಂದ ನೋಡಬೇಕು ಎಂದು ಕ್ರಿಕೆಟ್ ಅಭಿಮಾನಿ ಅಂಗಳಕ್ಕೆ ನುಗ್ಗಿದ್ದು ಪಂದ್ಯದ ಸಂದರ್ಭದಲ್ಲಿ ಗೊಂದಲಕ್ಕೂ ಕಾರಣವಾಗಿತ್ತು. ಆದರೆ ಯುವಕ ರೋಹಿತ್ ಶರ್ಮಾ ಅವರ ಸನಿಹಕ್ಕೆ ಬರುತ್ತಿದ್ದಂತೆಯೇ ಭಾವುಕನಾಗಿ ಕಣ್ಣುಗಳು ತುಂಬಿಕೊಂಡಿದ್ದು ಕಂಡುಬಂದಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಯುವನನ್ನು ಹಿಡಿದುಕೊಂಡು ಮೈದಾದಾಚೆಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದರೂ ನಾಯಕ ರೋಹಿತ್ ಶರ್ಮಾ ಆ ಅಭಿಮಾನಿಯನ್ನು ಸಂತೈಸಿ ಬೆನ್ನು ತಟ್ಟಿ ಕೆಲ ಮಾತುಗಳನ್ನು ಮಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಂದಿಗೆ ಈ ರೀತಿ ವರ್ತಿಸಿದ್ದು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನೀಡುತ್ತಿರುವ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹರ್ಷವನ್ನುಂಟು ಮಾಡಿದೆ. ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನಿಡುತ್ತಿರುವ ರೋಹಿತ್ ಶರ್ಮಾ ಪಡೆ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಸೂಪರ್ 12 ಹಂತದಲ್ಲಿ ಆಡಿದ 5 ಪಂದ್ಯಗಳ ಪೈಕಿ 4 ಗೆಲುವು ಸಾಧಿಸಿರುವ ಭಾರತ 8 ಅಂಕಗಳೊಂದಿಗೆ ಅಗ್ರಸ್ಥಾಇಯಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಗುರುವಾರ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣೆಸಾಡಲಿದೆ.

ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯುಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್

Story first published: Sunday, November 6, 2022, 20:09 [IST]
Other articles published on Nov 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+