ಏಕದಿನ ಸರಣಿ: ಜಿಂಬಾಬ್ವೆಗೆ ಹಾರಿದ ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ

ಆಗಸ್ಟ್ 28ರಿಂದ ಜಿಂಬಾಬ್ವೆ ವಿರುದ್ಧ ಭಾರತ ತಂಡ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾ ತಂಡ ಬಿಂಬಾಬ್ವೆಗೆ ಪ್ರಯಾಣ ಬೆಳೆಸಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜಸ್ಪ್ರೀತ್ ಬೂಮ್ರಾ ಸೇರಿದಂತೆ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಈ ಸರಣಿಗೆ ತೆರಳುವ ಸಂದರ್ಭದ ಕೆಲ ಫೋಟೋಗಳನ್ನು ಬಿಸಿಸೈಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅನುಭವಿ ಆಟಗಾರ ಶಿಖರ್ ಧವನ್, ದೀಪಕ್ ಚಾಹರ್ ಮತ್ತು ಪ್ರಸಿದ್ಧ್ ಕೃಷ್ಣ ಮೊದಲ ಫೋಟೋದಲ್ಲಿ ಕಾಣಿಸಿಕೊಂಡಿದ್ದರೆ ನಂತರದ ಫೋಟೋದಲ್ಲಿ ಈ ಸರಣಿಗೆ ಭಾರತದ ಕೋಚ್ ಆಗಿರುವ ವಿವಿಎಸ್ ಲಕ್ಷ್ಮಣ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ರಾಹುಲ್ ತ್ರಿಪಾಠಿ ಮತ್ತು ಋತುರಾಜ್ ಗಾಯಕ್ವಾಡ್ ಕೂಡ ಇದ್ದಾರೆ.
ದ್ರಾವಿಡ್‌ಗೆ ವಿಶ್ರಾಂತಿ
ಆಗಸ್ಟ್ 22ರಂದು ಈ ಸರಣಿ ಅಂತ್ಯವಾಗಲಿದ್ದು ಈ ಸರಣಿಯಿಂದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಸರಣಿ ಮುಕ್ತಾಯವಾದ ಕೆಲವೇ ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ದ್ರಾವಿಡ್ ಬದಲಿಗೆ ಲಕ್ಷ್ಮಣ್ ಅವರನ್ನು ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ನೇಮಿಸಲಾಗಿದೆ.

ಟೀಮ್ ಇಂಡಿಯಾಗೆ ರಾಹುಲ್ ನಾಯಕ
ಇನ್ನು ಸುದೀರ್ಘ ಕಾಲ ಗಾಯದ ಕಾರಣದಿಂದಾಗಿ ವಿಶ್ರಾಂತಿಯಲ್ಲಿದ್ದ ಕೆಎಲ್ ರಾಹುಲ್ ಮತ್ತೆ ಆಡಲು ಸಮರ್ಥವಾಗಿದ್ದು ಈ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ತಂಡದ ನಾಯಕತ್ವದ ಹೊಣೆಗಾರಿಕೆ ಕೆಎಲ್ ರಾಹುಲ್ ಹೆಗಲೇರಿದೆ. ಇದಕ್ಕೂ ಮೊದಲು ಜುಲೈ 30ರಂದು ಈ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದಾಗ ಕೆಎಲ್ ರಾಹುಲ್ ಅವರು ಈ ತಂಡದಲ್ಲಿರಲಿಲ್ಲ. ಶಿಖರ್ ಧವನ್ ಅವರನ್ನು ತಂಡದ ನಾಯಕನನ್ನಾಗಿ ಘೋಷಣೆ ಮಾಡಲಾಗಿತ್ತು. ಬಳಿಕ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು ನಾಯಕತ್ವವನ್ನು ಕೂಡ ರಾಹುಲ್‌ಗೆ ನೀಡಲಾಗಿದೆ, ಧವನ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.

ಒಂದೇ ತಾಣದಲ್ಲಿ ನಡೆಯಲಿದೆ ಪಂದ್ಯ
ಇನ್ನು ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳು ಕೂಡ ಒಂದೇ ತಾಣದಲ್ಲಿ ನಡೆಯಲಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಈ ಮೂರು ಪಂದ್ಯಗಳು ಆಯೋಜನೆಯಾಗಲಿದ್ದು ಆಗಸ್ಟ್ 18, 20 ಹಾಗೂ 22ರಂದು ಈ ಪಂದ್ಯಗಳು ನಡೆಯಲಿದೆ.

ಭಾರತ ಸ್ಕ್ವಾಡ್ ಹೀಗಿದೆ
ಟೀಮ್ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ , ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications