ಭಾರತ vs ಜಿಂಬಾಬ್ವೆ: 2ನೇ ಏಕದಿನ ಪಂದ್ಯ ಗೆಲ್ಲೋದು ಯಾರು? ಸಂಭಾವ್ಯ ಆಡುವ ಬಳಗ

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು ಎರಡನೇ ಪಂದ್ಯದ ಮೇಲೆ ಈಗ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿದ್ದು 10 ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಸುಲಭವಾಗಿ ವಶಕ್ಕೆ ಪಡೆದುಕೊಂಡಿದೆ. ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಜಿಂಬಾಬ್ವೆ ನೀಡಿದ 190 ರನ್‌ಗಳ ಗುರಿಯನ್ನು ವಿಕೆಟ್ ಕಳೆದುಕೊಳ್ಳದೆ ತಲುಪಿಸುವಲ್ಲಿ ಯಶಸ್ವಿಗಾಗಿದ್ದಾರೆ.
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾರಣ ಮೂರು ಒಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಸದ್ಯ 1-0 ಅಂತರದಿಂದ ಮುನ್ನಡೆಯಲ್ಲಿದೆ. ಇನ್ನು ಆತೊಥೆಯ ಜಿಂಬಾಬ್ವೆ ತಂಡಕ್ಕೆ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ. ಇತ್ತ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಇದೀಗ ಚೊಚ್ಚಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇತ್ತಂಡಗಳ ಸ್ಕ್ವಾಡ್‌ಗಳು
ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.
ಜಿಂಬಾಬ್ವೆ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನ್ನೋಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವಾ, ವಿಕ್ಟರ್ ನ್ಯೌಚಿ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ.

ಸಂಭಾವ್ಯ ಆಡುವ ಬಳಗ
ಭಾರತ ಸಂಭಾವ್ಯ ಬಳಗ: 1. ಶಿಖರ್ ಧವನ್, 2. ಶುಭಮನ್ ಗಿಲ್, 3. ಇಶಾನ್ ಕಿಶನ್, 4. ಕೆಎಲ್ ರಾಹುಲ್ (ನಾಯಕ), 5. ದೀಪಕ್ ಹೂಡಾ, 6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), 7. ಅಕ್ಷರ್ ಪಟೇಲ್, 8. ದೀಪಕ್ ಚಾಹರ್, 9. ಕುಲದೀಪ್ ಯಾದವ್, 10. ಪ್ರಸಿದ್ಧ್ ಕೃಷ್ಣ, 11. ಮೊಹಮ್ಮದ್ ಸಿರಾಜ್.
ಜಿಂಬಾಬ್ವೆ ಸಂಭಾವ್ಯ ಆಡುವ ಬಳಗ: 1. ಇನ್ನೋಸೆಂಟ್ ಕೈಯಾ, 2 ತಡಿವಾನಾಶೆ ಮರುನಾಮಿ, 3 ವೆಸ್ಲಿ ಮಾಧೆವೆರೆ, 4 ಸೀನ್ ವಿಲಿಯಮ್ಸ್, 5 ಸಿಕಂದರ್ ರಜಾ, 6 ರೆಗಿಸ್ ಚಕಬ್ವಾ (ನಾಯಕ/ ವಿಕೆಟ್ ಕೀಪರ್), 7 ರಯಾನ್ ಬರ್ಲ್, 8 ಲ್ಯೂಕ್ ಜೊಂಗ್ವೀ, 9 ಬ್ರಾಡ್ ಇವಾನ್ಸ್, 10 ರಿಚರ್ಡ್ ನ್ಗರ್ವಾ, 11 ವಿಕ್ಟರ್ ನ್ಯಾಯುಚಿ

ಎರಡನೇ ಪಂದ್ಯ ಗೆಲ್ಲೋದು ಯಾರು?
ಆತಿಥೇಯ ಜಿಂಬಾಬ್ವೆ ತಂಡ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ತೋರಿದ ಪ್ರತಿರೋಧವನ್ನು ಭಾರತ ತಂಡದ ವಿರುದ್ಧ ಪ್ರದರ್ಶಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಳಿಂಗ್ ಎರಡೂ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿ ಸಾಕಷ್ಟು ಒತ್ತಡಗಳಲ್ಲಿದೆ ಜಿಂಬಾಬ್ವೆ ತಂಡ. ಭಾರತ ತಂಡದ ಆಟಗಾರರಲ್ಲಿ ಸಾಕಷ್ಟು ಅನುಭವವಿದ್ದು ಈ ವಿಚಾರವಾಗಿಯೂ ತಂಡ ಮೇಲುಗೈ ಹೊಂದಿದೆ. ಈ ಎಲ್ಲಾ ಅಂಶಗಳನ್ನು ನೋಡಿದರೆ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿಯೂ ಗೆಲುವು ಸಾಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications