For Quick Alerts
ALLOW NOTIFICATIONS  
For Daily Alerts
 

Ind vs Zim 1st T20: ಬಿಷ್ಣೋಯ್-ಸುಂದರ್‌ ಸ್ಪಿನ್‌ ಸುಳಿಗೆ ನಲುಕಿದ ಜಿಂಬಾಬ್ವೆ; ಭಾರತಕ್ಕೆ ಸುಲಭ ಗುರಿ

ಜುಲೈ 6 ಶನಿವಾರ, ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಶುಭಮನ್‌ ಗಿಲ್‌ ನೇತೃತ್ವದ ಭಾರತ ತಂಡದ ಎದುರು ಸಿಕಂದರ್‌ ರಜಾ ಮುನ್ನೆಡೆಸುತ್ತಿರುವ ಜಿಂಬಾಬ್ವೆ ಆಲೌಟ್‌ ಆಗಿದೆ.

ರವಿ ಬಿಷ್ಣೋಯಿ ಸ್ಪಿನ್‌ ದಾಳಿಗೆ ಜಿಂಬಾಬ್ವೆ ಬ್ಯಾಟರ್ಸ್‌ ತತ್ತರಿಸಿ ಹೋದರು. ಟೀಮ್‌ ಇಂಡಿಯಾ ಎದುರು ಜಿಂಬಾಬ್ವೆ ತಂಡದಿಂದ ಪ್ರಬಲ ಪೈಪೋಟಿ ಕಂಡು ಬಂದರೂ, ಹೆಚ್ಚು ರನ್‌ಗಳಿಸುವಲ್ಲಿ ಬ್ಯಾಟರ್ಸ್‌ ವಿಫಲವಾದರು.

India vs Zimbabwe first T20 match First innings report

ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 115 ರನ್‌ಗಳಿಸಲಷ್ಟೇ ಶಕ್ತವಾಯಿತು. ಟೀಮ್‌ ಇಂಡಿಯಾ ಗೆಲುವಿಗೆ 116 ರನ್‌ಗಳ ಸುಲಭ ಗುರಿ ತಲುಪುವ ಅವಶ್ಯಕತೆಯಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್‌ ಇನೋಸೆಂಟ್ ಕೈಯಾ ಅವರು ಶೂನ್ಯಕ್ಕೆ ಔಟಾದರು. ಬಳಿಕ ಒಂದಾದ ವೆಸ್ಲಿ ಮಾಧೆವೆರೆ ಮತ್ತು ಬ್ರಿಯಾನ್ ಬೆನೆಟ್ ಚೇತರಿಕೆ ಆಟವಾಡಿದರು.

ಈ ವೇಳೆ ಬ್ರಿಯಾನ್ ಬೆನೆಟ್ 22 ರನ್‌ಗಳಿಸಿ ವಿಕೆಟ್‌ ಕಳೆದುಕೊಂಡರೆ, ಬಳಿಕ ವೆಸ್ಲಿ ಮಾಧೆವೆರೆ ಕೂಡ 21 ರನ್‌ಗಳಿಗೆ ಔಟಾದರು. ಇದಾದ ನಂತರ ಶುರುವಾದ ಜಿಂಬಾಬ್ವೆ ಬ್ಯಾಟರ್ಸ್‌ ಪೆವಿಲಿಯನ್‌ ಪರೇಡ್‌ ನಿಲ್ಲಲಿಲ್ಲ.

ನಾಯಕ ಸಿಕಂದರ್ ರಜಾ (17), ಡಿಯೋನ್ ಮೈಯರ್ಸ್ (23) ಗಳಿಸಿ ಔಟಾದರೆ, ಜೊನಾಥನ್ ಕ್ಯಾಂಪ್‌ಬೆಲ್, ವೆಲ್ಲಿಂಗ್ಟನ್ ಮಸಕಡ್ಜಾ ಮತ್ತು ಬ್ಲೆಸ್ಸಿಂಗ್ ಮುಜರಾಬಾನಿ ಯಾವುದೇ ರನ್‌ಗಳಿಸದೆ ಬಂದ ದಾರಿಗೆ ಸುಂಕವಿಲ್ಲದಂತೆ ವಿಕೆಟ್‌ ಕಳೆದುಕೊಂಡು ಕ್ರೀಸ್‌ನಿಂದ ನಿರ್ಗಮಿಸಿದರು. ಲ್ಯೂಕ್ ಜೊಂಗ್ವೆ ಕೇವಲ 1 ರನ್‌ ಹೊಡೆದು ಔಟಾದರು.

ಈ ಹಂತದಲ್ಲಿ ಜಿಂಬಾಬ್ವೆ ರನ್‌ ಹೆಚ್ಚಿಸಲು ಹೋರಾಡಿದ ಕ್ಲೈವ್ ಮದಂಡೆ ಅಜೇಯ 29 ರನ್‌ಗಳಿಸಿ ತಂಡದ ಪರ ಅತಿಹೆಚ್ಚು ಸ್ಕೋರರ್‌ ಆದರು.

ಟೀಮ್‌ ಇಂಡಿಯಾ ಆದ್ಭುತ ಬೌಲಿಂಗ್‌ ಪ್ರದರ್ಶನ ಕಂಡು ಬಂತು. ರವಿ ಬಿಷ್ಟೋಯಿ 4 ವಿಕೆಟ್‌ ಕಬಳಿಸಿ ಮಿಂಚಿದರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್‌ ಉರುಳಿಸಿದರು. ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ತಲಾ ಒಂದೊಂದು ವಿಕೆಟ್‌ ಪಡೆದರು.

ಭಾರತ vs ಜಿಂಬಾಬ್ವೆ ಪ್ಲೇಯಿಂಗ್‌-11

ಭಾರತ: ಶುಭಮನ್ ಗಿಲ್(ನಾಯಕ), ಅಭಿಷೇಕ್ ಶರ್ಮಾ, ಋತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್(ವಿಕೆಟ್‌ ಕೀಪರ್‌), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.

ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಇನೊಸೆಂಟ್ ಕೈಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್ಬೆಲ್, ಕ್ಲೈವ್ ಮದಂಡೆ (ವಿಕೆಟ್‌ಕೀಪರ್‌), ವೆಲ್ಲಿಂಗ್ಟನ್ ಮಸಕಡ್ಜಾ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಾಬಾನಿ, ಟೆಂಡೈ ಚಟಾರಾ.

Story first published: Saturday, July 6, 2024, 18:16 [IST]
Other articles published on Jul 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+